ಟೀಂ ಇಂಡಿಯಾದ ಈ ಆಟಗಾರನಿಗೆ ಭಾರೀ ಅನ್ಯಾಯ, ಒಂದೇ ಸರಣಿಯ ಮೂಲಕ ತಂಡದಿಂದಲೇ ಕೈ ಬಿಟ್ಟ ಆಯ್ಕೆ ಮಂಡಳಿ

ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಹರ್ಷಲ್ ಪಟೇಲ್ ಅವರನ್ನು ಟೀಮ್ ಇಂಡಿಯಾ ತಂಡದಿಂದ ಕೈ ಬಿಡಲಾಗಿದೆ.

Written by - Ranjitha R K | Last Updated : Jan 3, 2022, 10:34 AM IST
  • ಆಟಗಾರನಿಗೆ ಭಾರೀ ಅನ್ಯಾಯ
  • ತಂಡದಿಂದ ಕೈ ಬಿಟ್ಟ ಆಯ್ಕೆ ಮಂಡಳಿ
  • ಟೀಮ್ ಇಂಡಿಯಾದಿಂದ ಕೈ ಬಿಟ್ಟಿರುವುದಕ್ಕೆ ಕಾರಣ ?
ಟೀಂ ಇಂಡಿಯಾದ ಈ ಆಟಗಾರನಿಗೆ ಭಾರೀ ಅನ್ಯಾಯ, ಒಂದೇ ಸರಣಿಯ ಮೂಲಕ ತಂಡದಿಂದಲೇ ಕೈ ಬಿಟ್ಟ ಆಯ್ಕೆ ಮಂಡಳಿ  title=
ಈ ಆಟಗಾರನಿಗೆ ಭಾರೀ ಅನ್ಯಾಯ (file photo)

ನವದೆಹಲಿ : ಟೀಂ ಇಂಡಿಯಾ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಟೆಸ್ಟ್ ಸರಣಿಯ ನಂತರ ಭಾರತವು ದಕ್ಷಿಣ ಆಫ್ರಿಕಾ (South Africa) ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು (ODI Series) ಆಡಬೇಕಾಗಿದೆ. ಜನವರಿ 19, 21 ಮತ್ತು 23 ರಂದು ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ. ಏಕದಿನ ಸರಣಿಗೆ ಟೀಂ ಇಂಡಿಯಾ (Team India) ಪ್ರಕಟವಾಗಿದೆ. ಆದರೆ ತಂಡ ಆಯ್ಕೆ ಮಾಡುವಲ್ಲಿ ಆಯ್ಕೆಗಾರರ ನಿರ್ಧಾರಡ ಕುರಿತಂತೆ ಇದೀಗ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ತಂಡದ ಆಯ್ಕೆ ಪ್ರಕ್ರಿಯೆಯಿಂದ ಟೀಂ ಇಂಡಿಯಾದ ಆಟಗಾರನೊಬ್ಬನಿಗ ಭಾರೀ ಅನ್ಯಾಯವಾಗಿದೆ. ಕೇವಲ ಒಂದೇ ಸರಣಿಯಲ್ಲಿ ಆಡಲು ಅವಕಾಶ ಮಾಡಿಕೊಟ್ಟು, ಇದೀಗ ಈ ಆಟಗಾರನನ್ನು ತಂಡದಿಂದಲೇ ಕೈ ಬಿಟ್ಟಿದೆ.

ಒಂದೇ ಸರಣಿಯ ಮೂಲಕ ತಂಡದಿಂದ ಹೊರಗಿಟ್ಟ ಆಯ್ಕೆ ಮಂಡಳಿ : 
ವಾಸ್ತವವಾಗಿ, ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಹರ್ಷಲ್ ಪಟೇಲ್ (Harshal Patel) ಅವರನ್ನು ಟೀಮ್ ಇಂಡಿಯಾ (Team India) ತಂಡದಿಂದ ಕೈ ಬಿಡಲಾಗಿದೆ. ಹರ್ಷಲ್ ಪಟೇಲ್, ಐಪಿಎಲ್ 2021 ರಲ್ಲಿ ಅತ್ಯಧಿಕ 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.  ಹರ್ಷಲ್ ಪಟೇಲ್ (Harshal Patel) ಆಘಾತಕಾರಿ ಬೌಲಿಂಗ್ ಆಧಾರದ ಮೇಲೆ, ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಅವರನ್ನ ತಂಡದಿಂದ ಕೈ ಬಿಟ್ಟಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. 

ಇದನ್ನೂ ಓದಿ : ಪುಟ್ಬಾಲ್ ದಂತಕಥೆ ಲಿಯೋನಿಲ್ ಮೆಸ್ಸಿ ಸೇರಿ 4 ಆಟಗಾರರಿಗೆ ಕೊರೊನಾ ಧೃಡ

ಒಂದೇ ಸರಣಿಯ ನಂತರ ತಂಡದಿಂದ ಹೊರಕ್ಕೆ : 
ಹರ್ಷಲ್ ಪಟೇಲ್ (Harshal Patel) ಅವರು ನವೆಂಬರ್ 19, 2021 ಮತ್ತು ನವೆಂಬರ್ 21, 2021 ರಂದು ನ್ಯೂಜಿಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ T20 ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು. ಈ ಎರಡೂ ಟಿ20 ಪಂದ್ಯಗಳಲ್ಲಿ ಹರ್ಷಲ್ ಪಟೇಲ್ 4 ವಿಕೆಟ್ ಕಬಳಿಸಲು ಶಕ್ತರಾಗಿದ್ದರು. ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಹರ್ಷಲ್ ಪಟೇಲ್ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ 'ಪಂದ್ಯ ಶ್ರೇಷ್ಠ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಡಿಸೆಂಬರ್ 31 ರಂದು ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಘೋಷಿಸಲಾಗಿದೆ. ಆದರೆ ಘೋಷಣೆಯಾದ ತಂಡದಿಂದ ಹರ್ಷಲ್ ಪಟೇಲ್ ಅವರನ್ನು ಕೈ ಬಿಡಲಾಗಿದೆ.  

ಟೀಮ್ ಇಂಡಿಯಾದಿಂದ ಕೈ ಬಿಟ್ಟಿರುವುದಕ್ಕೆ ಕಾರಣ ?
ಕೇವಲ ಒಂದೇ ಸರಣಿಗೆ ಅವಕಾಶ ನೀಡಿ,  ಹರ್ಷಲ್ ಪಟೇಲ್  ಅವರನ್ನು ಟೀಂ ಇಂಡಿಯಾದಿಂದ ಕೈ ಬಿಡಲಾಗಿದೆ.   ಹರ್ಷಲ್ ಪಟೇಲ್ ಅವರನ್ನು ಕಡೆಗಣಿಸಿ, ಕೆಟ್ಟ ಫಾರ್ಮ್‌ನಲ್ಲಿರುವ ಭುವನೇಶ್ವರ್ ಕುಮಾರ್‌ಗೆ (Bhuvneshwar Kumar) ಆಯ್ಕೆದಾರರು ಅವಕಾಶ ನೀಡಿದ್ದಾರೆ. 

ಇದನ್ನೂ ಓದಿ : ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಗೆ ವಿರಾಟ್ ಗೈರು ಆಗಿದ್ದೇಕೆ?

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ: 
ಕೆಎಲ್ ರಾಹುಲ್ (KL Rahul) (ನಾಯಕ), ಶಿಖರ್ ಧವನ್, ರಿತುರಾಜ್ ಗಾಯಕ್ವಾಡ್ (Ruturaj Gaikwad) , ವಿರಾಟ್ ಕೊಹ್ಲಿ (Virat Kohli), ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್ (Venkatesh Iyer), ವೆಂಕಟೇಶ್ ಅಯ್ಯರ್, ರಿಷಬ್ ಪಂತ್ (WK), ಇಶಾನ್ ಕಿಶನ್ (WK), ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ವಾಷಿಂಗ್ಟನ್ ಸುಂದರ್ (Washington Sundar), ಜಸ್ಪ್ರೀತ್ ಬುಮ್ರಾ (ಉಪನಾಯಕ), ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ (Mohammed Siraj). 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News