Anil Kumble: ಟಿ-20 ವಿಶ್ವಕಪ್ ಬಳಿಕ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್..?!

ಟೀಂ ಇಂಡಿಯಾಗೆ ವಿದೇಶಿ ಕೋಚ್ ನೇಮಕ ಮಾಡುವುದು 2ನೇ ಆಯ್ಕೆಯಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   

Written by - Puttaraj K Alur | Last Updated : Sep 18, 2021, 07:49 AM IST
  • ಟಿ-20 ವಿಶ್ವಕಪ್ ನಂತರ ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳಾಗುವ ಸೂಚನೆಗಳಿವೆ
  • ಟಿ-20 ವಿಶ್ವಕಪ್ ಬಳಿಕ ರವಿಶಾಸ್ತ್ರಿಯವರ ಒಪ್ಪಂದದ ಅವಧಿ ಮುಗಿಯಲಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ
  • ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐ ಮನವಿ ಸಾಧ್ಯತೆ
Anil Kumble: ಟಿ-20 ವಿಶ್ವಕಪ್ ಬಳಿಕ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್..?!   title=
ಟೀಂ ಇಂಡಿಯಾದ ಕೋಚ್ ಆಗ್ತಾರಾ ಅನಿಲ್ ಕುಂಬ್ಳೆ?

ನವದೆಹಲಿ: ಟಿ-20 ವಿಶ್ವಕಪ್(ICC Men's T20 World Cup 2021) ನಂತರ ಟೀಂ ಇಂಡಿಯಾದಲ್ಲಿ ದೊಡ್ಡ ಬದಲಾವಣೆಗಳಾಗುವ ಸೂಚನೆಗಳಿವೆ. ಟಿ-20 ವಿಶ್ವಕಪ್ ನಂತರ ರವಿಶಾಸ್ತ್ರಿಯವರ ಒಪ್ಪಂದದ ಅವಧಿ ಮುಗಿಯಲಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತ ತಂಡ ಮುಂದಿನ ಕೋಚ್ ಯಾರಾಗಲಿದ್ದಾರೆಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.

ಟಿ-20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್(Team India Head Coach) ಸ್ಥಾನಕ್ಕೆ ರವಿಶಾಸ್ತ್ರಿ ರಾಜೀನಾಮೆ ನೀಡಿದ ಬಳಿಕ ಅವರ ಸ್ಥಾನವನ್ನು ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ತುಂಬಲಿದ್ದಾರೆ ಎನ್ನಲಾಗಿತ್ತು ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾದ ಮುಖ್ಯ ಹುದ್ದೆಗೆ ನೇಮಕ ಮಾಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಉತ್ಸುಕರಾಗಿದ್ದಾರೆಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದವು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ, ವಿವಿಎಸ್ ಲಕ್ಷ್ಮಣ್ ಜೊತೆಗೆ ಭಾರತೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಅನಿಲ್ ಕುಂಬ್ಲೆ ಅವರನ್ನು ಕೇಳಬಹುದು ಎಂದು ವರದಿಯಾಗಿದೆ.

2016-17ರ ನಡುವೆ 1 ವರ್ಷದ ಕಾಲ ಕುಂಬ್ಳೆ(Anil Kumble) ಭಾರತೀಯ ತಂಡದ ಕೋಚ್ ಆಗಿದ್ದಾಗ ಸಚಿನ್ ತೆಂಡೂಲ್ಕರ್, ಲಕ್ಷ್ಮಣ್ ಮತ್ತು ಗಂಗೂಲಿ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಶಾಸ್ತ್ರಿಯವರ ಬದಲಿಗೆ ಕುಂಬ್ಳೆಯವರನ್ನು ನೇಮಿಸಿತ್ತು. ಆದಾಗ್ಯೂ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ನಂತರ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ವೈಮನಸ್ಸು ಕುಂಬ್ಳೆ ಅವರ ರಾಜೀನಾಮೆಗೆ ಕಾರಣವಾಗಿತ್ತು. ಕುಂಬ್ಳೆ ಜೊತೆಗೆ ಬಿಸಿಸಿಐ ಲಕ್ಷ್ಮಣ್ ಅವರನ್ನು ಸಂಪರ್ಕಿಸಬಹುದು. ಲಕ್ಷ್ಮಣ್ ಅವರು ಕೆಲವು ವರ್ಷಗಳಿಂದ ಐಪಿಎಲ್ ತಂಡದ ಸನ್ ರೈಸರ್ಸ್ ಹೈದರಾಬಾದ್‌ನ ಮಾರ್ಗದರ್ಶಕರಾಗಿದ್ದಾರೆ. ಆದಾಗ್ಯೂ ಕುಂಬ್ಳೆ ಕೂಡ ನೆಚ್ಚಿನವರಾಗಿದ್ದರೂ ಲಕ್ಷ್ಮಣ್ ಕೂಡ ಮುಖ್ಯ ಕೋಚ್ ಹುದ್ದೆಯ ರೇಸ್ ನಲ್ಲಿದ್ದಾರೆಂದು ಹೇಳಲಾಗಿದೆ.

ಇದನ್ನೂ ಓದಿ: ನ್ಯೂಜಿಲೆಂಡ್ ಪಾಕಿಸ್ತಾನದ ಕ್ರಿಕೆಟ್ ನ್ನು ಕೊಲೆಗೈದಿದೆ- ಶೋಯಬ್ ಅಖ್ತರ್

‘ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದ ಅನಿಲ್ ಕುಂಬ್ಳೆ ಅವರನ್ನು ಮತ್ತೆ ಆ ಸ್ಥಾನಕ್ಕೆ ನೇಮಿಸಿ ಹಿಂದಿನ ತಪ್ಪನ್ನು ಬಿಸಿಸಿಐ ಸರಿಪಡಿಸುವ ಅಗತ್ಯವಿದೆ. ವಿರಾಟ್ ಕೊಹ್ಲಿ ಒತ್ತಡದಿಂದ ಅವರನ್ನು ತೆಗೆದುಹಾಕಿದ ರೀತಿಯು ಅತ್ಯುತ್ತಮ ಉದಾಹರಣೆಯಲ್ಲ. ಆದರೆ ಇದು ಕುಂಬ್ಳೆ ಅಥವಾ ಲಕ್ಷ್ಮಣ್(VVS Laxman) ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದಾರೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆಂದು ವರದಿಯಾಗಿದೆ.

ವಿಶ್ವಕಪ್ ನಂತರ ಟಿ-20 ನಾಯಕತ್ವ ತ್ಯಜಿಸುವುದಾಗಿ ಕೊಹ್ಲಿ(Virat Kohli) ಈಗಾಗಲೇ ಘೋಷಿಸಿದ್ದಾರೆ. ಅನುಭವಿ ಭಾರತೀಯ ತರಬೇತುದಾರನ್ನು ನೇಮಕ ಮಾಡುವುದು ಬಿಸಿಸಿಐನ ಮೊದಲ ಆಯ್ಕೆಯಾಗಿದೆ. ಕುಂಬ್ಳೆ ಮತ್ತು ಲಕ್ಷ್ಮಣ್ ಇಬ್ಬರೂ ಭಾರತೀಯ ಕ್ರಿಕೆಟ್‌ನಲ್ಲಿ  ಅಪಾರ ಅನುಭವ ಹೋಂದಿದ್ದಾರೆ. 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳ ಜೊತೆಗೆ ಉತ್ತಮ ಕೋಚಿಂಗ್ ಅನುಭವವನ್ನು ಅವರು ಹೊಂದಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಈ ಇಬ್ಬರು ಹಿರಿಯ ಅನುಭವಿಗಳು ಸಮರ್ಥರಾಗಿದ್ದಾರೆ.   

‘ಟೀಂ ಇಂಡಿಯಾ(Team India)ಗೆ ವಿದೇಶಿ ಕೋಚ್ ನೇಮಕ ಮಾಡುವುದು 2ನೇ ಆಯ್ಕೆಯಾಗಿದೆ. ಬಿಸಿಸಿಐನ ತರಬೇತುದಾರರ ಮಾನದಂಡವೆಂದರೆ ಆಟಗಾರರಾಗಿ ಉತ್ತಮ ದಾಖಲೆ ಮತ್ತು ತರಬೇತುದಾರ/ಮಾರ್ಗದರ್ಶನದ ಅನುಭವ ಹೊಂದಿರುವ ಆಯ್ದ ಕೆಲವರು ಮಾತ್ರ ಉನ್ನತ ಹುದ್ದೆಗೆ ಅರ್ಜಿ ಸಲ್ಲಿಸಬಹುದು’ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಭದ್ರತೆ ಕಾರಣದಿಂದ ಪಾಕ್ ಪ್ರವಾಸ ರದ್ದುಗೊಳಿಸಿದ ನ್ಯೂಜಿಲೆಂಡ್ ಕ್ರಿಕೆಟ್ ತಂಡ

ಮಾಜಿ ಆಟಗಾರ ವಿಕ್ರಮ್ ರಾಥೋರ್ ಕೋಚ್ ಹುದ್ದೆಯ ರೇಸ್ ನಲ್ಲಿದ್ದಾರೆಯೇ ಎಂಬ ಪ್ರಶ್ನೆಗೆ, ‘ಅವರು ಬಯಸಿದಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗುವ ಹೆಚ್ಚಿನ ಅನುಭವವನ್ನು ಹೊಂದಿಲ್ಲ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.  ‘ಆತ(ವಿಕ್ರಮ್ ರಾಥೋರ್) ಅತ್ಯುತ್ತಮ ಸಹಾಯಕ ತರಬೇತುದಾರ. ಆದಾಗ್ಯೂ ನಾವು ಹೊಸ ತರಬೇತುದಾರನನ್ನು ಆಯ್ಕೆ ಮಾಡಿದಾಗ, ಆತನು ತಾನಾಗಿಯೇ ಒಂದು ತಂಡವನ್ನು ಹೊಂದಿರುತ್ತಾನೆ. ಆದ್ದರಿಂದ ನಾವು ಕಾದು ನೋಡೋಣ’ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News