WATCH: ಕ್ರಿಕೆಟ್ ನಲ್ಲಿ ಎಂದಾದರೂ ಎರಡು ಕಡೆ ರನ್ ಔಟ್ ಆಗಿದ್ದು ನೋಡಿದ್ದೀರಾ?

ಭಾನುವಾರ ಸಿಡ್ನಿ ಥಂಡರ್ ವಿರುದ್ಧದ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಅಡಿಲೇಡ್ ಸ್ಟ್ರೈಕರ್ಸ್ ಓಪನರ್ ಜೇಕ್ ವೀಥರಾಲ್ಡ್ ಅವರು ಪಿಚ್‌ನ ಎರಡೂ ತುದಿಗಳಲ್ಲಿ ಕ್ರೀಸ್‌ನ ಎರಡು ಕಡೆ ಔಟಾದ ಕುಖ್ಯಾತಿಗೆ ಪಾತ್ರರಾದರು.

Last Updated : Jan 24, 2021, 03:54 PM IST
  • ಭಾನುವಾರ ಸಿಡ್ನಿ ಥಂಡರ್ ವಿರುದ್ಧದ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಅಡಿಲೇಡ್ ಸ್ಟ್ರೈಕರ್ಸ್ ಓಪನರ್ ಜೇಕ್ ವೀಥರಾಲ್ಡ್ ಅವರು ಪಿಚ್‌ನ ಎರಡೂ ತುದಿಗಳಲ್ಲಿ ಕ್ರೀಸ್‌ನ ಎರಡು ಕಡೆ ಔಟಾದ ಕುಖ್ಯಾತಿಗೆ ಪಾತ್ರರಾದರು.
  • ಒಬ್ಬ ಬ್ಯಾಟ್ಸ್‌ಮನ್‌ನನ್ನು ಒಂದು ಎಸೆತದಲ್ಲಿ ಎರಡು ಬಾರಿ ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ ಆದ್ದರಿಂದ ನಾನ್ ಸ್ಟ್ರೈಕ್ ನಲ್ಲಿದ್ದ ವೀಥರಾಲ್ದ್ ಅವರನ್ನು ಔಟ್ ಎಂದು ಘೋಷಿಸಲಾಯಿತು.
WATCH: ಕ್ರಿಕೆಟ್ ನಲ್ಲಿ ಎಂದಾದರೂ ಎರಡು ಕಡೆ ರನ್ ಔಟ್ ಆಗಿದ್ದು ನೋಡಿದ್ದೀರಾ?  title=
Photo Courtesy: Twitter

ನವದೆಹಲಿ: ಭಾನುವಾರ ಸಿಡ್ನಿ ಥಂಡರ್ ವಿರುದ್ಧದ ಬಿಗ್ ಬ್ಯಾಷ್ ಲೀಗ್ ಪಂದ್ಯದ ವೇಳೆ ಅಡಿಲೇಡ್ ಸ್ಟ್ರೈಕರ್ಸ್ ಓಪನರ್ ಜೇಕ್ ವೀಥರಾಲ್ಡ್ ಅವರು ಪಿಚ್‌ನ ಎರಡೂ ತುದಿಗಳಲ್ಲಿ ಕ್ರೀಸ್‌ನ ಎರಡು ಕಡೆ ಔಟಾದ ಕುಖ್ಯಾತಿಗೆ ಪಾತ್ರರಾದರು.

ಇದನ್ನೂ ಓದಿ: ರಾಹುಲ್ ದ್ರಾವಿಡ್ ಕಳುಹಿಸಿದ Email ನ್ನು ಕೇವಿನ್ ಪಿಟರ್ಸನ್ ಬಹಿರಂಗಪಡಿಸಿದ್ದೇಕೆ?

ಮೊದಲ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ, ಫಿಲಿಪ್ ಸಾಲ್ಟ್ ಬೌಲರ್ ಕ್ರಿಸ್ ಗ್ರೀನ್ ಕಡೆಗೆ ಹೊಡೆದರು, ಆಗ ಅದು ಸ್ಟಂಪ್ ಗೆ ತಗುಲಿತು, ಈ ಸಂದರ್ಭದಲ್ಲಿ ಕ್ರಿಸ್ ಬಿಟ್ಟಿದ್ದ ವೀಥರಾಲ್ದ್ ಅವರು ಮತ್ತೆ ರನ್ ಗಾಗಿ ಓಡಿದರು. ಆ ಸಂದರ್ಭದಲ್ಲಿ ಇನ್ನೊಂದು ಬದಿಯಲ್ಲಿಯೂ ಕೂಡ ಔಟ್ ಆದರು.ಆದಾಗ್ಯೂ, ಒಬ್ಬ ಬ್ಯಾಟ್ಸ್‌ಮನ್‌ನನ್ನು ಒಂದು ಎಸೆತದಲ್ಲಿ ಎರಡು ಬಾರಿ ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ ಆದ್ದರಿಂದ ನಾನ್ ಸ್ಟ್ರೈಕ್ ನಲ್ಲಿದ್ದ ವೀಥರಾಲ್ದ್ ಅವರನ್ನು ಔಟ್ ಎಂದು ಘೋಷಿಸಲಾಯಿತು.

ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ಫೀಲ್ಡಿಂಗ್ ಕೋಚ್ ಗೆ ವಿರಾಟ್ ಕೊಹ್ಲಿ ಕರೆ ಮಾಡಿ ಹೇಳಿದ್ದೇನು?

ಇದನ್ನು ಥರ್ಡ್ ಅಂಪೈರ್ ನಿರ್ಧಾರಕ್ಕೆ ಕೊಟ್ಟಾಗ ನಾನ್ ಸ್ಟ್ರೈಕ್ ನಲ್ಲಿದ್ದ  ವೀಥರಾಲ್ದ್ ಅವರ ಬ್ಯಾಟ್ ಕ್ರಿಸ್ ನಲ್ಲಿ ಇರದಿರುವುದರಿಂದ ಅವರನ್ನು ಔಟ್ ಎಂದು ಘೋಷಿಸಲಾಯಿತು.ಈ ಸಂದರ್ಭದಲ್ಲಿ ಅವರು 31 ರನ್ ಗಳಿಗೆ ಔಟ್ ಆಗಿ ಹೊರನಡೆದರು.

ಇದನ್ನೂ ಓದಿ: 'ಕುಟುಂಬಗಳನ್ನು ಅನುಮತಿಸದಿದ್ದರೆ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡುವುದಿಲ್ಲ' ಎಂದಿದ್ದ ಈ ವ್ಯಕ್ತಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News