ಟಿ20 ವಿಶ್ವಕಪ್’ಗೆ ರೋಹಿತ್ ಶರ್ಮಾ ನಾಯಕ: ಮತ್ತೆ ಕ್ಯಾಪ್ಟನ್ಸಿ ನೀಡಲು ಕಾರಣ ಬಿಚ್ಚಿಟ್ಟ ಬಿಸಿಸಿಐ!

T20 World Cup 2023: ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವ ನೀಡಲು ಬಿಸಿಸಿಐ ಪ್ಲ್ಯಾನ್ ಮಾಡಿದೆ. ರೋಹಿತ್ ಶರ್ಮಾ 2023 ರ ವಿಶ್ವಕಪ್‌’ನಲ್ಲಿ 11 ಪಂದ್ಯಗಳಲ್ಲಿ 597 ರನ್ ಗಳಿಸಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದರು.

Written by - Bhavishya Shetty | Last Updated : Nov 30, 2023, 04:19 PM IST
    • ಟಿ20 ವಿಶ್ವಕಪ್‌’ನಲ್ಲೂ ರೋಹಿತ್ ಶರ್ಮಾ ನಾಯಕತ್ವ ವಹಿಸುವ ಸಾಧ್ಯತೆ
    • ಮತ್ತೆ ನಾಯಕತ್ವ ನೀಡಲು ಬಿಸಿಸಿಐ ಪ್ಲ್ಯಾನ್ ಮಾಡಿದೆ
    • ಯಾವುದೇ ತಂಡದ ಯಶಸ್ಸಿನಲ್ಲಿ ಆಟಗಾರ ಅಥವಾ ನಾಯಕ ಮಾತ್ರ ಪಾತ್ರ ವಹಿಸುವುದಿಲ್ಲ
ಟಿ20 ವಿಶ್ವಕಪ್’ಗೆ ರೋಹಿತ್ ಶರ್ಮಾ ನಾಯಕ: ಮತ್ತೆ ಕ್ಯಾಪ್ಟನ್ಸಿ ನೀಡಲು ಕಾರಣ ಬಿಚ್ಚಿಟ್ಟ ಬಿಸಿಸಿಐ! title=
Rohit Sharma Captaincy

T20 World Cup 2023: ವಿಶ್ವಕಪ್ 2023ರ ಬಳಿಕ ಭಾರತೀಯ ಕ್ರಿಕೆಟ್‌’ನಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಲಿದೆ ಎಂದು ಹೇಳಲಾಗುತ್ತಿದೆ. ಈ ಬದಲಾವಣೆ ಟಿ20 ವಿಶ್ವಕಪ್‌’ಗೆ ಸಂಬಂಧಿಸಿದ್ದಾಗಿದ್ದು, ಮುಂದಿನ ವರ್ಷ ಜೂನ್‌’ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಇದೀಗ ಟಿ20 ವಿಶ್ವಕಪ್‌’ನಲ್ಲೂ ರೋಹಿತ್ ಶರ್ಮಾ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಬಿಸಿಸಿಐ ಈಗಾಗಲೇ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಕೋಚಿಂಗ್ ಸಿಬ್ಬಂದಿಯ ಅವಧಿಯನ್ನು ವಿಸ್ತರಿಸಿದೆ. ಅಂದರೆ, ವಿಶ್ವಕಪ್‌’ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜೋಡಿಯನ್ನು ಮತ್ತೊಮ್ಮೆ ನೋಡುವ ಸಾಧ್ಯತೆ ಇದೆ.

ಇದನ್ನೂ ಓದಿ: Nag Chaitanya: ವಿಚ್ಛೇದನದ ನಂತರ ಮತ್ತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಚೈ..? ನಿಜವಾದ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟ   

ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವ ನೀಡಲು ಬಿಸಿಸಿಐ ಪ್ಲ್ಯಾನ್ ಮಾಡಿದೆ. ರೋಹಿತ್ ಶರ್ಮಾ 2023 ರ ವಿಶ್ವಕಪ್‌’ನಲ್ಲಿ 11 ಪಂದ್ಯಗಳಲ್ಲಿ 597 ರನ್ ಗಳಿಸಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದರು. ಈ ಅದ್ಭುತ ಫಾರ್ಮ್ ಆಧಾರದ ಮೇಲೆಯೇ ಮುಂದಿನ ವಿಶ್ವಕಪ್’ಗೆ ರೋಹಿತ್ ನಾಯಕನಾಗಿ ಮುಂದುವರೆಯಲಿ ಎಂದು ಬಿಸಿಸಿಐ ಸರ್ವ ಪ್ರಯತ್ನ ಮಾಡುತ್ತಿದೆ.

ಪಾಂಡ್ಯ ಫಿಟ್‌ನೆಸ್ ಮೇಲೆ ಅನುಮಾನ

ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಕೂಡ ಬಿಸಿಸಿಐ ಅನ್ನು ಪ್ಲಾನ್ ಬಿ ಕಡೆಗೆ ನೋಡುವಂತೆ ಮಾಡಿದೆ. ಹಾರ್ದಿಕ್ ಪಾಂಡ್ಯ ವಿಶ್ವಕಪ್ 2023 ರ ವೇಳೆ ಗಾಯಗೊಂಡಿದ್ದು, ಅಂದಿನಿಂದ ತಂಡವನ್ನು ಸೇರಲು ಸಾಧ್ಯವಾಗಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದ ಸಂಗತಿ. ಆದ್ದರಿಂದ ಪಾಂಡ್ಯಗೆ ಈ ಬಾರಿಯ ವಿಶ್ವಕಪ್’ನಲ್ಲಿ ನಾಯಕತ್ವ ನೀಡೋದು ಅನುಮಾನ. ಏಕೆಂದರೆ ನಾಯಕನಿಗೆ ಆಟದ ಮಧ್ಯದಲ್ಲಿ ಗಾಯವಾದರೆ ಅದು ಇಡೀ ತಂಡಕ್ಕೆ ಹಾನಿಯನ್ನುಂಟುಮಾಡುತ್ತದೆ.

ಯಾವುದೇ ತಂಡದ ಯಶಸ್ಸಿನಲ್ಲಿ ಆಟಗಾರ ಅಥವಾ ನಾಯಕ ಮಾತ್ರ ಪಾತ್ರ ವಹಿಸುವುದಿಲ್ಲ. ತೆರೆಮರೆಯಲ್ಲಿ ಕೆಲಸ ಮಾಡುವ ಕೋಚಿಂಗ್ ಸಿಬ್ಬಂದಿಯೂ ಮುಖ್ಯವಾಗಿರುತ್ತಾರೆ. 2023ರ ವಿಶ್ವಕಪ್‌’ನಲ್ಲಿ ಭಾರತ ತಂಡದ ಉತ್ತಮ ಪ್ರದರ್ಶನಕ್ಕೆ ಇದು ಕೂಡ ಪ್ರಮುಖ ಕಾರಣವಾಗಿತ್ತು. ತಂಡ ಗೆಲ್ಲುವಾಗ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮದಿಂದ ಅಂತರ ಕಾಯ್ದುಕೊಂಡಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ತಂಡ ಫೈನಲ್‌’ನಲ್ಲಿ ಸೋತಾಗ ದ್ರಾವಿಡ್ ಅವರೇ ಸುದ್ದಿಗೋಷ್ಠಿ ನಡೆಸಲು ಬಂದಿದ್ದರು. ಅಂದರೆ ದ್ರಾವಿಡ್ ಅವರ ಈ ವಿಧಾನವು ತಂಡವು ತೊಂದರೆಯಲ್ಲಿದ್ದಾಗ ಮತ್ತು ಆಟಗಾರರ ಮನೋಬಲ ಕಡಿಮೆಯಾದಾಗ ಅವರೊಂದಿಗೆ ದೃಢವಾಗಿ ನಿಲ್ಲುತ್ತಾರೆ ಎಂಬುದನ್ನು ತೋರಿಸಿತ್ತು.

ಇದನ್ನೂ ಓದಿ: ಏಕದಿನ, ಟೆಸ್ಟ್, ಟಿ20… ಈ ಮೂರು ಮಾದರಿಯಲ್ಲೂ ಭಾರತದ ಭವಿಷ್ಯ ಬರೆಯಬಲ್ಲ ಏಕೈಕ ಆಟಗಾರನೀತ: ಆಶಿಶ್

ಇದಲ್ಲದೇ, 2023ರ ವಿಶ್ವಕಪ್‌’ನಲ್ಲಿ ತಂಡದ ಪ್ರತಿಯೊಬ್ಬ ಆಟಗಾರನ ಪಾತ್ರವೂ ಸ್ಥಿರವಾಗಿರುವುದನ್ನು ನಾವು ನೋಡಿದ್ದೇವೆ. ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರಿಗೆ ಇನ್ನಿಂಗ್ಸ್ ದೂರದ ಕೊಂಡೊಯ್ಯುವ ಜವಾಬ್ದಾರಿ ನೀಡಿದರೆ, ಆರಂಭಿಕರಾದ ರೋಹಿತ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಅವರಿಗೆ ಎದುರಾಳಿ ದಾಳಿಯ ಜವಾಬ್ದಾರಿಯನ್ನು ನೀಡಲಾಯಿತು. ನಾಯಕ ಮತ್ತು ಕೋಚ್ ನಡುವೆ ಉತ್ತಮ ಪರಸ್ಪರ ತಿಳುವಳಿಕೆ ಇದ್ದಾಗ ಮಾತ್ರ ಆಟಗಾರರ ಅಂತಹ ಸ್ಪಷ್ಟ ಪಾತ್ರ ಮತ್ತು ಅದರ ಅನುಷ್ಠಾನ ನಡೆಯಲು ಸಾಧ್ಯ. 2024 ರ ಟಿ 20 ವಿಶ್ವಕಪ್‌’ಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಜೋಡಿ ಅಗತ್ಯವಾಗಿರಲು ಬಹುಶಃ ಇವುಗಳೇ ಕಾರಣವಾಗಿರಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News