/kannada/photo-gallery/who-introduced-actress-pavitra-gowda-to-the-film-industry-how-she-got-her-first-film-opportunity-218771 ನಟಿ ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇವರೇ!? ಈಕೆಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದೇಗೆ ಗೊತ್ತಾ? ನಟಿ ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇವರೇ!? ಈಕೆಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದೇಗೆ ಗೊತ್ತಾ? 218771

IPL 2024: ಐಪಿಎಲ್ ಋತುವನ್ನು ಮೊದಲು 2008 ರಲ್ಲಿ ಪ್ರಾರಂಭಿಸಲಾಯಿತು. ಆ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಮೊದಲ 2 ಸೀಸನ್‌ಗಳಲ್ಲಿ ವಿಜೇತ ತಂಡ ರೂ. 4.8 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ ರೂ.2.4 ಕೋಟಿ ಬಹುಮಾನ ನೀಡಲಾಯಿತು.

ಆ ಬಳಿಕ ಪ್ರಾಯೋಜಕರಿಂದಾಗಿ ಐಪಿಎಲ್ ಕ್ರಿಕೆಟ್ ನ ನಿರೀಕ್ಷೆ, ಬಹುಮಾನದ ಮೊತ್ತವೂ ಹೆಚ್ಚಾಯಿತು. ವಿಶ್ವದ ಪ್ರಮುಖ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಕ್ರಿಕೆಟ್ ನ ಬಹುಮಾನ ಮೊತ್ತವನ್ನು ಕಳೆದ 15 ವರ್ಷಗಳಿಂದ ನೀಡಲಾಗುತ್ತಿದ್ದು, 2023ರಲ್ಲಿ ವಿಜೇತ ತಂಡಕ್ಕೆ 20 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ 13 ಕೋಟಿ ರೂ. ನೀಡಲಾಗಿತ್ತು.. 

ಇದನ್ನೂ ಓದಿ-ಟೀಂ ಇಂಡಿಯಾದಲ್ಲಿ ಸಾವಿರ ಪಟ್ಟು ರಾಜಕೀಯ ನಡೆಯುತ್ತದೆ ಎಂದಿದ್ದ ಕೆಎಲ್ ರಾಹುಲ್ ಅಮಾನತು ಸಾಧ್ಯತೆ!?

ಅಲ್ಲದೆ, 3ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್‌ಗೆ 7 ಕೋಟಿ ರೂ. ಮತ್ತು 4ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್‌ಜೈಂಟ್ಸ್‌ಗೆ 6.5 ಕೋಟಿ ರೂ. ನೀಡಿತ್ತು.. ಐಪಿಎಲ್ ನಿರೀಕ್ಷೆಯ ಹಿನ್ನೆಲೆಯಲ್ಲಿ ಬಿಸಿಸಿಐ ಭವಿಷ್ಯದಲ್ಲಿ ಪ್ರಾಯೋಜಕರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ-ಹಾರ್ದಿಕ್ -ನತಾಶಾ ಡಿವೋರ್ಸ್ ವದಂತಿ! ವಿಚ್ಛೇದನವಾದ್ರೆ ನತಾಶಾಗೆ ಶೇ.70ರಷ್ಟು ಆಸ್ತಿ ಪಾಲು ನೀಡಬೇಕೇ ಪಾಂಡ್ಯ?

ಇದಲ್ಲದೆ ಅತಿ ಹೆಚ್ಚು ರನ್ ಗಳಿಸಿದವರಿಗೆ (ಆರೆಂಜ್ ಕ್ಯಾಪ್), ಅತಿ ಹೆಚ್ಚು ವಿಕೆಟ್ ಪಡೆದವರಿಗೆ (ಪರ್ಪಲ್ ಕ್ಯಾಪ್) ತಲಾ 15 ಲಕ್ಷ ರೂ., ಉದಯೋನ್ಮುಖ ಆಟಗಾರ ಪ್ರಶಸ್ತಿಗೆ 20 ಲಕ್ಷ ರೂ., ಅತ್ಯಮೂಲ್ಯ ಆಟಗಾರ ಪ್ರಶಸ್ತಿಗೆ 12 ಲಕ್ಷ ರೂ., ಸೂಪರ್ ಸ್ಟ್ರೈಕರ್ ಪ್ರಶಸ್ತಿಗೆ 15 ಲಕ್ಷ ರೂ. 15 ಲಕ್ಷ ಗೇಮ್ ಚೇಂಜರ್ ಪ್ರಶಸ್ತಿಗೆ 12 ಲಕ್ಷ ರೂ. ನೀಡಲಾಗುತ್ತಿದೆ..

ಕಳೆದ ಋತುವಿನ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ಗೆ 20 ಕೋಟಿ ರೂಪಾಯಿ ಮತ್ತು ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್‌ಗೆ 13 ಕೋಟಿ ರೂಪಾಯಿಗಳನ್ನು ನೀಡಲಾಯಿತು. ಈ ವರ್ಷವೂ ವಿಜೇತ ತಂಡಕ್ಕೆ 20 ಕೋಟಿ ಹಾಗೂ 2ನೇ ರನ್ನರ್ ಅಪ್ ತಂಡಕ್ಕೆ 13 ಕೋಟಿ ಬಹುಮಾನದ ನಿರೀಕ್ಷೆಯಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Do you know how much prize money the winning team of IPL 2024 trophy will get?
News Source: 
Home Title: 

ಐಪಿಎಲ್ 2024 ರ ಟ್ರೋಫಿ ಗೆದ್ದ ತಂಡ ಪಡೆಯುವ ಬಹುಮಾನದ ಹಣವೆಷ್ಟು ಗೊತ್ತಾ?  
 

ಐಪಿಎಲ್ 2024 ರ ಟ್ರೋಫಿ ಗೆದ್ದ ತಂಡ ಪಡೆಯುವ ಬಹುಮಾನದ ಹಣವೆಷ್ಟು ಗೊತ್ತಾ?
Yes
Is Blog?: 
No
Tags: 
Facebook Instant Article: 
Yes
Highlights: 

ಮೊದಲ 2 ಸೀಸನ್‌ಗಳಲ್ಲಿ ವಿಜೇತ ತಂಡ ರೂ. 4.8 ಕೋಟಿ ಹಾಗೂ 2ನೇ ಸ್ಥಾನ ಪಡೆದ ತಂಡಕ್ಕೆ ರೂ.2.4 ಕೋಟಿ ಬಹುಮಾನ ನೀಡಲಾಯಿತು.

ಬಿಸಿಸಿಐ ಭವಿಷ್ಯದಲ್ಲಿ ಪ್ರಾಯೋಜಕರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

 

Mobile Title: 
ಐಪಿಎಲ್ 2024 ರ ಟ್ರೋಫಿ ಗೆದ್ದ ತಂಡ ಪಡೆಯುವ ಬಹುಮಾನದ ಹಣವೆಷ್ಟು ಗೊತ್ತಾ?
Savita M B
Publish Later: 
No
Publish At: 
Sunday, May 26, 2024 - 11:07
Created By: 
Savita Badiger
Updated By: 
Savita Badiger
Published By: 
Savita Badiger
Request Count: 
1
Is Breaking News: 
No
Word Count: 
243