ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2021 ಟೂರ್ನಿಯ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 54 ರನ್ ಗಳ ಗೆಲುವನ್ನು ಸಾಧಿಸಿದೆ.
ಟಾಸ್ ಗೆದ್ದು ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡಿದ ಮುಂಬೈ ತಂಡವು ಆರ್ಸಿಬಿಯನ್ನು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಗೆ ನಿಯಂತ್ರಿಸಿತು.ಬೆಂಗಳೂರು ಪರವಾಗಿ ವಿರಾಟ್ ಕೊಹ್ಲಿ (Virat Kohli) 51, ಹಾಗೂ ಮ್ಯಾಕ್ಸ್ ವೆಲ್ 56 ರನ್ ಗಳನ್ನು ಗಳಿಸಿದರು.
ಇದನ್ನೂ ಓದಿ : IPL 2021 : ಮೊದಲ ಐಪಿಎಲ್ ಗೆಲ್ಲುವಿನತ್ತ ದಾಪುಗಾಲಿಡುತ್ತಿದೆ RCB
ಮುಂಬೈ ಇಂಡಿಯನ್ಸ್ ಪರವಾಗಿ ಬುಮ್ರಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಬೆಂಗಳೂರಿನ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇದೇ ವೇಳೆ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ ಏಕೈಕ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
Hardik Pandya ✅
Kieron Pollard ✅
Rahul Chahar ✅DO NOT MISS: The sensational hat-trick from @HarshalPatel23 🔥 🔥 #RCBvMI #VIVOIPL @RCBTweets
Watch 🎥🔽https://t.co/GujBG6Cxid
— IndianPremierLeague (@IPL) September 26, 2021
ಇದನ್ನೂ ಓದಿ : T20I World Cup: ವಿಶ್ವಕಪ್ ನಂತರ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯಲಿರುವ ವಿರಾಟ್ ಕೊಹ್ಲಿ
ಬೆಂಗಳೂರು ತಂಡವು ನೀಡಿದ 166 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಹಾಗೂಡಿಕಾಕ್ ಅವರ 57 ರನ್ ಗಳ ಮೊದಲ ವಿಕೆಟ್ ಜೊತೆಯಾಟ ಒಂದು ಹಂತದಲ್ಲಿ ಪಂದ್ಯವು ಮುಂಬೈ ಇಂಡಿಯನ್ಸ್ ಪರವಾಗಿ ವಾಲುವಂತೆ ಮಾಡಿತ್ತು.ಆದರೆ ಚಹಾಲ್ ಹಾಗೂ ಹರ್ಶಾಲ್ ಪಟೇಲ್ ಅವರು ಕ್ರಮವಾಗಿ 3,4 ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಈ ಇಬ್ಬರು ಆಟಗಾರರ ಮಾರಕ ಬೌಲಿಂಗ್ ದಾಳಿಯಿಂದಾಗಿ ಮುಂಬೈ ತಂಡದ ವಿಕೆಟ್ ಗಳು ತಲೆಗರಲೇಯಂತೆ ಉರುಳಿದವು.
ಕೊನೆಗೆ ಮುಂಬೈ ಇಂಡಿಯನ್ಸ್ ತಂಡವು 18.1 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 111 ರನ್ ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.