ದುಬೈ : 2018ನೇ ಸಾಲಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳು ಟೂರ್ನಿಯಲ್ಲಿ ಆಡಲು ಸಿದ್ಧವಾಗಿವೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನಡುವೆ ಟೂರ್ನಿಯ ಮೊದಲ ಪಂದ್ಯ ಸೆಪ್ಟೆಂಬರ್ 15 ರಂದು ನಡೆಯಲಿದೆ. ಹಾಲಿ ಚಾಂಪಿಯನ್ ಭಾರತವು ಸೆಪ್ಟೆಂಬರ್ 19 ರಂದು ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು ಎದುರಿಸಲಿದೆ.
ಯುಎಇ ಆತಿಥ್ಯ ವಹಿಸುತ್ತಿರುವ 2018ರ ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸುತ್ತಿದೆ. ಆರು ತಂಡಗಳನ್ನು ಒಟ್ಟು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಕ್ವಾಲಿಫೈಯರ್ ತಂಡವೊಂದು ಇರಲಿದೆ. ಇನ್ನು ಕ್ವಾಲಿಫೈಯರ್ ಹಂತದಲ್ಲಿ ಯುಎಇ, ಸಿಂಗಾಪುರ, ಒಮಾನ್, ನೇಪಾಳ, ಮಲೇಷ್ಯಾ ಹಾಗೂ ಹಾಂಕಾಂಗ್ ತಂಡಗಳು ಪೈಪೋಟಿ ನಡೆಸಲಿದ್ದು, ಈ ತಂಡಗಳ ಪೈಕಿ ಒಂದು ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲಿದೆ.
ಹಾಗೆಯೇ 'ಬಿ' ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನ ತಂಡಗಳು ಸ್ಥಾನ ಪಡೆದುಕೊಂಡಿವೆ.
ಸೆಪ್ಟೆಂಬರ್ 15ರಂದು 2018ರ ಏಷ್ಯಾ ಕಪ್ ಟೂರ್ನಿಗೆ ಚಾಲನೆ
ಸೆಪ್ಟೆಂಬರ್ 15ರಂದು 2018ರ ಏಷ್ಯಾ ಕಪ್ ಟೂರ್ನಿ ಚಾಲನೆಗೊಳ್ಳಲಿದ್ದು, ದುಬೈನಲ್ಲಿ ನಡೆಯಲಿರುವ ಈ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯ ಮೊದಲ ಪಂದ್ಯದಲ್ಲಿ ಸೆಣಸಲಿದೆ. ಇನ್ನು ದುಬೈನಲ್ಲಿ ಸೆಪ್ಟೆಂಬರ್ 28ರಂದು ಫೈನಲ್ ಪಂದ್ಯ ನಡೆಯಲಿದೆ. ಪ್ರತಿ ಗುಂಪಿನಿಂದಲೂ ಅಗ್ರ ಎರಡು ತಂಡಗಳು 'ಸೂಪರ್ ಫೋರ್' ಹಂತಕ್ಕೆ ತೇರ್ಗಡೆಯನ್ನು ಹೊಂದಲಿದ್ದು, ಬಳಿಕ ಅಗ್ರ ಎರಡು ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಏಷ್ಯಾಕಪ್ ವೇಳಾಪಟ್ಟಿ ಕೆಳಕಂಡಂತಿದೆ:
ಗುಂಪು ಹಂತ:
ಸೆಪ್ಟೆಂಬರ್ 5: ಬಾಂಗ್ಲಾದೇಶ vs ಶ್ರೀಲಂಕಾ (ದುಬೈ)
ಸೆಪ್ಟೆಂಬರ್ 16: ಪಾಕಿಸ್ತಾನ vs ಕ್ವಾಲಿಫೈಯರ್ (ದುಬೈ)
ಸೆಪ್ಟೆಂಬರ್ 17: ಶ್ರೀಲಂಕಾ vs ಅಫ್ಘಾನಿಸ್ತಾನ (ಅಬುಧಾಬಿ)
ಸೆಪ್ಟೆಂಬರ್ 18: ಭಾರತ vs ಕ್ವಾಲಿಫೈಯರ್ ನಲ್ಲಿ ಸ್ಥಾನ ಪಡೆಯುವ ತಂಡ (ದುಬೈ)
ಸೆಪ್ಟೆಂಬರ್ 19: ಭಾರತ vs ಪಾಕಿಸ್ತಾನ (ದುಬೈ)
ಸೆಪ್ಟೆಂಬರ್ 20: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ಅಬುಧಾಬಿ)
ಸೂಪರ್ ಫೋರ್:
ಸೆಪ್ಟೆಂಬರ್ 21: ಗ್ರೂಪ್ 'ಎ' ವಿನ್ನರ್ಸ್ vs ಗ್ರೂಪ್ 'ಬಿ' ರನ್ನರ್ಸ್ (ದುಬೈ),
ಗ್ರೂಪ್ 'ಬಿ' ವಿನ್ನರ್ಸ್ vs ಗ್ರೂಪ್ 'ಎ' ರನ್ನರ್ಸ್ (ಅಬುಧಾಬಿ)
ಸೆಪ್ಟೆಂಬರ್ 23: ಗ್ರೂಪ್ 'ಎ' ವಿನ್ನರ್ಸ್ vs ಗ್ರೂಪ್ 'ಎ' ರನ್ನರ್ಸ್ (ದುಬೈ),
ಗ್ರೂಪ್ 'ಬಿ' ವಿನ್ನರ್ಸ್ vs ಗ್ರೂಪ್ 'ಬಿ' ರನ್ನರ್ಸ್ (ಅಬುಧಾಬಿ)
ಸೆಪ್ಟೆಂಬರ್ 25: ಗ್ರೂಪ್ 'ಎ' ವಿನ್ನರ್ಸ್ vs ಗ್ರೂಪ್ 'ಬಿ' ವಿನ್ನರ್ಸ್ (ದುಬೈ)
ಸೆಪ್ಟೆಂಬರ್ 26: ಗ್ರೂಪ್ 'ಎ' ರನ್ನರ್ಸ್ vs ಗ್ರೂಪ್ 'ಬಿ' ರನ್ನರ್ಸ್ (ಅಬುಧಾಬಿ)
ಸೆಪ್ಟೆಂಬರ್ 28: ಅಂತಿಮ ಪಂದ್ಯ(ದುಬೈ)