ಈ ಆಟಗಾರ ಏಷ್ಯಾಕಪ್‌ನಲ್ಲಿ ಇರಬೇಕಿತ್ತು : ಹರ್ಭಜನ್‌ ಸಿಂಗ್‌

Asia Cup  2023 team : ಸ್ಪಿನ್ನರ್‌ ಯುಜುವೇಂದ್ರ ಚಹಾಲ್ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ನಿಜ. ಆದರೆ ಕೆಲವು ಪಂದ್ಯಗಳಲ್ಲಿ ನೀಡಿದ ಕಳಪೆ ಪ್ರದರ್ಶನ ಅವರನ್ನು ಕೆಟ್ಟ ಬೌಲರ್ ಆಗಿ ಮಾಡುವುದಿಲ್ಲ ಎಂದು ಹರ್ಭಜನ್‌ ಹೇಳಿದ್ದಾರೆ. 

Written by - VISHWANATH HARIHARA | Edited by - Krishna N K | Last Updated : Aug 25, 2023, 05:47 PM IST
  • ಏಷ್ಯಾಕಪ್‌ ಇನ್ನೂ ಕೆಲ ದಿನಗಳು ಬಾಕಿ ಇದೆ.
  • ಆಯ್ಕೆ ಸಮಿತಿ ಸಹ ಟೀಂ ಇಂಡಿಯಾವನ್ನು ಪ್ರಕಟಿಸಿದೆ.
  • ಹರ್ಭಜನ್ ಸಿಂಗ್ ಚಹಾಲ್ ಪರ ಬ್ಯಾಟ್ ಬೀಸಿದ್ದಾರೆ.
ಈ ಆಟಗಾರ ಏಷ್ಯಾಕಪ್‌ನಲ್ಲಿ ಇರಬೇಕಿತ್ತು : ಹರ್ಭಜನ್‌ ಸಿಂಗ್‌ title=

Harbhajan singh on Yuzvendra chahal : ಏಷ್ಯಾಕಪ್‌ ಇನ್ನೂ ಕೆಲ ದಿನಗಳು ಬಾಕಿ ಇದೆ. ಆಯ್ಕೆ ಸಮಿತಿ ಸಹ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ವಿಶ್ವಕಪ್​ಗೂ ಮುನ್ನ ಈ ಟೂರ್ನಿ ಅತ್ಯಂತ ಮಹತ್ವ ಪಡೆದಿದ್ದು, ಈಗ ಆಯ್ಕೆಯಾದವರು ವಿಶ್ವಕಪ್​ಗೆ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಈಗ ಆಯ್ಕೆಯಾಗಿರುವ 17 ಸದಸ್ಯರ ತಂಡದಲ್ಲಿ ನಿರೀಕ್ಷಿತ ಹೆಸರುಗಳು ಸೇರಿವೆ. ಪ್ರಮುಖವಾಗಿ ಸ್ಪಿನ್ನರ್‌ ಯುಜುವೇಂದ್ರ ಚಹಾಲ್ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎನ್ನಲಾಗಿತ್ತು. ಆದರೆ ತಂಡದಲ್ಲಿ ಸ್ಪಿನ್ ಜೊತೆಗೆ ಬ್ಯಾಟಿಂಗ್ ಮಾಡುವ ಆಟಗಾರನಿಗೆ ಮ್ಯಾನೆಜ್​ಮೆಂಟ್ ಮಣೆ ಹಾಕಿರುವುದರಿಂದ ಚಹಲ್​ಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಮ್ಯಾಗ್ನಸ್ ಕಾರ್ಲ್‌ಸನ್ ಚಾಂಪಿಯನ್, ಪ್ರಜ್ಞಾನಂದ ರನ್ನರ್‌ಅಪ್!

ಇದೀಗ ಚಹಲ್​ರನ್ನು ತಂಡದಿಂದ ಹೊರಗಿಟ್ಟ ನಿರ್ಧಾರದ ಬಗ್ಗೆ ಕೆಲ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಟರ್ಬನೇಟರ್ ಹರ್ಭಜನ್ ಸಿಂಗ್ ಚಹಾಲ್ ಪರ ಬ್ಯಾಟ್ ಬೀಸಿದ್ದಾರೆ. ಯೂಜಿ ತಂಡದಲ್ಲಿರಬೇಕು, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಯುಜುವೇಂದ್ರ ಚಹಾಲ್ ಅತ್ಯುತ್ತಮ ಸ್ಪಿನ್ನರ್‌. ಮ್ಯಾನೇಜ್‌ಮೆಂಟ್ ಚಹಾಲ್‌ರನ್ನ ಏಷ್ಯಾಕಪ್‌ಗೆ ಆಯ್ಕೆ ಮಾಡದೇ ತಪ್ಪು ಮಾಡಿದೆ. ಭಾರತ ತಂಡ ಯೂಜಿಯನ್ನು ಮಿಸ್ ಮಾಡಿಕೊಳ್ಳುತ್ತದೆ. ವೈಟ್ ಬಾಲ್ ಫಾರ್ಮ್ಯಾಟ್‌ನಲ್ಲಿ ಸದ್ಯ ಭಾರತದಲ್ಲಿ ಅವರಿಗಿಂತ ಉತ್ತಮ ಸ್ಪಿನ್ನರ್ ಇದ್ದಾರೆ ಎಂಬುದು ಅನುಮಾನ.

ಅವರು ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ನಿಜ. ಆದರೆ ಕೆಲವು ಪಂದ್ಯಗಳಲ್ಲಿ ನೀಡಿದ ಕಳಪೆ ಪ್ರದರ್ಶನ ಅವರನ್ನು ಕೆಟ್ಟ ಬೌಲರ್ ಆಗಿ ಮಾಡುವುದಿಲ್ಲ ಎಂದು ಹರ್ಭಜನ್‌ ಹೇಳಿದ್ದಾರೆ.  ಚಹಾಲ್‌ ತಂಡಕ್ಕೆ ಮರಳಲು ಬಾಗಿಲು ಮುಚ್ಚಿಲ್ಲ. ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಚಹಾಲ್ ವಿಶ್ವಕಪ್​ಗೆ ಖಂಡಿತವಾಗಿಯೂ ತಂಡಕ್ಕೆ ಬೇಕು. ಚಹಾಲ್ ತಾನೊಬ್ಬ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ಉತ್ತಮ ಫಾರ್ಮ್‌ನಲ್ಲಿಲ್ಲ ಅವರಿಗೆ ವಿಶ್ರಾಂತಿ ನೀಡಿರಬಹುದು. ಆದರೆ ಅವರು ತಂಡದಲ್ಲಿದ್ದರೆ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ಹರ್ಭಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News