ನವದೆಹಲಿ: ಚೆನ್ನೈ ಎಂ.ಎ.ಚಿದಂಬರಂ ನಲ್ಲಿ ನಡೆದ ಐಪಿಎಲ್ 2021 ರ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ತಂಡವು ಆರು ವಿಕೆಟ್ ಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ: Delhi vs Punjab: ದೆಹಲಿ ಕ್ಯಾಪಿಟಲ್ಸ್ ಗೆ ಗೆಲುವು ತಂದಿತ್ತ ಶಿಖರ್ ಧವನ್
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡವು ಅಮಿತ್ ಮಿಶ್ರಾ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಮಿಶ್ರಾ ನಾಲ್ಕು ವಿಕೆಟಗಳನ್ನು ತೆಗೆದುಕೊಳ್ಳುವ ಮೂಲಕ ಮುಂಬೈ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಮುಂಬೈ ತಂಡದ ಪರವಾಗಿ ಆರಂಭಿಕ ಆಟಗಾರ ನಾಯಕ ರೋಹಿತ್ ಶರ್ಮಾ ಅವರು 44 ರನ್ ಗಳಿಸಿದ್ದು ಬಿಟ್ಟರೆ ಉಳಿದ್ಯಾವ ಆಟಗಾರನು ಸಹಿತ 30 ರ ಗಡಿ ದಾಟಲಿಲ್ಲ.ಹೀಗಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
Upstox Most Valuable Asset of the Match between @DelhiCapitals and @mipaltan is @MishiAmit.@upstox #StartKarkeDekho #VIVOIPL pic.twitter.com/ERbK2K63iH
— IndianPremierLeague (@IPL) April 20, 2021
ಇದನ್ನೂ ಓದಿ: IPL 2021: ದೆಹಲಿ ಕ್ಯಾಪಿಟಲ್ಸ್ ಬೌಲರ್ ಅನ್ರಿಕ್ ನಾರ್ಟ್ಜೆ ಗೆ ಕೊರೊನಾ ಧೃಢ
ಇನ್ನೊಂದೆಡೆಗೆ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ ಕ್ಯಾಪಿಟಲ್ಸ (Delhi Capitals) ತಂಡವು ಕೇವಲ ನಾಲ್ಕು ವಿಕೆಟ್ ಗಳ ಪತನದೊಂದಿಗೆ 19.1 ಓವರ್ ಗಳಲ್ಲಿ 138 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬಿರಿತು.ದೆಹಲಿ ತಂಡದ ಪರವಾಗಿ ಶಿಖರ್ ಧವನ್ 45,ಸ್ಟೀವ್ ಸ್ಮಿತ್ 33 ಹಾಗೂ ಲಲಿತ್ ಯಾದವ್ 22 ರನ್ ಗಳನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣಕರ್ತರಾದರು.
That's that from Match 13 of #VIVOIPL as @DelhiCapitals win by 6 wickets to register their third win of the season.
Scorecard - https://t.co/XxDr4f4nPU #DCvMI pic.twitter.com/g3bqYZTl6f
— IndianPremierLeague (@IPL) April 20, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.