ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಲಿರುವ ವಿ.ವಿ.ಎಸ್ ಲಕ್ಷ್ಮಣ್..!

ಭಾರತದ ಮಾಜಿ ಬ್ಯಾಟ್ಸಮನ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಂದಿನ ಮುಖ್ಯಸ್ಥರಾಗಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಭಾನುವಾರ (ನವೆಂಬರ್ 14) ಖಚಿತಪಡಿಸಿದ್ದಾರೆ.

Written by - Zee Kannada News Desk | Last Updated : Nov 14, 2021, 03:27 PM IST
  • ಭಾರತದ ಮಾಜಿ ಬ್ಯಾಟ್ಸಮನ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಂದಿನ ಮುಖ್ಯಸ್ಥರಾಗಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಭಾನುವಾರ (ನವೆಂಬರ್ 14) ಖಚಿತಪಡಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಲಿರುವ ವಿ.ವಿ.ಎಸ್ ಲಕ್ಷ್ಮಣ್..! title=
file photo

ನವದೆಹಲಿ: ಭಾರತದ ಮಾಜಿ ಬ್ಯಾಟ್ಸಮನ್ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಂದಿನ ಮುಖ್ಯಸ್ಥರಾಗಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಭಾನುವಾರ (ನವೆಂಬರ್ 14) ಖಚಿತಪಡಿಸಿದ್ದಾರೆ.

ಅಕ್ಟೋಬರ್ 26 ರಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದಂತೆ ರವಿಶಾಸ್ತ್ರಿ ಅವರ ಅಧಿಕಾರಾವಧಿಯ ಅಂತ್ಯದ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿ ಇತ್ತೀಚೆಗೆ ನೇಮಕಗೊಂಡ ತಮ್ಮ ಮಾಜಿ ಬ್ಯಾಟಿಂಗ್ ಸಹೋದ್ಯೋಗಿ ರಾಹುಲ್ ದ್ರಾವಿಡ್ ಅವರಿಂದ ಲಕ್ಷ್ಮಣ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: NZ vs AUS, T20 World Cup 2021: ಟಾಸ್ ಗೆದ್ದವರೇ ಬಾಸ್, ಯಾರೂ ಗೆದ್ದರೂ ಇತಿಹಾಸ..!

'ವಿವಿಎಸ್ ಲಕ್ಷ್ಮಣ್ ಅವರು ಎನ್‌ಸಿಎಯ ಹೊಸ ಮುಖ್ಯಸ್ಥರಾಗುತ್ತಾರೆ" ಎಂದು ಹಿರಿಯ ಬಿಸಿಸಿಐ ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.ಲಕ್ಷ್ಮಣ್ ಅವರು ಈಗಾಗಲೇ ಐಪಿಎಲ್ ತಂಡದ ಸನ್‌ರೈಸರ್ಸ್ ಹೈದರಾಬಾದ್‌ನ ಮಾರ್ಗದರ್ಶಕರಾಗಿ ತಮ್ಮ ಪಾತ್ರವನ್ನು ತ್ಯಜಿಸಿದ್ದಾರೆ ಮತ್ತು ಹಿತಾಸಕ್ತಿ ಸಂಘರ್ಷದ ಷರತ್ತು ಉಲ್ಲಂಘನೆಯನ್ನು ತಪ್ಪಿಸಲು ಯಾವುದೇ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗುವುದಿಲ್ಲ ಅಥವಾ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದಿಲ್ಲ. ಡಿಸೆಂಬರ್ 4 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಗೆ (ಎಜಿಎಂ) ಮೊದಲು ಲಕ್ಷ್ಮಣ್ ಅವರ ನೇಮಕಾತಿ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Ind vs NZ Test Series : ಟೀಂ ಇಂಡಿಯಾಗೆ ಸಿಹಿ ಸುದ್ದಿ : ನ್ಯೂಜಿಲೆಂಡ್‌ನ ಈ ಅಪಾಯಕಾರಿ ಆಟಗಾರ ಟೆಸ್ಟ್ ಸರಣಿಯಿಂದ ಹೊರಗೆ!

ಲಕ್ಷ್ಮಣ್ ಅವರು ಆರಂಭದಲ್ಲಿ ಬಿಸಿಸಿಐ ಪ್ರಸ್ತಾಪವನ್ನು ನಿರಾಕರಿಸಿದರು ಏಕೆಂದರೆ ಅವರು ಹೈದರಾಬಾದ್‌ನಿಂದ ಬೇಸ್ ಬದಲಾಯಿಸಲು ಇಷ್ಟವಿರಲಿಲ್ಲ ಬೆಂಗಳೂರಿನಲ್ಲಿ ಕನಿಷ್ಠ 200 ದಿನಗಳವರೆಗೆ ಇರಬೇಕಾಗುತ್ತದೆ.ಈಗ ರಾಹುಲ್ ಭಾರತ ತಂಡದ ಕೋಚ್ ಆಗಿ, ಲಕ್ಷ್ಮಣ್ ಎನ್ಸಿಎ ಮುಖ್ಯಸ್ಥರಾಗಿ ನೇಮಕವಾಗುತ್ತಿರುವುದು ಭಾರತೀಯ ತಂಡದಲ್ಲಿ ಹೆಚ್ಚಿನ ಸಮನ್ವಯತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ:ಐಸಿಸಿ ಹಾಲ್ ಆಫ್ ಫೇಮ್‌ಗೆ ಮಹೇಲಾ ಜಯವರ್ಧನಾ, ಶಾನ್ ಪೊಲಾಕ್, ಜಾನೆಟ್ ಬ್ರಿಟಿನ್ ಸೇರ್ಪಡೆ

ತಮ್ಮ ಕೆಲಸದ ಭಾಗವಾಗಿ, ಲಕ್ಷ್ಮಣ್ ಅವರು ಹಿರಿಯ ಮಟ್ಟಕ್ಕೆ ಹಾದಿಯಾಗಿರುವ ಭಾರತ U-19 ಮತ್ತು 'A' ತಂಡಗಳ ಸಿದ್ಧತೆಗಳನ್ನು ಸಹ ನೋಡಿಕೊಳ್ಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News