ಈ ಕಾರಣದಿಂದಲೇ ಕೆಎಲ್ ರಾಹುಲ್ ಟೀಂ ಇಂಡಿಯಾ ಮುಂದಿನ ನಾಯಕನಾಗುವುದು ಕಷ್ಟ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವವು ಸಂಪೂರ್ಣ ರೀತಿಯಲ್ಲಿ ಫ್ಲಾಪ್ ಆಗಿ ಸಾಬೀತಾಯಿತು. 

Written by - Ranjitha R K | Last Updated : Jan 20, 2022, 02:04 PM IST
  • ನಾಯಕತ್ವದಲ್ಲಿ ವಿಫಲರಾದರೇ ರಾಹುಲ್
  • ಕಳಪೆ ನಾಯಕತ್ವವೇ ಸೋಲಿಗೆ ಕಾರಣವಾಯಿತಾ ?
  • ಕೆಎಲ್ ರಾಹುಲ್ ನಾಯಕತ್ವದಲ್ಲಿ ಎದ್ದು ಕಾಣಿಸಿದ ಕೊರತೆ
 ಈ ಕಾರಣದಿಂದಲೇ ಕೆಎಲ್ ರಾಹುಲ್ ಟೀಂ ಇಂಡಿಯಾ ಮುಂದಿನ ನಾಯಕನಾಗುವುದು ಕಷ್ಟ title=
ಕಳಪೆ ನಾಯಕತ್ವವೇ ಸೋಲಿಗೆ ಕಾರಣವಾಯಿತಾ ? (file photo)

ನವದೆಹಲಿ : ಮೊದಲ ಏಕದಿನ ಪಂದ್ಯದಲ್ಲಿ ಭಾರತವನ್ನು 31 ರನ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ (South Africa) 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು  ಕೆಎಲ್ ರಾಹುಲ್ (KL Rahul) ಮುನ್ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ Team India  ಮುಂದಿನ ನಾಯಕನಾಗಲು ಕೆ ಎಲ್ ರಾಹುಲ್ ಅವರನ್ನು ಉತ್ತಮ ಸ್ಪರ್ಧಿ ಎಂದೇ ಪರಿಗಣಿಸಲಾಗಿದೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವವು (KL Rahul captaincy) ಸಂಪೂರ್ಣ ರೀತಿಯಲ್ಲಿ ಫ್ಲಾಪ್ ಆಗಿ ಸಾಬೀತಾಯಿತು. 

ಕಳಪೆ ನಾಯಕತ್ವ ನೀಡಿದ ಕೆ ಎಲ್ ರಾಹುಲ್ :
ಖಾಯಂ ನಾಯಕನಾಗಲು ಕೆ ಎಲ್ ರಾಹುಲ್ ಗೆ ಈ ವಿಚಾರ  ಅಡ್ಡಿಯಾಗಬಹುದು. ಒಂದು ಸಮಯದಲ್ಲಿ ಭಾರತ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೇಲೆ ತನ್ನ ಹಿಡಿತ ಸಾಧಿಸಿತ್ತು. ಆದರೆ ಕೆಎಲ್ ರಾಹುಲ್ (KL Rahul) ಕಳಪೆ ನಾಯಕತ್ವದ ಕಾರಣದಿಂದಾಗಿ ಸೋಲನುಭಾವಿಸುವಂತಾಯಿತು. 68 ರನ್‌ಗಳಿಗೆ 3 ವಿಕೆಟ್‌ಗಳ ಪತನದ ಹೊರತಾಗಿಯೂ, ದಕ್ಷಿಣ ಆಫ್ರಿಕಾ ಭಾರತದ ವಿರುದ್ಧ 296 ರನ್‌ಗಳ ದೊಡ್ಡ ಸ್ಕೋರ್ ಮಾಡುವಲ್ಲಿ ಯಶಸ್ವಿಯಾಯಿತು. 

ಇದನ್ನೂ ಓದಿ : ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಶಾಕ್! ನಿವೃತ್ತಿಯ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ

ಕೆಎಲ್ ರಾಹುಲ್ ನಾಯಕತ್ವದಲ್ಲಿ ಎದ್ದು ಕಾಣಿಸಿದ ಕೊರತೆ : 
68 ರನ್ ಗಳಿಗೆ 3 ವಿಕೆಟ್ ಪತನಗೊಂಡರೂ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ (110 ರನ್) ಮತ್ತು ರಾಸಿ ವ್ಯಾನ್ ಡೆರ್ ಡುಸ್ಸೆನ್ ( 129) ನಡುವೆ ನಾಲ್ಕನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟ ನೀಡಿದರು. ಬೌಲರ್‌ಗಳನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ, ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವುದು ಕೂಡಾ ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾದ ಈ ನಾಲ್ಕನೇ ವಿಕೆಟ್ ಜೊತೆಯಾಟವೇ ಟೀಂ ಇಂಡಿಯಾ (Team India) ಸೋಲಿಗೆ ಕಾರಣವಾಗಿತ್ತು. 

ವೆಂಕಟೇಶ್ ಅಯ್ಯರ್ ಗೆ ಬೌಲಿಂಗ್ ಅವಕಾಶ ನೀಡಲಿಲ್ಲ :
ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ವೆಂಕಟೇಶ್ ಅಯ್ಯರ್ (Venkatesh Iyer)  ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಏಕದಿನ ಪಂದ್ಯದ ವೇಳೆ ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಾಲ್ (Yuzuvendra Chahal) ಅವರಂತಹ ಬೌಲರ್‌ಗಳು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಚೊಚ್ಚಲ ಆಟಗಾರ ವೆಂಕಟೇಶ್ ಅಯ್ಯರ್ ಗೆ ಬೌಲಿಂಗ್ ಅವಕಾಶ ಸಿಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ವೆಂಕಟೇಶ್ ಅಯ್ಯರ್ ಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ನೀಡಿದ ನಾಯಕ ಕೆಎಲ್ ರಾಹುಲ್ (KL Rahul), ಅವರಿಗೆ ಬೌಲಿಂಗ್ ಅವಕಾಶ ನೀಡಲಿಲ್ಲ. ಕೆಎಲ್ ರಾಹುಲ್ ಈ ನಿರ್ಧಾರದಿಂದ ಎಲ್ಲಾ ಕ್ರಿಕೆಟ್ ಪಂಡಿತರು ಹಾಗೂ ದಿಗ್ಗಜರು ಅಚ್ಚರಿಗೊಂಡಿದ್ದಾರೆ. ವೆಂಕಟೇಶ್ ಅಯ್ಯರ್ ಆಲ್ ರೌಂಡರ್ ಆಗಿ ಆಡುತ್ತಿದ್ದಾರೋ ಅಥವಾ ಬ್ಯಾಟ್ಸ್ ಮನ್ ಆಗಿ ಆಡುತ್ತಿದ್ದಾರೆಯೋ ಎನ್ನುವ ಪ್ರಶ್ನೆ ಕಾಡತೊಡಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಉಳಿದ ಬೌಲರ್‌ಗಳು ಯಶಸ್ವಿಯಾಗದಿದ್ದಾಗ ವೆಂಕಟೇಶ್ ಅಯ್ಯರ್ ಅವರನ್ನು ಬಳಸಬಹುದಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ. 

ಇದನ್ನೂ ಓದಿ :  Sourav Ganguly: ಬಿಸಿಸಿಐಗೆ ಶೀಘ್ರವೇ ಗುಡ್ ಬೈ ಹೇಳುತ್ತಾರಾ ಸೌರವ್ ಗಂಗೂಲಿ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News