Sourav Ganguly : ಗಂಗೂಲಿಗೆ ಈ ಇಬ್ಬರ ಆಟಗಾರರ ಮೇಲೆ ಅಸಮಾಧಾನ! ಅದಕ್ಕೆ ಟೀಂನಿಂದ ಹೊರಗೆ

ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಈ ವಿಷಯದಿಂದ ತುಂಬಾ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಗಂಗೂಲಿ ಕೆಲವು ಆಟಗಾರರನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದ್ದಾರೆ.

Written by - Channabasava A Kashinakunti | Last Updated : Feb 3, 2022, 06:07 PM IST
  • ಈ ಆಟಗಾರರ ಬಗ್ಗೆ ಸೌರವ್ ಗಂಗೂಲಿ ಅಸಮಾಧಾನ
  • ತಂಡದಿಂದ ಕೈಬಿಡುವ ಸೂಚನೆ
  • ರಣಜಿ ಆಡಲು ಸಲಹೆ
Sourav Ganguly : ಗಂಗೂಲಿಗೆ ಈ ಇಬ್ಬರ ಆಟಗಾರರ ಮೇಲೆ ಅಸಮಾಧಾನ! ಅದಕ್ಕೆ ಟೀಂನಿಂದ ಹೊರಗೆ title=

ನವದೆಹಲಿ : ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಎರಡು ಸರಣಿಗಳಲ್ಲಿ ಮುಖಭಂಗ ಅನುಭವಿಸಿದೆ. ಮೊದಲು ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿದ್ದರೆ, ಆ ನಂತರ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಸೋತಿತ್ತು. ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಈ ವಿಷಯದಿಂದ ತುಂಬಾ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಗಂಗೂಲಿ ಕೆಲವು ಆಟಗಾರರನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದ್ದಾರೆ.

ಗಂಗೂಲಿ ಈ ಇಬ್ಬರಾರು ಆಟಗಾರರನ್ನು ಟೀಂನಿಂದ ಹೊರಗಿಡಲು ಪ್ಲಾನ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ ಹಿರಿಯ ಟೆಸ್ಟ್ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು ರಣಜಿ ಟ್ರೋಫಿಯಲ್ಲಿ ಆಡುತ್ತಾರೆ ಮತ್ತು ಸಾಕಷ್ಟು ರನ್ ಗಳಿಸುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-1 ಸರಣಿ ಸೋತಾಗ, ರಹಾನೆ ಮತ್ತು ಪೂಜಾರ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 136 ಮತ್ತು 135 ರನ್ ಗಳಿಸಿದರು. ರಣಜಿ ಟ್ರೋಫಿಯುವು ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ಗಳಿಗಿಂತ ಸ್ವಲ್ಪ ಮುಂಚಿತವಾಗಿ ನಡೆಯಲಿದೆ, ಏಕೆಂದರೆ ಇಬ್ಬರೂ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದ್ದಾರೆ.

ಇದನ್ನೂ ಓದಿ : ಐಪಿಎಲ್ ಮೆಗಾ ಹರಾಜಿನಿಂದ ದಿಢೀರ್ ಹೊರ ಬಿದ್ದ RCB ಬೌಲರ್, ಬಯಲಾಯಿತು ಕಾರಣ

ಮೊದಲು ರಣಜಿ ಆಡಲು ಸಲಹೆ

ಸ್ಪೋರ್ಟ್‌ಸ್ಟಾರ್ ನಲ್ಲಿ ಮಾತನಾಡಿದ ಸೌರವ್ ಗಂಗೂಲಿ(Sourav Ganguly), 'ಹೌದು, ಅವರು ತುಂಬಾ ಒಳ್ಳೆಯ ಆಟಗಾರ. ಆಶಾದಾಯಕವಾಗಿ ಅವರು ರಣಜಿ ಟ್ರೋಫಿಗೆ ಮರಳಲಿದ್ದಾರೆ  ಮತ್ತು ಬಹಳಷ್ಟು ರನ್ ಗಳಿಸುತ್ತಾರೆ, ಅವರು ಈ ಕೆಲಸ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದರಲ್ಲಿ ನನಗೆ ಯಾವುದೇ ತೊಂದರೆ ಕಾಣಿಸುತ್ತಿಲ್ಲ. ಭಾರತ ತಂಡದ ಮಾಜಿ ನಾಯಕ ಗಂಗೂಲಿ, 'ರಣಜಿ ಟ್ರೋಫಿ ಒಂದು ದೊಡ್ಡ ಪಂದ್ಯಾವಳಿ ಮತ್ತು ನಾವೆಲ್ಲರೂ ಪಂದ್ಯಾವಳಿಯನ್ನು ಆಡಿದ್ದೇವೆ. ಹಾಗಾಗಿ, ಅವರೂ ಅಲ್ಲಿಗೆ ಹಿಂತಿರುಗಿ ಬಂದು ಪ್ರದರ್ಶನ ನೀಡುತ್ತಾರೆ. ಅವರು ಈ ಹಿಂದೆ ಪಂದ್ಯಾವಳಿಗಳನ್ನು ಆಡಿದ್ದಾರೆ, ಅವರು ಕೇವಲ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದರು ಮತ್ತು ODI ಅಥವಾ ಸೀಮಿತ ಓವರ್‌ಗಳ ತಂಡದ ಭಾಗವಾಗಿರಲಿಲ್ಲ. ಹೀಗಾಗಿ ತೊಂದರೆ ಆಗುವುದಿಲ್ಲ’ ಎಂದರು.

ಮುಂದೂಡಿದ ರಣಜಿ ಟ್ರೋಫಿ 

2021/22 ರಲ್ಲಿ ನಡೆಯಲಿರುವ ರಣಜಿ ಟ್ರೋಫಿ(Ranji Trophy)ಯನ್ನು ನಡೆಸುವುದು ಸವಾಲಾಗಿತ್ತು ಎಂದು ಗಂಗೂಲಿ ಒಪ್ಪಿಕೊಂಡಿದ್ದಾರೆ. ಏಕೆಂದರೆ ಕೊರೋನಾ ಮೂರನೇ ಅಲೆ ಜನವರಿ 13 ರಿಂದ ಆರಂಭವಾದ ಕಾರಣ ಮುಂದೂಡಿತು. "ನಾವು ರಣಜಿ ಟ್ರೋಫಿಯ ಒಂದು ವರ್ಷವನ್ನು ಕಳೆದುಕೊಂಡಿದ್ದೇವೆ. ಇದು ಭಾರತದ ಪ್ರಮುಖ ಪಂದ್ಯಾವಳಿಯಾಗಿದೆ ಮತ್ತು ನಾವು ಯಾವಾಗಲೂ ಇದನ್ನು ಆಯೋಜಿಸಲು ಬಯಸುತ್ತೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News