Friendship T10 Cup UAE: ಬಾಲಿವುಡ್ ನಟಮಣಿಗಳ ಗ್ಯಾಂಗ್ ಜೊತೆ ಶ್ರೀಶಾಂತ್ ಸಾಥ್ ...!

ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ಮಾರ್ಚ್ 5 ರಿಂದ ಮೊದಲ ಮೂರು ದಿನಗಳ ಫ್ರೆಂಡ್‌ಶಿಪ್ ಟಿ 10 ಕಪ್ ಯುಎಇಗೆ ಆತಿಥ್ಯ ವಹಿಸಲಿದ್ದು, ಇದರಲ್ಲಿ ವಿಶ್ವದ ಮಾಜಿ ಕ್ರಿಕೆಟ್ ದಂತಕಥೆಗಳು ಮತ್ತು ಬಾಲಿವುಡ್ ತಾರೆಯರು ವಿಶ್ವದಾದ್ಯಂತ ಜನರು ಮತ್ತು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸ್ಪರ್ಧಿಸಲಿದ್ದಾರೆ.

Written by - Zee Kannada News Desk | Last Updated : Feb 24, 2022, 02:05 PM IST
  • ಫ್ರೆಂಡ್‌ಶಿಪ್ ಕಪ್ ಯುಎಇಯನ್ನು ಅರ್ಬಾ ಸ್ಪೋರ್ಟ್ಸ್ ಸರ್ವಿಸ್ ಎಲ್‌ಎಲ್‌ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಸ್ಲಂ ಗುರುಕ್ಕಲ್ ಅವರು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದಾರೆ
Friendship T10 Cup UAE: ಬಾಲಿವುಡ್ ನಟಮಣಿಗಳ ಗ್ಯಾಂಗ್ ಜೊತೆ ಶ್ರೀಶಾಂತ್ ಸಾಥ್ ...!   title=

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ಮಾರ್ಚ್ 5 ರಿಂದ ಮೊದಲ ಮೂರು ದಿನಗಳ ಫ್ರೆಂಡ್‌ಶಿಪ್ ಟಿ 10 ಕಪ್ ಯುಎಇಗೆ ಆತಿಥ್ಯ ವಹಿಸಲಿದ್ದು, ಇದರಲ್ಲಿ ವಿಶ್ವದ ಮಾಜಿ ಕ್ರಿಕೆಟ್ ದಂತಕಥೆಗಳು ಮತ್ತು ಬಾಲಿವುಡ್ ತಾರೆಯರು ವಿಶ್ವದಾದ್ಯಂತ ಜನರು ಮತ್ತು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸ್ಪರ್ಧಿಸಲಿದ್ದಾರೆ.

ಫ್ರೆಂಡ್‌ಶಿಪ್ ಕಪ್ ಯುಎಇಯನ್ನು ಅರ್ಬಾ ಸ್ಪೋರ್ಟ್ಸ್ ಸರ್ವಿಸ್ ಎಲ್‌ಎಲ್‌ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಸ್ಲಂ ಗುರುಕ್ಕಲ್ ಅವರು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದಾರೆ.ಈಗಾಗಲೇ ಗರಿಷ್ಠ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಯೋಜಿಸಿದ ವಿಶ್ವದಾಖಲೆಯನ್ನು ಹೊಂದಿರುವ ಶಾರ್ಜಾವು ಮೊದಲ ಫ್ರೆಂಡ್‌ಶಿಪ್ ಕಪ್ ಆಯೋಜಿಸಿದ ಕೀರ್ತಿಗೆ ಪಾತ್ರವಾಗಲಿದೆ.

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಮೂವರು ಭಾವಿ ನಾಯಕರನ್ನು ಹೆಸರಿಸಿದ ರೋಹಿತ್ ಶರ್ಮಾ...!

ಈ ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಲಿದ್ದು, ಅದರಲ್ಲೂ ವಿಶೇಷವಾಗಿ ಬಾಲಿವುಡ್ ತಾರೆಗಳು ಹಾಗೂ ವಿಶ್ವ ಕ್ರಿಕೆಟ್ ನ ದಂತಕಥೆಗಳು ಭಾಗವಹಿಸಲಿದ್ದಾರೆ.ಇಂಡಿಯಾ ಲೆಜೆಂಡ್ಸ್, ಪಾಕಿಸ್ತಾನ್ ಲೆಜೆಂಡ್ಸ್, ವರ್ಲ್ಡ್ ಲೆಜೆಂಡ್ಸ್ 11 ಮತ್ತು ಬಾಲಿವುಡ್ ಕಿಂಗ್ಸ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

ಬಾಲಿವುಡ್ ಕಿಂಗ್ಸ್ ತಂಡದಲ್ಲಿ ನಟ ಸುನೀಲ್ ಶೆಟ್ಟಿ, ಸೊಹೈಲ್ ಖಾನ್ ಮತ್ತು ಅಫ್ತಾಬ್ ಶಿವದಾಸನಿ, ಸಲೀಲ್ ಅಂಕೋಲಾ ಮತ್ತು ಎಸ್. ಶ್ರೀಶಾಂತ್ ಅವರನ್ನು ಒಳಗೊಂಡಿರುತ್ತದೆ.ಶ್ರೀಶಾಂತ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನಲ್ಲಿ ರೂ 50 ಲಕ್ಷ ಮೂಲ ಬೆಲೆಗೆ ನೋಂದಾಯಿಸಿಕೊಂಡಿದ್ದರು ಆದರೆ ಅವರನ್ನು ಯಾವುದೇ ತಂಡವು ಖರೀದಿಸಲು ಮುಂದಾಗಲಿಲ್ಲ. ಎರಡನೇ ಟೀಮ್ ಇಂಡಿಯಾ ಲೆಜೆಂಡ್ಸ್‌ನಲ್ಲಿ ಮಹಮ್ಮದ್ ಕೈಫ್, ಮುನಾಫ್ ಪಟೇಲ್, ಅಜಯ್ ಜಡೇಜಾ ಮತ್ತು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಂತಹ ಶ್ರೇಷ್ಠ ಆಟಗಾರರು ಇದ್ದಾರೆ.

ಇದನ್ನೂ ಓದಿ : ಟಿಪ್ಪು ಮತಾಂಧ ಎನ್ನುವ ಬಿಜೆಪಿಯವರೇ ಟಿಪ್ಪು ಜಯಂತಿ ಮಾಡಿದ್ರು: ಸಿದ್ದರಾಮಯ್ಯ

ಮೂರನೇ ತಂಡವಾಗಿರುವ ಪಾಕಿಸ್ತಾನ ಲೆಜೆಂಡ್ಸ್‌ನಲ್ಲಿ ವಿಶ್ವ ದರ್ಜೆಯ ಆಟಗಾರರಾದ ಮಹಮ್ಮದ್ ಯೂಸುಫ್, ಸಲ್ಮಾನ್ ಬಟ್ ಮತ್ತು ಇಮ್ರಾನ್ ನಜೀರ್ ಇದ್ದಾರೆ. ಅಜಂತಾ ಮೆಂಡಿಸ್ ನೇತೃತ್ವದ ನಾಲ್ಕನೇ ತಂಡ ವರ್ಲ್ಡ್ ಲೆಜೆಂಡ್ಸ್ 11 ಶ್ರೀಲಂಕಾದ ಆಟಗಾರರಾದ ತಿಲಕರತ್ನೆ ದಿಲ್ಶನ್ ಮತ್ತು ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆಯ ಇತರ ಕ್ರಿಕೆಟ್ ದಂತಕಥೆಗಳನ್ನು ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News