ಧೋನಿ ಬರಿ ಕ್ರಿಕೆಟ್ ಆಟಗಾರ ಅಲ್ಲ, ಅವರು ಕ್ರಿಕೆಟಿನ ಒಂದು ಯುಗ: ಮ್ಯಾಥ್ಯೂ ಹೇಡನ್

ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಭಾರತದ ಎಂ.ಎಸ್ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Last Updated : May 12, 2019, 04:00 PM IST
ಧೋನಿ ಬರಿ ಕ್ರಿಕೆಟ್ ಆಟಗಾರ ಅಲ್ಲ, ಅವರು ಕ್ರಿಕೆಟಿನ ಒಂದು ಯುಗ: ಮ್ಯಾಥ್ಯೂ ಹೇಡನ್  title=
file photo(PTI)

ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಭಾರತದ ಎಂ.ಎಸ್ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸ್ಟಾರ್ ಸ್ಪೋರ್ಟ್ಸ್ ಪ್ರೋಗ್ರಾಂನಲ್ಲಿ ಮಾತನಾಡಿದ ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗ, "ನಿಮಗೆ ಧೋನಿ ಗೊತ್ತಿದೆ, ಅವರು ಬರಿ ಆಟಗಾರನಲ್ಲ, ಅವರು ಕ್ರಿಕೆಟ್ ನ ಒಂದು  ಯುಗ. ಹಲವು ರೀತಿಯಲ್ಲಿ ಎಂಎಸ್ ಧೋನಿ ಗಲ್ಲಿ ಕ್ರಿಕೆಟ ತಂಡದ ನಾಯಕನಾಗಿರುತ್ತಾನೆ ಎಂದು ನಾನು ಭಾವಿಸುತ್ತೇನೆ, ಅವರು ನಮ್ಮಲ್ಲಿ ಒಬ್ಬರು, ಅವರು ಏನನ್ನಾದರೂ ಮಾಡಬಲ್ಲರು" ಎಂದು ಮ್ಯಾಥ್ಯೂ ಹೇಡನ್ ತಿಳಿಸಿದರು. 

ಇದೇ ಕ್ಯಾಪ್ಟನ್ ಕೂಲ್ ಧೋನಿ ತಯಾರಿ ನಡೆಸುವುದರ ಬಗ್ಗೆ ಅವರು ಶ್ಲಾಘಿಸಿದರು. ಧೋನಿಯ ರೀತಿಯ ಆಟಗಾರ ನಿಮ್ಮನ್ನು ತಾಳ್ಮೆಯಿರುವ ಹಾಗೆ ಮಾಡುತ್ತಾನೆ. ಆದ್ದರಿಂದ ಥಲಾ ಎನ್ನುವ ಪದ ಚೆನ್ನೈ ನಾಯಕನನ್ನು ಅರ್ಥೈಸಿಕೊಳ್ಳುವುದು.ಆದರೆ ಅವರು ಇಡೀ ದೇಶಕ್ಕೆ ನಾಯಕರಾಗಿದ್ದಾರೆ ಎಂದು ಹೇಳಿದರು. ಸದ್ಯ ಧೋನಿ ಐಪಿಎಲ್ ನಲ್ಲಿ ಉತ್ತಮ ಫಾರ್ಮ್ ನ್ನು ಹೊಂದಿದ್ದು  103.5 ಸರಾಸರಿಯಲ್ಲಿ ಹನ್ನೊಂದು ಇನ್ನಿಂಗ್ಸ್ನಲ್ಲಿ 414 ರನ್ ಗಳಿಸಿದ್ದಾರೆ.

ಧೋನಿ ನೇತೃತ್ವದ ಚೆನ್ನೈ ತಂಡವು ಈಗಾಗಲೇ ಡೆಲ್ಲಿ  ತಂಡವನ್ನು ಸೋಲಿಸಿದ್ದು ಭಾನುವಾರ ಮುಂಬೈ ವಿರುದ್ಧ ಫೈನಲ್ ಪಂದ್ಯದಲ್ಲಿ ಸೆಣಸಲಿದೆ. 

Trending News