Cricket Records: ಆರ್.ಅಶ್ವಿನ್ ಹೆಸರಿನಲ್ಲಿವೆ ಈ ಆಸಕ್ತಿದಾಯಕ ದಾಖಲೆಗಳು...!

 Cricket Records: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್ 7 ರಿಂದ ನಡೆಯಲಿದೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು 500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೇ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

Written by - Manjunath N | Last Updated : Mar 5, 2024, 04:40 PM IST
  • ಅಶ್ವಿನ್ ಖಾತೆ ತೆರೆಯದೆ 74 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ದಾಖಲೆ ಬರೆದಿದ್ದಾರೆ
  • ಅನಿಲ್ ಕುಂಬ್ಳೆ (77) ನಂತರ ಟೆಸ್ಟ್‌ನಲ್ಲಿ ಯಾವುದೇ ಭಾರತೀಯ ಬೌಲರ್‌ಗೆ ಇದು ಎರಡನೇ ಅತ್ಯುತ್ತಮವಾಗಿದೆ
  • -ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಕೇವಲ 10 ನೋ-ಬಾಲ್‌ಗಳನ್ನು ಎಸೆದಿದ್ದಾರೆ
Cricket Records: ಆರ್.ಅಶ್ವಿನ್ ಹೆಸರಿನಲ್ಲಿವೆ ಈ ಆಸಕ್ತಿದಾಯಕ ದಾಖಲೆಗಳು...! title=

 Cricket Records: ಬೆಂಗಳೂರು: ರವಿಚಂದ್ರನ್ ಅಶ್ವಿನ್ ಅನಿಲ್ ಕುಂಬ್ಳೆ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವೇಳೆ ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯ ಅಶ್ವಿನ್ ವೃತ್ತಿ ಬದುಕಿನ 100ನೇ ಟೆಸ್ಟ್ ಪಂದ್ಯವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಮಾರ್ಚ್ 7 ರಿಂದ ನಡೆಯಲಿದೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು 500 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೇ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಈಗ ಭಾರತದ ಪರವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ 14ನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಹರ್ಭಜನ್ ಸಿಂಗ್, ಚೇತೇಶ್ವರ ಪೂಜಾರ, ವೀರೇಂದ್ರ ಸೆಹ್ವಾಗ್ ಅವರು ಭಾರತಕ್ಕಾಗಿ 100+ ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ.

ಇದನ್ನೂ ಓದಿ: ಗ್ರಾಮೀಣ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆರಿಸಿದ ರಾಜ್ಯ ಸರ್ಕಾರ

ಭಾರತದ ಪರವಾಗಿ 100 ಟೆಸ್ಟ್‌ಗಳನ್ನು ಆಡಿದ ಆಟಗಾರರು:

ಸಚಿನ್ ತೆಂಡೂಲ್ಕರ್ - 200 ಪಂದ್ಯಗಳು
ರಾಹುಲ್ ದ್ರಾವಿಡ್ - 163 ಪಂದ್ಯಗಳು
ವಿವಿಎಸ್ ಲಕ್ಷ್ಮಣ್ - 134 ಪಂದ್ಯಗಳು
ಅನಿಲ್ ಕುಂಬ್ಳೆ - 132 ಪಂದ್ಯಗಳು
ಕಪಿಲ್ ದೇವ್ - 131 ಪಂದ್ಯಗಳು
ಸುನಿಲ್ ಗವಾಸ್ಕರ್ - 125 ಪಂದ್ಯಗಳು
ದಿಲೀಪ್ ವೆಂಗ್‌ಸರ್ಕರ್ - 116 ಪಂದ್ಯಗಳು
ಸೌರವ್ ಗಂಗೂಲಿ - 113 ಪಂದ್ಯಗಳು
ವಿರಾಟ್ ಕೊಹ್ಲಿ - 113 ಪಂದ್ಯಗಳು
ಇಶಾಂತ್ ಶರ್ಮಾ - 105 ಪಂದ್ಯಗಳು
ಹರ್ಭಜನ್ ಸಿಂಗ್ - 103 ಪಂದ್ಯಗಳು
ಚೇತೇಶ್ವರ ಪೂಜಾರ - 103 ಪಂದ್ಯಗಳು
ವೀರೇಂದ್ರ ಸೆಹ್ವಾಗ್ - 103 ಪಂದ್ಯಗಳು

ಅಶ್ವಿನ್ ಅವರ ಹೆಸರಿನಲ್ಲಿವೆ ಈ ಅದ್ಭುತ ಸಾಧನೆಗಳು

-ಹಿರಿಯ ವಯಸ್ಸಿನಲ್ಲಿ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಪಡೆದ ಭಾರತೀಯ ಬೌಲರ್ ಎನ್ನುವ ದಾಖಲೆ ಅವರ ಹೆಸರಿನಲ್ಲಿದೆ.

-ಅಶ್ವಿನ್ ಯಾವುದೇ ಸ್ಪಿನ್ನರ್‌ನಿಂದ ಅತಿ ಹೆಚ್ಚು ವಿಕೆಟ್ ಬೌಲ್ಡ್ ಮತ್ತು ಎಲ್ಬಿಡಬ್ಲ್ಯು (214; ಬೌಲ್ಡ್ - 101,  ಎಲ್ಬಿಡಬ್ಲ್ಯು - 113) ಪಡೆದ ಆಟಗಾರ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಒಟ್ಟಾರೆಯಾಗಿ ಆಂಡರ್ಸನ್ (233) ನಂತರ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ನೈತಿಕತೆ ಇದ್ದರೆ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹ

-ಅಶ್ವಿನ್ ಖಾತೆ ತೆರೆಯದೆ 74 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ದಾಖಲೆ ಬರೆದಿದ್ದಾರೆ. ಅನಿಲ್ ಕುಂಬ್ಳೆ (77) ನಂತರ ಟೆಸ್ಟ್‌ನಲ್ಲಿ ಯಾವುದೇ ಭಾರತೀಯ ಬೌಲರ್‌ಗೆ ಇದು ಎರಡನೇ ಅತ್ಯುತ್ತಮವಾಗಿದೆ.

-ಅಶ್ವಿನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಕೇವಲ 10 ನೋ-ಬಾಲ್‌ಗಳನ್ನು ಎಸೆದಿದ್ದಾರೆ, ಇವೆಲ್ಲವೂ 2021 ಮತ್ತು 2022 ರ ನಡುವೆ ಸತತ ಐದು ಸರಣಿಗಳಲ್ಲಿ.

-ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 100 ವಿಕೆಟ್ ಪೂರೈಸಿದ ಮೊದಲ ಬೌಲರ್ ಅಶ್ವಿನ್. ಅವರು ಮಾರ್ಚ್ 2022 ರಲ್ಲಿ ಶ್ರೀಲಂಕಾದ ವಿಶ್ವ ಫರ್ನಾಂಡೋ ಅವರ ವಿಕೆಟ್‌ನೊಂದಿಗೆ ಈ ಸಾಧನೆಯನ್ನು ತಲುಪಿದರು.

Trending News