Mumbai Indians : ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಹೊರಗುಳಿಯುವ ಸಾಧ್ಯತೆ ಇದೆ. ಪಾದದ ಗಾಯದಿಂದಾಗಿ 17ನೇ ಆವೃತ್ತಿಯ ಐಪಿಎಲ್ ನಿಂದ ಹೊರಗುಳಿಯಲಿದ್ಧಾರೆ. ಈ ಮೊದಲು ಹಾರ್ಧಿಕ್ ಪಾಂಡ್ಯ ಗುಜರಾತ್ ತಂಡದ ನಾಯಕನಾಗಿದ್ದರು, ಮುಂಬೈ ಇಂಡಿಯನ್ಸ್ ತಂಡವು ಅವರನ್ನು ತಮ್ಮ ತಂಡದ ನಾಯಕರನ್ನಾಗಿ ಪಡೆದ ಕೊಂಡಮೇಲೆ ಪಾದ ಸಮಸ್ಯೆಗೆ ತುತ್ತಾಗಿದ್ಧಾರೆ.
ವಿಶ್ವಕಪ್ ವೇಳೆಯಲ್ಲಿ ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ತಮ್ಮ ಪಾದದ ಗಾಯಗೊಂಡಿದ್ದರು, ಅದೇ ಕಾರಣಕ್ಕೆ ವಿಶ್ವಕಪ್ನ ಇನ್ನುಳಿದ ಪಂದ್ಯಗಳನ್ನು ಆಡಿರಲಿಲ್ಲ. ಹಾರ್ದಿಕ್ ಅವರು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ T20I ಸರಣಿಯನ್ನು ಬಹುತೇಕ ಕಳೆದುಕೊಳ್ಳುವ ಸಂಭವವಿದೆ. ಅಷ್ಟೇ ಅಲ್ಲದೆ 2024ರ ಐಪಿಎಲ್ ಆವೃತ್ತಿಯಲ್ಲಿ ಅವರು ಭಾಗವಹಿಸುವುದು ಕೂಡ ಅನುಮಾನವಾಗಿದೆ.
ಇದನ್ನು ಓದಿ-"ರೋಹಿತ್ " ಮತ್ತು "ವಿರಾಟ್ " T20 ವಿಶ್ವಕಪ್ನಲ್ಲಿ ಆಡಬೇಕು: ರವಿ ಬೋಪಾರ ಹೇಳಿಕೆ !
ಹಾರ್ಧಿಕ್ ಪಾಂಡ್ಯರನ್ನು ಮೇಲೆ ಭಾರಿ ಭರವಸೆ ಇಟ್ಟಿದ್ದ ಮುಂಬೈ ತಂಡಕ್ಕೆ ಆಘಾತ ಉಂಟುಮಾಡಿದೆ. ಇವರ ನಾಯಕತ್ವದ ಮೇಲೆ ತೀರ ನಿರೀಕ್ಷೆ ಇಟ್ಟ ಮುಂಬೈ, ಹಾರ್ಧಿಕ್ರನ್ನು GT (ಗುಜರಾತ್) ತಂಡದಿಂದ ತರುವಲ್ಲಿ ಯಶಸ್ವಿಯಾಗಿತ್ತು. ಈ ಮೊದಲು ಮುಂಬೈ ಪರ ಹಲವು ಐಪಿಎಲ್ ಆವೃತ್ತಿಗಳನ್ನು ಆಡಿದ್ದು ಉತ್ತಮ ಪ್ರದರ್ಶನ ನೀಡಿದ್ದರು.
ಹಾರ್ಧಿಕ್ ಪಾಂಡ್ಯ ಮುಂಬೈ ಪರ ಆಡಿದ 7 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ 4 ಭಾರಿ ಚಾಂಪಿಯನ್ ಆಗಿತ್ತು. ಮುಂಬೈ ತಂಡವು 2022ರಲ್ಲಿ ತಮ್ಮ ತಂಡದಿಂದ ಹೊರಬಿಟ್ಟಿತ್ತು. ಆ ನಂತರ ಗುಜರಾತ್ ತಂಡವನ್ನು ಸೇರಿಕೊಂಡು ನಾಯಕನಾಗಿ 2 ವರ್ಷ ಮುನ್ನಡೆಸಿದ್ದಾರೆ.
ಇದನ್ನು ಓದಿ-ಟೀಮ್ ಇಂಡಿಯಾಕೆ ಇನ್ನೋದು ಬಿಗ್ ಶಾಕ್ ! ಟೆಸ್ಟ್ ಸರಣಿಯಿಂದ ಹೊರಗುಳಿದ "ಇಶಾನ್ ಕಿಶನ್"
ಗುಜರಾತ್ ತಂಡದ ಮೊದಲ ನಾಯಕರಾಗಿ ಹಾರ್ಧಿಕ್ ಆಯ್ಕೆಯಾಗಿದ್ದು, ಇವರ ಕ್ಯಾಪ್ಟನ್ಸಿಯಲ್ಲಿ ಆಡಿದ ಎರಡೂ ವರ್ಷವು ತಂಡವು ಫೈನಲ್ಗೆ ತಲುಪಿದೆ. ಅದರಲ್ಲಿ ಮೊದಲ ವರ್ಷವೇ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದರು, ಇದೇ ಕಾರಣಕ್ಕೆ ಮುಂಬೈ ತಂಡ ಇವರತ್ತ ಗಮನ ಹರಿಸಿತ್ತು, ಆದರೆ ಅವರ ನಿರೀಕ್ಷೆಗೆ ಹಾರ್ಧಿಕ್ ಪಾಂಡ್ಯ ಇಂಜುರಿ ಸಮಸ್ಯೆಯು ಎದುರಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.