ಒಂದೇ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಭಾರತದ ಇಬ್ಬರು ದಿಗ್ಗಜರ ವಿಶ್ವದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

Hardik Pandya Highest wicket taker in T20I vs Pakistan: 2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.

Written by - Bhavishya Shetty | Last Updated : Jun 10, 2024, 02:33 PM IST
    • ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದಾರೆ
    • ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ
    • ಹಾರ್ದಿಕ್ ಪಾಂಡ್ಯ ಅವರ ಹೆಸರಿನಲ್ಲಿ ಒಟ್ಟು 13 ವಿಕೆಟ್‌’ಗಳಿವೆ
ಒಂದೇ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಭಾರತದ ಇಬ್ಬರು ದಿಗ್ಗಜರ ವಿಶ್ವದಾಖಲೆ ಮುರಿದ ಹಾರ್ದಿಕ್ ಪಾಂಡ್ಯ title=
Hardik Pandya

IND vs PAK T20 World Cup 2024, Hardik Pandya: T20 ವಿಶ್ವಕಪ್ 2024ರ 19 ನೇ ಲೀಗ್ ಪಂದ್ಯದಲ್ಲಿ, ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದಾರೆ. ಈ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದ್ದು, ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ T20I ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.

ಇದನ್ನೂ ಓದಿ: ICC T20 World Cup 2024: ಟೀಮ್ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ತಂಡ, ಮೆನ್ ಇನ್ ಬ್ಲೂ ಗೆ 6 ರನ್ ಗಳ ರೋಚಕ ಗೆಲುವು

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 13 ರನ್ ಗಳಿಸಿದ್ದಾಗ ಫಖರ್ ಜಮಾನ್ ಅವರನ್ನು ಔಟ್ ಮಾಡಿದರೆ, ಶಾದಾಬ್ ಖಾನ್ 4 ರನ್ ಗಳಿಸಿದ್ದಾಗ ಔಟ್ ಮಾಡಿದ್ದಾರೆ. ಈ ಎರಡು ವಿಕೆಟ್‌’ಗಳ ನೆರವಿನಿಂದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಇದೀಗ ಹಾರ್ದಿಕ್ ಪಾಂಡ್ಯ ಅವರ ಹೆಸರಿನಲ್ಲಿ ಒಟ್ಟು 13 ವಿಕೆಟ್‌’ಗಳಿದ್ದು, 11 ವಿಕೆಟ್ ಪಡೆದ ಭುವಿ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಇರ್ಫಾನ್ ಪಠಾಣ್ ಮತ್ತು ಅರ್ಷದೀಪ್ ಸಿಂಗ್ ತಲಾ 6 ವಿಕೆಟ್‌’ಗಳೊಂದಿಗೆ ಜಂಟಿಯಾಗಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

13 – ಹಾರ್ದಿಕ್ ಪಾಂಡ್ಯ

11 - ಭುವನೇಶ್ವರ್ ಕುಮಾರ್

6 – ಇರ್ಫಾನ್ ಪಠಾಣ್

6 - ಅರ್ಷದೀಪ್ ಸಿಂಗ್

ಭಾರತಕ್ಕೆ ರೋಚಕ ವಿಜಯ:

ರೋಚಕ ಪಂದ್ಯದಲ್ಲಿ ಭಾರತ 6 ರನ್‌’ಗಳಿಂದ ಜಯಗಳಿಸಿದೆ. ಈ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌’ನಿಂದಾಗಿ, ಪಾಕಿಸ್ತಾನವು ಮೊದಲ ಇನಿಂಗ್ಸ್‌’ನಲ್ಲಿ ಭಾರತವನ್ನು 119 ರನ್‌’ಗಳಿಗೆ ಸೀಮಿತಗೊಳಿಸಿತು. ಎರಡನೇ ಇನಿಂಗ್ಸ್’ನಲ್ಲಿ ಟೀಂ ಇಂಡಿಯಾದ ಬೌಲಿಂಗ್ ಅಮೋಘವಾಗಿದ್ದು ಪಾಕಿಸ್ತಾನ ತಂಡ ಗೆಲುವಿಗೆ 120 ರನ್’ಗಳ ಗುರಿ ತಲುಪಲು ಸಾಧ್ಯವಾಗದೆ 20 ಓವರ್ ಗಳಲ್ಲಿ 7 ವಿಕೆಟ್’ಗೆ 113 ರನ್ ಗಳಿಸಿ 6 ರನ್’ಗಳಿಂದ ಸೋಲು ಕಂಡಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌’ನಲ್ಲಿ ಇದು 8 ನೇ ಪಂದ್ಯವಾಗಿದ್ದು, ಇದರಲ್ಲಿ ಭಾರತ 7 ಮತ್ತು ಪಾಕಿಸ್ತಾನ ಒಂದು ಪಂದ್ಯವನ್ನು ಗೆದ್ದಿದೆ.

ಇದನ್ನೂ ಓದಿ:ಟೀಂ ಇಂಡಿಯಾ ನಾಯಕನಿಗೆ ಮರೆವಿನ ಕಾಯಿಲೆ!? ಮೈದಾನದಲ್ಲಿ ರೋಹಿತ್ ವರ್ತನೆ ಕಂಡು ಶಾಕ್ ಆದ ಬಾಬರ್: ವಿಡಿಯೋ ವೈರಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News