ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಚೆಸ್ ವಿಶ್ವಕಪ್ನಲ್ಲಿ ರನ್ನರ್ ಅಪ್ ಆದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಪೋಷಕರಿಗೆ ಆನಂದ್ ಮಹೀಂದ್ರಾ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹೌದು, ಭಾರತದ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಪೋಷಕರಿಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಶ್ವಕಪ್ ಚೆಸ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಎದುರು ಪ್ರಜ್ಞಾನಂದ ಪರಾಭವಗೊಂಡಿದ್ದರು. ಸೋತರೂ ಸಹ ಪ್ರಜ್ಞಾನಂದ ತಮ್ಮ ಅದ್ಭುತ ಆಟದ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿದ್ದರು. ಪ್ರಜ್ಞಾನಂದರ ಗೆಲುವನ್ನು ಚೆಸ್ ಜಗತ್ತಿನಲ್ಲಿ ಗಮನಾರ್ಹ ಸಾಧನೆ ಎಂದು ಶ್ಲಾಘಿಸಲಾಗಿದೆ. ಚೆಸ್ ಕ್ರೀಡೆಯಲ್ಲಿ ಉದಯೋನ್ಮುಖ ತಾರೆ ಎಂದು ಗುರುತಿಸಲಾಗಿದೆ. ಹೀಗಾಗಿ ಪ್ರಜ್ಞಾನಂದರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಇದನ್ನೂ ಓದಿ: Aditya L-1: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋದಿಂದ ‘ಸೂರ್ಯ’ ಶಿಕಾರಿ!
ಪ್ರಧಾನಿ ಮೋದಿ ಕೂಡ ಪ್ರಜ್ಞಾನಂದರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಕೇವಲ 18 ವರ್ಷದ ಪ್ರಜ್ಞಾನಂದರ ಸಾಧನೆ ಮೆಚ್ಚಿ ಅನೇಕ ಗಣ್ಯರು ಟ್ವೀಟ್ ಮೂಲಕ ಶುಭ ಹಾರೈಸಿದ್ದರು. ಇದೇ ವೇಳೆ ಟ್ವೀಟರ್ ಬಳಕೆದಾರರೊಬ್ಬರು ಆನಂದ್ ಮಹೀಂದ್ರಾರಿಗೆ ಟ್ಯಾಗ್ ಮಾಡುವ ಮೂಲಕ ಪ್ರಜ್ಞಾನಂದರಿಗೆ Mahindra Thar ಗಿಫ್ಟ್ ಮಾಡುವಂತೆ ಮನವಿ ಮಾಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹಿಂದ್ರಾ ಅವರು ಎಲೆಕ್ಟ್ರಿಕ್ ಕಾರು ಉಡುಗೊಡೆ ನೀಡುವುದಾಗಿ ಘೋಷಿಸಿದ್ದಾರೆ.
Appreciate your sentiment, Krishlay, & many, like you, have been urging me to gift a Thar to @rpragchess
But I have another idea …
I would like to encourage parents to introduce their children to Chess & support them as they pursue this cerebral game (despite the surge in… https://t.co/oYeDeRNhyh pic.twitter.com/IlFIcqJIjm— anand mahindra (@anandmahindra) August 28, 2023
ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹಿಂದ್ರಾ, ‘ನಿಮ್ಮ ಭಾವನೆಯನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮಂತಹ ಅನೇಕರು ನನಗೆ ಪ್ರಜ್ಞಾನಂದರಿಗೆ ಥಾರ್ ಉಡುಗೊರೆಯಾಗಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನನ್ನ ಬಳಿ ಇನ್ನೊಂದು ಉಪಾಯವಿದೆ. ತಮ್ಮ ಮಕ್ಕಳನ್ನು ಚೆಸ್ಗೆ ಪರಿಚಯಿಸಲು ಮತ್ತು ಈ ಆಟವನ್ನು ಆಡಲು ತಮ್ಮ ಮಕ್ಕಳಿಗೆ ಪೋಷಕರು ಪ್ರೋತ್ಸಾಹಿಬೇಕೆಂದು ನಾನು ಬಯಸುತ್ತೇನೆ. ನಾವು XUV4OO EVಯನ್ನು ಪ್ರಜ್ಞಾನಂದರ ಪೋಷಕರಿಗೆ ಉಡುಗೊರೆಯಾಗಿ ನೀಡುತ್ತೇವೆ. ಪ್ರಜ್ಞಾನಂದರ ತಾಯಿ ನಾಗಲಕ್ಷ್ಮಿ ಮತ್ತು ತಂದೆ ರಮೇಶ್ ಬಾಬು ತಮ್ಮ ಮಗನ ಉತ್ಸಾಹವನ್ನು ಪೋಷಿಸಿದ್ದಕ್ಕಾಗಿ ಮತ್ತು ಆತನಿಗೆ ತಮ್ಮ ಅವಿರತ ಬೆಂಬಲ ನೀಡಿದ್ದಕ್ಕೆ ನಮ್ಮ ಕೃತಜ್ಞತೆಗೆ ಅರ್ಹರು’ ಎಂದು ಹೇಳಿದ್ದಾರೆ. ಆನಂದ್ ಮಹಿಂದ್ರಾ ಅವರ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮದರಸಾಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.