ರಣಜಿ ಟ್ರೋಫಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಕಿಬುಲ್ ಗನಿ..!

ಬಿಹಾರದ 22 ವರ್ಷದ ಬ್ಯಾಟ್ಸಮನ್ ಸಕಿಬುಲ್ ಗನಿ ಪ್ರಥಮ ದರ್ಜೆಯ ಚೊಚ್ಚಲ ಕ್ರಿಕೆಟಿಗನ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

Written by - Zee Kannada News Desk | Last Updated : Feb 19, 2022, 01:56 AM IST
  • ಬಿಹಾರದ 22 ವರ್ಷದ ಬ್ಯಾಟ್ಸಮನ್ ಸಕಿಬುಲ್ ಗನಿ ಪ್ರಥಮ ದರ್ಜೆಯ ಚೊಚ್ಚಲ ಕ್ರಿಕೆಟಿಗನ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

Trending Photos

  ರಣಜಿ ಟ್ರೋಫಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಕಿಬುಲ್ ಗನಿ..! title=
Photo Courtesy: Twitter

ನವದೆಹಲಿ: ಬಿಹಾರದ 22 ವರ್ಷದ ಬ್ಯಾಟ್ಸಮನ್ ಸಕಿಬುಲ್ ಗನಿ ಪ್ರಥಮ ದರ್ಜೆಯ ಚೊಚ್ಚಲ ಕ್ರಿಕೆಟಿಗನ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ: By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!

ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾನಿಲಯ ಕ್ಯಾಂಪಸ್‌ 2ನೇ ಮೈದಾನದಲ್ಲಿ ಮಿಜೋರಾಂ ವಿರುದ್ಧದ ರಣಜಿ ಟ್ರೋಫಿ ಪ್ಲೇಟ್‌ ಗುಂಪಿನ ಪಂದ್ಯದಲ್ಲಿ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲೇ ತ್ರಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗಾನಿ ಅವರು ಕೇವಲ 405 ಎಸೆತಗಳಲ್ಲಿ 56 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 341 ರನ್‌ ಗಳಿಸಿದರು. ಶುಕ್ರವಾರ ದಂದು84.20ರ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದರು.

ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದ ಹಿಂದಿನ ಅತ್ಯಧಿಕ ಮೊತ್ತವೂ ಭಾರತೀಯರದ್ದಾಗಿತ್ತು. ಮಧ್ಯಪ್ರದೇಶದ ಅಜಯ್ ರೊಹೆರಾ ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ದಾಖಲೆಯನ್ನು ಹೊಂದಿದ್ದರು. ಅವರು ಡಿಸೆಂಬರ್ 2018 ರಲ್ಲಿ ಇಂದೋರ್‌ನಲ್ಲಿ ಹೈದರಾಬಾದ್ ವಿರುದ್ಧ ಅಜೇಯ 267 ರನ್ ಗಳಿಸಿದ್ದರು. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮುಂಬೈನ ಮಾಜಿ ನಾಯಕ ಅಮೋಲ್ ಮಜುಂದಾರ್. ಅವರು 1993-94 ಋತುವಿನಲ್ಲಿ ಚೊಚ್ಚಲ ದಾರಿಯಲ್ಲಿ 260 ರನ್ ಗಳಿಸಿದ್ದರು.

ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!

ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಮತ್ತು ಇದೀಗ ಪ್ರಿ-ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಂತವು ಫೆಬ್ರವರಿ 10 ರಿಂದ ಮಾರ್ಚ್ 15 ರವರೆಗೆ ನಡೆಯಲಿದೆ ಎಂದು ದೃಢಪಡಿಸಲಾಗಿದೆ.ಐಪಿಎಲ್ ನಂತರದ ಹಂತವು ಮೇ 30 ರಿಂದ ಜೂನ್ 26 ರವರೆಗೆ ನಡೆಯಲಿದೆ. ಈ ಋತುವಿನ ರಣಜಿ ಟ್ರೋಫಿಯು 62 ದಿನಗಳಲ್ಲಿ 64 ಪಂದ್ಯಗಳನ್ನು ಆಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News