ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಶಾಕ್! ನಿವೃತ್ತಿಯ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ

Sania Mirza Retirement: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 2022 ತನ್ನ ಕೊನೆಯ ಸೀಸನ್ ಎಂದು ಬುಧವಾರ ಘೋಷಿಸಿದ್ದಾರೆ. 

Edited by - Chetana Devarmani | Last Updated : Jan 19, 2022, 06:02 PM IST
  • ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಶಾಕ್
  • ನಿವೃತ್ತಿಯ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ
  • ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಶಾಕ್! ನಿವೃತ್ತಿಯ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ  title=
ಸಾನಿಯಾ ಮಿರ್ಜಾ

ಮೆಲ್ಬೋರ್ನ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) 2022 ತನ್ನ ಕೊನೆಯ ಸೀಸನ್ ಎಂದು ಬುಧವಾರ ಘೋಷಿಸಿದ್ದಾರೆ. ಮೂಗುತಿ ಸುಂದರಿ ಸಾನಿಯಾ ತಮ್ಮ ಟೆನಿಸ್​ ವೃತ್ತಿ ಬದುಕಿಗೆ 2022 ರ ಆವೃತ್ತಿಯ ನಂತರ ತೆರೆ ಎಳೆಯುವುದಾಗಿ ಘೋಷಿಸಿದ್ದಾರೆ. 

35 ವರ್ಷದ ಮಿರ್ಜಾ ಅವರು ಮಾರ್ಚ್ 2019 ರಲ್ಲಿ ಮಗನಿಗೆ ಜನ್ಮ ನೀಡಿದ ನಂತರ ಟೆನಿಸ್‌ಗೆ (Tennis) ಮರಳಿದ್ದರು. ಮಿರ್ಜಾ ಆಸ್ಟ್ರೇಲಿಯನ್ ಓಪನ್  (Australian open) ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಪಾಲುದಾರ ನಾಡಿಯಾ ಕಿಚೆನೊಕ್ ಅವರೊಂದಿಗೆ ಸೋತ ನಂತರ ನಿವೃತ್ತಿ (Sania Mirza Retirement)ಘೋಷಣೆ ಮಾಡಿದರು.

ಇದನ್ನೂ ಓದಿ: Sourav Ganguly: ಬಿಸಿಸಿಐಗೆ ಶೀಘ್ರವೇ ಗುಡ್ ಬೈ ಹೇಳುತ್ತಾರಾ ಸೌರವ್ ಗಂಗೂಲಿ..?

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾನಿಯಾ ಮಿರ್ಜಾ, "ಈ ನನ್ನ ನಿರ್ಧಾರಕ್ಕೆ ಕೆಲವು ಕಾರಣಗಳಿವೆ. ಕೊರೊನಾ ಸಾಂಕ್ರಾಮಿಕಸ ಸಮಯದಲ್ಲಿ ಎಲ್ಲೆಂದರಲ್ಲಿ ನಾನು ಹೋಗಿ ಆಡಬಲ್ಲೆ ಎಂದು ಹೇಳುವುದು ಸುಲಭವಲ್ಲ. ನನ್ನ ದೇಹವು ಕ್ಷೀಣಿಸುತ್ತಿದೆ. ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ. ನಾನು ವಯಸ್ಸಾದಂತೆ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸಿದ್ದೇನೆ" ಎಂದು ಹೇಳಿದರು.

"ಅಲ್ಲದೆ ಈ ಕಠಿಣ ಸಂದರ್ಭದಲ್ಲಿ ನನ್ನ ಜೊತೆಗೆ 3 ವರ್ಷದ ಮಗನನ್ನು ಕರೆದುಕೊಂಡು ಹೋಗಿ, ಆತನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ ಎಂದೆನಿಸುತ್ತಿದೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಹೇಳಿದರು. 

ಡಬ್ಲ್ಯೂಟಿಎ ಸಿಂಗಲ್ಸ್​ ಶ್ರೇಯಾಂಕದಲ್ಲಿ ಅಗ್ರ 30ರೊಳಗೆ ಸೇರಿದ ಭಾರತದ ಮೊದಲ ಪ್ಲೇಯರ್​ ಎನಿಸಿಕೊಂಡಿರುವ ಸಾನಿಯಾ ಮಿರ್ಜಾ, 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯಬ್​ ಮಲಿಕ್​ರನ್ನು ಮದುವೆಯಾದರು. ಬಳಿಕ 2018 ಅಕ್ಟೋಬರ್​ 30 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು.  

ಸಾನಿಯಾ ಮಿರ್ಜಾ ಅವರ ವೃತ್ತಿಜೀವನವು ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಲಿಂದ ಕೂಡಿದೆ.  WTA ಪ್ರಶಸ್ತಿಯನ್ನು ಗೆದ್ದ ಭಾರತದ ಏಕೈಕ ಇಬ್ಬರು ಮಹಿಳಾ ಟೆನಿಸ್ ಆಟಗಾರರಲ್ಲಿ ಮಿರ್ಜಾ ಒಬ್ಬರು ಮತ್ತು ಸಿಂಗಲ್ಸ್ ಶ್ರೇಯಾಂಕಗಳಲ್ಲಿ ಅಗ್ರ 100 ತಲುಪಿದ ಏಕೈಕ ಆಟಗಾರರಾಗಿದ್ದಾರೆ.

ಇದನ್ನೂ ಓದಿ: ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಲಿದ್ದಾರೆ ಅಹಮದಾಬಾದ್‌ ತಂಡದ ಮೂವರು ಅಪಾಯಕಾರಿ ಆಟಗಾರರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News