Ravi Shastri: ಗವಾಸ್ಕರ್ ಬಳಿಕ ಈ ಆಟಗಾರನೇ ಭಾರತದ ಅತ್ಯುತ್ತಮ ಓಪನರ್: ರವಿಶಾಸ್ತ್ರಿ ಹೇಳಿದ್ದು ಯಾರ ಬಗ್ಗೆ?

Ravi Shastri Statement on Best Test Opener: ಗವಾಸ್ಕರ್ ನಂತರದಲ್ಲಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರನ್ನು ಅತ್ಯುತ್ತಮ ಓಪನರ್ ಎಂದು ಕರೆಯಲಾಗುತ್ತದೆ. ಟೆಸ್ಟ್‌’ನಲ್ಲಿ ಆಕ್ರಮಣಕಾರಿ ಆಟವಾಡಿದ ಏಕೈಕ ಆರಂಭಿಕ ಆಟಗಾರ ಎಂದರೆ ಅದು ವೀರೇಂದ್ರ ಸೆಹ್ವಾಗ್. ಶತಕ, ದ್ವಿಶತಕ ಮತ್ತು ಸಿಕ್ಸರ್‌’ಗಳೊಂದಿಗೆ ತ್ರಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಸೆಹ್ವಾಗ್.

Written by - Bhavishya Shetty | Last Updated : Mar 5, 2024, 07:52 PM IST
    • ಟೀಂ ಇಂಡಿಯಾದ ಸಾರ್ವಕಾಲಿಕ ಅತ್ಯುತ್ತಮ ಟೆಸ್ಟ್ ಓಪನರ್ ಸುನಿಲ್ ಗವಾಸ್ಕರ್
    • ನಂತರದಲ್ಲಿ ವೀರೇಂದ್ರ ಸೆಹ್ವಾಗ್ ಅವರನ್ನು ಅತ್ಯುತ್ತಮ ಓಪನರ್ ಎಂದು ಕರೆಯಲಾಗುತ್ತದೆ.
    • ಟೀಂ ಇಂಡಿಯಾದ ಅತ್ಯುತ್ತಮ ಓಪನರ್ ಮುರಳಿ ವಿಜಯ್ ಎಂದ ರವಿಶಾಸ್ತ್ರಿ
Ravi Shastri: ಗವಾಸ್ಕರ್ ಬಳಿಕ ಈ ಆಟಗಾರನೇ ಭಾರತದ ಅತ್ಯುತ್ತಮ ಓಪನರ್: ರವಿಶಾಸ್ತ್ರಿ ಹೇಳಿದ್ದು ಯಾರ ಬಗ್ಗೆ? title=
Ravi Shastri

Ravi Shastri Statement on Best Test Opener: ಟೆಸ್ಟ್ ಕ್ರಿಕೆಟ್‌’ನಲ್ಲಿ ಟೀಂ ಇಂಡಿಯಾದ ಉತ್ತಮ ಆರಂಭಿಕ ಆಟಗಾರ ಯಾರು ಎಂದಾಗ ಹೆಚ್ಚಾಗಿ ಕೇಳಿಬರುವ ಹೆಸರು ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ. ಗವಾಸ್ಕರ್ ಅವರು ಟೀಂ ಇಂಡಿಯಾದ ಟೆಸ್ಟ್ ಆರಂಭಿಕರಾಗಿ 34 ಶತಕಗಳೊಂದಿಗೆ 10,122 ರನ್ ಗಳಿಸಿದ್ದಾರೆ. ಆದ್ದರಿಂದಲೇ ಅವರನ್ನು ಟೀಂ ಇಂಡಿಯಾದ ಸಾರ್ವಕಾಲಿಕ ಅತ್ಯುತ್ತಮ ಟೆಸ್ಟ್ ಓಪನರ್ ಎಂದು ಪರಿಗಣಿಸಲಾಗಿದೆ.

ಇನ್ನು ಗವಾಸ್ಕರ್ ನಂತರದಲ್ಲಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರನ್ನು ಅತ್ಯುತ್ತಮ ಓಪನರ್ ಎಂದು ಕರೆಯಲಾಗುತ್ತದೆ. ಟೆಸ್ಟ್‌’ನಲ್ಲಿ ಆಕ್ರಮಣಕಾರಿ ಆಟವಾಡಿದ ಏಕೈಕ ಆರಂಭಿಕ ಆಟಗಾರ ಎಂದರೆ ಅದು ವೀರೇಂದ್ರ ಸೆಹ್ವಾಗ್. ಶತಕ, ದ್ವಿಶತಕ ಮತ್ತು ಸಿಕ್ಸರ್‌’ಗಳೊಂದಿಗೆ ತ್ರಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಸೆಹ್ವಾಗ್.

ಇದನ್ನೂ ಓದಿ: ಧರ್ಮಶಾಲಾಗೆ ಹೆಲಿಕಾಪ್ಟರ್’ನಲ್ಲಿ ಗ್ರ್ಯಾಂಡ್ ಎಂಟ್ರಿಕೊಟ್ಟ ರೋಹಿತ್ ಶರ್ಮಾ: ವಿಡಿಯೋ ವೈರಲ್

ಈ ಪೀಳಿಗೆಯ ಕ್ರಿಕೆಟ್‌’ನಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಟೆಸ್ಟ್ ಓಪನರ್. ಸೆಹ್ವಾಗ್ ಅವರಂತೆ ರೋಹಿತ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಸೆಹ್ವಾಗ್ ಮತ್ತು ಗವಾಸ್ಕರ್ ಅವರಿಗಿಂತ ರೋಹಿತ್ ಉತ್ತಮ ದಾಖಲೆ ಹೊಂದಿಲ್ಲದಿದ್ದರೂ, ಅವರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವುದು ನಿಜ.

ಆದರೆ ಸುನಿಲ್ ಗವಾಸ್ಕರ್ ನಂತರ ಟೀಂ ಇಂಡಿಯಾದ ಅತ್ಯುತ್ತಮ ಓಪನರ್ ಮುರಳಿ ವಿಜಯ್ ಎಂದು ರವಿಶಾಸ್ತ್ರಿ ಹೇಳಿರುವುದನ್ನು ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ಕ್ರಿಕೆಟ್ ವೆಬ್‌ಸೈಟ್‌’ಗೆ ನೀಡಿದ ಸಂದರ್ಶನದಲ್ಲಿ ಭರತ್ ಅರುಣ್ ಈ ಬಗ್ಗೆ ಮಾತನಾಡಿದ್ದಾರೆ.

“ನನ್ನನ್ನು ಪ್ರಭಾವಿಸಿದ ಯುವ ಬ್ಯಾಟರ್ ಮುರಳಿ ವಿಜಯ್. ಆತನನ್ನು ಚಿಕ್ಕಂದಿನಿಂದಲೂ ಬಲ್ಲೆ. ಕಾಲೇಜಿನಲ್ಲಿ ನಾನು ಅವನನ್ನು ಮೊದಲ ಬಾರಿಗೆ ನೋಡಿದ್ದು. ಅವರ ಆಟವನ್ನು ಇಷ್ಟಪಟ್ಟು ಡಿವಿಷನ್ ತಂಡಕ್ಕೂ ನಾನು ಶಿಫಾರಸು ಮಾಡಿದ್ದೆ. ಆಗಿನಿಂದ ಕ್ರಿಕೆಟಿಗನಾಗಿ ಅವರ ಪಯಣ ಆರಂಭವಾಯಿತು. ಸುನಿಲ್ ಗವಾಸ್ಕರ್ ನಂತರ ಮುರಳಿ ವಿಜಯ್ ಟೀಂ ಇಂಡಿಯಾದ ಅತ್ಯುತ್ತಮ ಟೆಸ್ಟ್ ಓಪನರ್ ಎಂದು ರವಿಶಾಸ್ತ್ರಿ ಕೂಡ ಹೇಳುತ್ತಿದ್ದರು” ಎಂದಿದ್ದಾರೆ.

“ಇದು ಅವರಿಗೆ ಸಿಕ್ಕಿರುವ ದೊಡ್ಡ ಮೆಚ್ಚುಗೆ. ಮುರಳಿ ವಿಜಯ್ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು” ಎಂದು ಭರತ್ ಅರುಣ್ ಹೇಳಿದ್ದಾರೆ.

ರವಿಶಾಸ್ತ್ರಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಲು ಭರತ್ ಅರುಣ್ ಕೂಡ ಕಾರಣ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹನಿ ಹನಿ ನೀರಿಗೂ ಹಾಹಾಕಾರ! ಬೇಸಿಗೆ ಆರಂಭದಲ್ಲೇ ಬಿಕ್ಕಟ್ಟು ಎದುರಾಗಲು ಇದುವೇ ಕಾರಣ

ಮುರಳಿ ವಿಜಯ್ ಭಾರತ ಪರ 61 ಟೆಸ್ಟ್ ಪಂದ್ಯಗಳನ್ನಾಡಿದ್ದು 3982 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕಗಳಿವೆ. ಭಾರತದ ಆರಂಭಿಕರ ರನ್‌’ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. 2015ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಅವರು, ಐಪಿಎಲ್‌’ನಲ್ಲಿ ಸಿಎಸ್‌’ಕೆ ತಂಡವನ್ನು ಪ್ರತಿನಿಧಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News