ವಿಶ್ವಕಪ್’ನಲ್ಲಿ ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ದಾಖಲೆಗಳು ಯಾವುವು ಗೊತ್ತಾ?

Unbeaten Records in the World Cup: 2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿದ್ದು, ಈ ಬಾರಿ ಹಾಲಿ ಚಾಂಪಿಯನ್ಸ್ ಆಗಿ ಕಣಕ್ಕಿಳಿಯಲಿದ್ದಾರೆ, ಮತ್ತೊಂದೆಡೆ ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆಂದು ಅನೇಕ ದಿಗ್ಗಜರು ಹೇಳಿಕೆಯನ್ನು ನೀಡಿದ್ದಾರೆ.

Written by - Bhavishya Shetty | Last Updated : Oct 4, 2023, 05:37 PM IST
    • ಅಕ್ಟೋಬರ್ 5ರಿಂದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭ
    • ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳ ಬಗ್ಗೆ ಮಾಹಿತಿ
    • ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು…
ವಿಶ್ವಕಪ್’ನಲ್ಲಿ ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ದಾಖಲೆಗಳು ಯಾವುವು ಗೊತ್ತಾ? title=
Unbeaten Records in the World Cup

Unbeaten Records in the World Cup: ಕೆಲವೇ ದಿನಗಳಲ್ಲಿ ಅಂದರೆ ಅಕ್ಟೋಬರ್ 5ರಿಂದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗಲಿದ್ದು, ಈ ಮಹಾ ಈವೆಂಟ್’ಗೆ ಭಾರತದ ಆತಿಥ್ಯವಿದೆ. ಈ ಬಾರಿಯ ವಿಶ್ವಕಪ್ 13ನೇ ಆವೃತ್ತಿಯಾಗಿದ್ದು, 10 ತಂಡಗಳು ಕ್ರೀಡಾ ಲೋಕಕ್ಕೆ ವೈಭವವನ್ನು ತುಂಬಲಿದೆ.

ಇನ್ನು 2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿದ್ದು, ಈ ಬಾರಿ ಹಾಲಿ ಚಾಂಪಿಯನ್ಸ್ ಆಗಿ ಕಣಕ್ಕಿಳಿಯಲಿದ್ದಾರೆ, ಮತ್ತೊಂದೆಡೆ ಆಸ್ಟ್ರೇಲಿಯಾ, ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳೆಂದು ಅನೇಕ ದಿಗ್ಗಜರು ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಯಾರು ಗೊತ್ತಾ?

ಈ ಎಲ್ಲದರ ಮಧ್ಯೆ ಈ ವಿಶ್ವಕಪ್ ವಿಶೇಷ ವರದಿಯಲ್ಲಿ ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗದ ವಿಶ್ವಕಪ್ ದಾಖಲೆಗಳ ಬಗ್ಗೆ ಮಾಹಿತಿಯನ್ನು ಪ್ರಸ್ತುತಪಡಿಸಲಿದ್ದೇವೆ.

ವಿಶ್ವಕಪ್‌’ನಲ್ಲಿ ನಾಲ್ಕು ಸತತ ಶತಕಗಳು:

2015 ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್’ಮನ್ ಕುಮಾರ್ ಸಂಗಕ್ಕಾರ ಸತತ ನಾಲ್ಕು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು. 105* (vs ಬಾಂಗ್ಲಾದೇಶ), 117* (vs ಇಂಗ್ಲೆಂಡ್), 104 (vs ಆಸ್ಟ್ರೇಲಿಯಾ) ಮತ್ತು 124 (vs ಸ್ಕಾಟ್ಲೆಂಡ್)

ಒಂದು ಓವರ್’ನಲ್ಲಿ 6 ಸಿಕ್ಸರ್:

2007 ರಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಅವರು ಒಂದು ಓವರ್’ನಲ್ಲಿ 6 ಸಿಕ್ಸರ್ ಬಾರಿಸಿ, ವಿಶಿಷ್ಟ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ನೆದರ್ಲ್ಯಾಂಡ್ಸ್ ವಿರುದ್ಧ ಸೃಷ್ಟಿಸಿದ್ದರು. ಟಿ20 ವಿಶ್ವಕಪ್’ನಲ್ಲಿ .ಭಾರತೀಯ ಬ್ಯಾಟರ್ ಯುವರಾಜ್ ಸಿಂಗ್ ಈ ದಾಖಲೆ ಬರೆದಿದ್ದಾರೆ. ಆದರೆ ಏಕದಿನ ವಿಶ್ವಕಪ್’ನಲ್ಲಿ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಗಿಬ್ಸ್.

ನಾಲ್ಕು ಎಸೆತಕ್ಕೆ ನಾಲ್ಕು ವಿಕೆಟ್‌:

ಏಕದಿನ ಪಂದ್ಯಗಳಲ್ಲಿ ಓರ್ವ ಬೌಲರ್ ಸತತ ನಾಲ್ಕು ವಿಕೆಟ್ ಪಡೆದ ಉದಾಹರಣೆ ಇದೆ. 2007ರ ಗಯಾನಾದಲ್ಲಿ ನಡೆದ ಡಬ್ಲ್ಯೂಸಿಯಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ದಕ್ಷಿಣ ಆಫ್ರಿಕಾ ವಿರುದ್ಧ ಈ ಮೈಲಿಗಲ್ಲನ್ನು ಸಾಧಿಸಿದ್ದರು. ಶಾನ್ ಪೊಲಾಕ್, ಆಂಡ್ರೆ ಹಾಲ್, ಜಾಕ್ವೆಸ್ ಕಾಲಿಸ್ ಮತ್ತು ಮಖಾಯಾ ನ್ಟಿನಿ ಅವರ ವಿಕೆಟ್ ಕಬಳಿಸಿದ್ದರು.

ಅತ್ಯಧಿಕ ವೈಯಕ್ತಿಕ ಸ್ಕೋರ್:

ಫೆಬ್ರವರಿ 2015 ರಂದು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಡಬಲ್-ಸೆಂಚುರಿ ಬಾರಿಸಿದರು. ಇದು ಅತ್ಯಧಿಕ ವೈಯಕ್ತಿಕ ಡಬ್ಲ್ಯೂಸಿ ಸ್ಕೋರ್ ಆಗಿ ಉಳಿದಿದೆ.

ಒಂದು ಆವೃತ್ತಿಯಲ್ಲಿ ಹೆಚ್ಚು ವಿಕೆಟ್‌ ಪಡೆದ ಆಟಗಾರ:

ಆಸ್ಟ್ರೇಲಿಯಾದ ಸ್ಪೀಡ್ ಮರ್ಚೆಂಟ್ ಮಿಚೆಲ್ ಸ್ಟಾರ್ಕ್ 2019 ರ ಡಬ್ಲ್ಯೂಸಿಯನ್ನು ಅತಿ ಹೆಚ್ಚು ವಿಕೆಟ್ ಪಡೆದವರಾಗಿ (10 ಪಂದ್ಯಗಳಲ್ಲಿ 27 ವಿಕೆಟ್) ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಒಂದು ಓವರ್ ನಲ್ಲಿ 4, 6, 4, 1, 6, ! ಟೀಂ ಇಂಡಿಯಾಗೆ ಸಿಕ್ಕಾಯ್ತು ಮ್ಯಾಚ್ ಫಿನಿಶರ್ ! ಬ್ಯಾಟ್ ಹಿಡಿದರೆ ಸಾಕು ರನ್ ಮಳೆ 

ಏಕದಿನ ಡಬ್ಲ್ಯೂಸಿಯಲ್ಲಿ ಸತತ ಗೆಲುವುಗಳು:

ಸತತ ಡಬ್ಲ್ಯೂಸಿ ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ಈ ದಾಖಲೆಯನ್ನು ಹೊಂದಿದೆ. ಜೂನ್ 20, 1999 ಮತ್ತು ಮಾರ್ಚ್ 19, 2011 ರ ನಡುವೆ 27 ಬ್ಯಾಕ್-ಟು-ಬ್ಯಾಕ್ ಪಂದ್ಯಗಳನ್ನು ಗೆದ್ದಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News