ನೈತಿಕತೆ ಇದ್ದರೆ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹ

ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಮೇಲೂ ದೂರು ದಾಖಲು ಮಾಡಬೇಕು ಎಂದು ಆಗ್ರಹಿಸಿದ ಜಗದೀಶ್ ಶೆಟ್ಟರ್, ನಾಸೀರ್ ಹುಸೇನ್ ಅವರ ಹಿಂಬಾಲಕರು ಮಾಡಿರೋ ಈ ಕೆಲಸ ಬೇರೆ ಸಾಮಾನ್ಯ ಘಟನೆ ಅಲ್ಲ, ದೇಶದ್ರೋಹದ ಘಟನೆ ಎಂದರು. 

Written by - Yashaswini V | Last Updated : Mar 5, 2024, 04:12 PM IST
  • ದೇಶದ ಎಲ್ಲ ಕಡೆ ಕಾಂಗ್ರೆಸ್ ನಾಯಕರು ಪಕ್ಷವನ್ನು ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ.
  • ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ.
  • ಇದೇ ಮುಂದುವರೆದರೆ ಕಾಂಗ್ರೆಸ್ ಅದಃಪತನವಾಗುತ್ತೆ- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
ನೈತಿಕತೆ ಇದ್ದರೆ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಗ್ರಹ  title=

Former CM Jagadish Shettar: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕತೆ ಇದ್ದರೆ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.  

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ  ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಸರ್ಕಾರ ಬಹಳ ಕನಫ್ಯೂಸ್ ನಲ್ಲಿದೆ. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಆದರೂ ಹೋಗತ್ತೆ. ಇದೀಗ ಮೂವರು ಅರೆಸ್ಟ್ ಆದ ಬಳಿಕ ಕಾಂಗ್ರೆಸ್ ಗೆ ನೈತಿಕತೆ ಉಳಿದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಅಧಿಕಾರದಲ್ಲಿ ‌ಮುಂದುವರೆಯೋಕೆ ನೈತಿಕತೆ ಇಲ್ಲ. ಅವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದರು.

ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಮೇಲೂ ದೂರು ದಾಖಲು ಮಾಡಬೇಕು ಎಂದು ಆಗ್ರಹಿಸಿದ ಜಗದೀಶ್ ಶೆಟ್ಟರ್, ನಾಸೀರ್ ಹುಸೇನ್ ಅವರ ಹಿಂಬಾಲಕರು ಮಾಡಿರೋ ಈ ಕೆಲಸ ಬೇರೆ ಸಾಮಾನ್ಯ ಘಟನೆ ಅಲ್ಲ, ದೇಶದ್ರೋಹದ ಘಟನೆ.  ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿರೋರು ಅವರು ಬೆಂಬಲಿಗರು. ಈ ಎಲ್ಲ ಕೇಸ್ ಮುಗಿಯೋವರೆಗೂ ನಾಸಿರ್ ಹುಸೇನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಬಾರದು. ಕಾನೂನು‌ ಪ್ರಕಾರ ಪ್ರಮಾಣ ವಚನ ಸ್ವೀಕಾರ ಮಾಡಲು ಬರಲ್ಲ ಎಂದರಲ್ಲದೆ, ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಗಾಗಿ ತುಷ್ಟೀಕರಣ ಮಾಡ್ತೀದೆ ಎಂದು ಆರೋಪಿಸಿದರು. 

ಇದನ್ನೂ ಓದಿ- ‘ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ’ಗೆ ಚಾಲನೆ

ದಿನದಿಂದ ದಿನಕ್ಕೆ ಕಾಂಗ್ರೆಸ್ ಕ್ಷೀಣಿಸುತ್ತಿದೆ: 
ದೇಶದ ಎಲ್ಲ ಕಡೆ ಕಾಂಗ್ರೆಸ್ ನಾಯಕರು ಪಕ್ಷವನ್ನು ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ಅಲ್ಪ ಸಂಖ್ಯಾತರ ತುಷ್ಟೀಕರಣದಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ.  ಇದೇ ಮುಂದುವರೆದರೆ ಕಾಂಗ್ರೆಸ್ ಅದಃಪತನವಾಗುತ್ತೆ. ಅಲ್ಪ ಸಂಖ್ಯಾತರ ತುಷ್ಟೀಕರಣ ಆದ್ರೆ ಕರ್ನಾಟಕದಲ್ಲಿ ಸರ್ಕಾರ ಪತನವಾಗಬಹುದು ಎಂದರು. 

ಶಾಸಕರಲ್ಲಿ ಅಸಮಾಧಾನ- ಸರ್ಕಾರವೇ ಪತನವಾಗಬಹುದು!
ಕಾಂಗ್ರೆಸ್ ನಲ್ಲಿ ಬಹಳ ಜನ ಅಸಮಾಧಾನಿತ ಶಾಸಕರಿದ್ದಾರೆ. ಅಕಸ್ಮಾತ್ ಫ್ಲಡ್ ಗೇಟ್ ಓಪನ್ ಆದ್ರೆ ಸರ್ಕಾರವೇ ಪತನ ಆಗಬಹುದು ಎಂದು ಜಗದೀಶ್ ಶೆಟ್ಟರ್ ಇದೇ ಸಂದರ್ಭದಲ್ಲಿ ನುಡಿದರು. 

ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿವಾದ: 
ಪಾಕಿಸ್ತಾನ ಜಿಂದಾಬಾದ್ ಘೋಷಣೆ ‌ಕೂಗಿದ್ದು ರೆಕಾರ್ಡ್ ಆಗಿತ್ತು. ಒಂದು ವೇಳೆ ನಾಸಿರ್ ಹುಸೇನ್ ಗೆ ದೇಶ ಭಕ್ತಿ ಇದ್ರೆ ಆವತ್ತೆ ಅವರನ್ನು ಕಪಾಳಕ್ಕೆ ಹೊಡೆಯಬೇಕಿತ್ತು. ಆದರೆ,  ಬಹುತೇಕ ನಾಯಕರು ಘೋಷಣೆ ಕೂಗಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಸಿಎಂ, ಡಿಸಿಎಂ ಸೇರಿದಂತೆ ಯಾರೂ ಸಹ ಇದನ್ನು ಖಂಡನೆ ಮಾಡಲಿಲ್ಲ. ಕಾನೂನು ಸಚಿವರು ಕೂಡಾ ಸಮರ್ಥನೆ ಮಾಡಿಕೊಂಡರು. ಇದನ್ನೆಲ್ಲ ನೋಡಿದ್ರೆ ಅಲ್ಪ ಸಂಖ್ಯಾತರ ತುಷ್ಟೀಕರಣ ಕಾಣತ್ತೆ. ಕಾಂಗ್ರೆಸ್ ‌ನವರಿಗೆ ದೇಶ ಭಕ್ತಿ ಇದ್ರೆ ಇದನ್ನು ಖಂಡಿಸಬೇಕಿತ್ತು ಎಂದರು‌‌.

ಇದನ್ನೂ ಓದಿ- ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ: ಡಿಸಿಎಂ ಡಿ.ಕೆ ಶಿವಕುಮಾರ್

ಒಂದು ಕಡೆ ವರದಿ ಬಂದಿಲ್ಲ ಅಂತಾರೆ, ಇನ್ನೊಂದು‌ಕಡೆ ಇದೀಗ ಅರೆಸ್ಟ್ ಆಗಿದ್ದರೆ ಎಂದು ಹೇಳ್ತಾರೆ ಇದನ್ನು ನೋಡಿದ್ರೆ ಘೋಷಣೆ ಕೂಗಿದ್ದು ನಿಜ ಅಂತಾ ಆಯ್ತಲ್ಲ ಎಂದವರು ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News