ಬೆಂಗಳೂರು: ಪ್ರಸಕ್ತ ಋತುವಿನ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿಯೇ ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 38-36 ಅಂತರದಲ್ಲಿ ಜಯ ಗಳಿಸಿದ ದಬಾಂಗ್ ಡೆಲ್ಲಿ ಕೆಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ನಾಯಕ ನವೀನ್ ಕುಮಾರ್ 15 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಕೊನೆಯ 40 ಸೆಕೆಂಡುಗಳು ಬಾಕಿ ಇರುವಾಗ ಪಂದ್ಯ 36-36 ರಲ್ಲಿ ಸಮಬಲಗೊಂಡಿತ್ತು. ನವೀನ್ ಕುಮಾರ್ ಕೊನೆಯ ರೈಡ್‌ನಲ್ಲಿ 2 ಅಂಕಗಳನ್ನು ಗಳಿಸಿ ತಂಡಕ್ಕೆ ರೋಚಕ ಜಯ ತಂದಿತ್ತರು.
ಇದನ್ನೂ ಓದಿ: Virat Kohli: ವಿರಾಟ್ ‘ರಾಕೆಟ್ ಥ್ರೋ’ ಅಬ್ಬರಕ್ಕೆ ಕಾಂಗರೂ ಪಡೆ ಕಂಗಾಲು: ವ್ಹಾವ್! ಅನಿಸೋ ಈ ವಿಡಿಯೋ ನೋಡಿ
ನಾಯಕ ನವೀನ್ ಎಕ್ಸ್‌ಪ್ರೆಸ್ ರೈಡಿಂಗ್‌ನಲ್ಲಿ 5 ಅಂಕಗಳನ್ನು ಗಳಿಸುವ ಮೂಲಕ ದಬಾಂಗ್ ಡೆಲ್ಲಿ ಕೆಸಿ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 17-12 ಅಂತರದಲ್ಲಿ ಮುನ್ನಡೆಯಿತು. ಡೆಲ್ಲಿ ಪರ ಟ್ಯಾಕಲ್‌ನಲ್ಲಿ ವಿಜಯ ಕುಮಾರ್ 2 ಅಂಕಗಳನ್ನು ಗಳಿಸಿ ಒಂದು ಹಂತದಲ್ಲಿ ಸಮಬಲ ಸಾಧಿಸಿದ್ದ ತಂಡಕ್ಕೆ ಮುನ್ನಡೆಗೆ ಅವಕಾಶ ಕಲ್ಪಿಸಿದರು. ರೈಡಿಂಗ್‌ನಲ್ಲಿ ಮಂಜಿತ್ ಹಾಗೂ ಅಶು ಮಲಿಕ್ ತಲಾ 3 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಹರಿಯಾಣ ಸ್ಟೀಲರ್ಸ್ ಪರ ರೈಡಿಂಗ್‌ನಲ್ಲಿ ಮಂಜೀತ್ 6 ಅಂಕಗಳನ್ನು ಗಳಿಸಿ ದಿಟ್ಟ ಹೋರಾಟ ನೀಡುವಲ್ಲಿ ಸಫಲರಾದರು.
ಜಯದ ಖಾತೆ ತೆರೆದ ತಲೈವಾಸ್:
ಅತ್ಯಂತ ರೋಚಕ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 33-32 ಅಂತರದಲ್ಲಿ ಜಯ ಗಳಿಸಿ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯಲ್ಲಿ ಜಯದ ಖಾತೆ ತೆರೆದಿದೆ. ಪ್ರಥಮಾರ್ಧದಲ್ಲಿ 2 ಅಂಕಗಳಿಂದ ಮುನ್ನಡೆ ಕಂಡಿದ್ದ ಪಾಟ್ನಾ ಪೈರೇಟ್ಸ್ ದ್ವಿತಿಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು. ತಮಿಳು ತಲೈವಾಸ್ ಡಿಫೆಂಡರ್‌ಗಳು ಜಯದ ರೂವಾರಿ ಎನಿಸಿದರು. ಸಾಹಿಲ್ ಗೂಲಿಯಾ (3), ಸಾಗರ್ (2) ಹಾಗೂ ಹಿಮಾಂಶು (2) ದ್ವಿತಿಯಾರ್ಧದಲ್ಲಿ ಅದ್ಭುತ ಪ್ರದರ್ಶನ ತೋರಿದರು. ರೈಡಿಂಗ್‌ನಲ್ಲಿ ನರೇಂದರ್ 9 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಪಾಟ್ನಾ ಪೈರೇಟ್ಸ್ ಪರ ರೋಹಿಲ್ ಗುಲಿಯಾ (11) ಸೂಪರ್ ಟೆನ್ ಸಾಧನೆ ಮಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಸಚಿನ್ 6 ರೈಡಿಂಗ್ ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. 5 ಪಂದ್ಯಗಳನ್ನಾಡಿದ ಪಾಟ್ನಾ ಪೈರೇಟ್ಸ್ ನಾಲ್ಕು ಸೋಲುಗಳು ಮತ್ತು ಒಂದು ಸಮಬಲದ ಸಾಧನೆಯೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಕಾಯ್ದುಕೊಂಡಿತು.
ಇದನ್ನೂ ಓದಿ: ಭಾರತ-ಆಸೀಸ್ ಪಂದ್ಯ ವೇಳೆ ತಪ್ಪಿದ ಭಾರೀ ಅನಾಹುತ: Suryakumar Yadav ಜಸ್ಟ್ ಮಿಸ್!
ಜಯದ ಖಾತೆ ತೆರೆಯಲು ಹಾತೊರೆಯುತ್ತಿರುವ ಪಾಟ್ನಾ ಪೈರೇಟ್ಸ್ ತಂಡ ತಮಿಳು ತಲೈವಾಸ್ ವಿರುದ್ಧದ ಪಂದ್ಯದ ಮೊದಲಾರ್ಧದಲ್ಲಿ 17-15 ಅಂತರದಲ್ಲಿ ಮುನ್ನಡೆಯಿತು. ರೈಡಿಂಗ್‌ನಲ್ಲಿ ತಲೈವಾಸ್‌ಗಿಂತ ಒಂದು ಅಂಕ (11-12) ಹಿನ್ನಡೆ ಕಂಡಿದ್ದರೂ ಪೈರೇಟ್ಸ್ ಟ್ಯಾಕಲ್‌ನಲ್ಲಿ 3 ಅಂಕ ಹಾಗೂ ಅಲೌಟ್ ಸಾಧನೆ ಮೂಲಕ ಮುನ್ನಡೆ ಕಂಡಿತು. ಪಾಟ್ನಾ ಪೈರೇಟ್ಸ್ ಪರ ರೋಹಿತ್ ಗುಲಿಯಾ ಯಶಸ್ವಿ ರೈಡರ್ ಎನಿಸಿದರು. ತಮಿಳು ತಲೈವಾಸ್ ಪರ ನರೆಂದರ್ ರೈಡಿಂಗ್‌ನಲ್ಲಿ ಮಿಂಚಿ ಉತ್ತಮ ಹೋರಾಟ ನೀಡುವಲ್ಲಿ ಶ್ರಮಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.