IND vs PAK T20 World Cup: ಸೇಡು ತೀರಿಸಿಕೊಂಡ ಭಾರತ: ಪಾಕ್ ಸದೆಬಡಿದು ಮೊದಲ ಗೆಲುವು ಸಾಧಿಸಿದ ರೋಹಿತ್ ಪಡೆ

ಇನ್ನು ಈ ಬಳಿಕ ಕಣಕ್ಕಿಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಕೇವಲ 4 ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರು. ಮತ್ತೆ ಬಂದ ಸೂರ್ಯಕುಮಾರ್ ಯಾದವ್ ಕೂಡ ನಿರೀಕ್ಷೆಯನ್ನು ಹುಸಿ ಮಾಡಿ ಕೇವಲ 15 ರನ್ ಕಲೆ ಹಾಕಿ ಔಟ್ ಆದರು.

Written by - Bhavishya Shetty | Last Updated : Oct 23, 2022, 05:24 PM IST
    • ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಕಾದಾಟ
    • ಮೊದಲ ಪಂದ್ಯದಲ್ಲೇ ಗೆದ್ದು ಅಬ್ಬರಿಸಿದ ಭಾರತ
    • ಮೆಲ್ಬರ್ನ್ ನ ಎಂಸಿಜಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ
IND vs PAK T20 World Cup: ಸೇಡು ತೀರಿಸಿಕೊಂಡ ಭಾರತ: ಪಾಕ್ ಸದೆಬಡಿದು ಮೊದಲ ಗೆಲುವು ಸಾಧಿಸಿದ ರೋಹಿತ್ ಪಡೆ  title=
Team India

ಇಂದು ಮೆಲ್ಬರ್ನ್ ನ ಎಂಸಿಜಿ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ರೋಚಕ ಪಂದ್ಯ ಗೆದ್ದಿದೆ. ರೋಚಕ ಪೈಪೋಟಿ ನೀಡಿದ್ದ ಭಾರತ, ಪಾಕಿಸ್ತಾನವನ್ನು ಬಗ್ಗುಬಡಿದಿದೆ. 2021ರಲ್ಲಿ ಪಾಕ್ ವಿರುದ್ಧ ಸೋಲು ಕಂಡಿದ್ದ ಟೀಂ ಇಂಡಿಯ ಸೇಡು ತೀರಿಸಿಕೊಳ್ಳುವ ತವಕದಲ್ಲಿತ್ತು.

ಇದನ್ನೂ ಓದಿ: Rohit Sharma Emotional Expression: ರಾಷ್ಟ್ರಗೀತೆ ಕೇಳುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರು ಹಾಕಿದ ರೋಹಿತ್ ಶರ್ಮಾ! ವಿಡಿಯೋ ನೋಡಿ

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಭರ್ಜರಿ ಆಟವನ್ನಾಡಿದೆ. ಭಾರತದ ಪರವಾಗಿ ಬೌಲರ್ ಗಳಾದ ಅರ್ಷದೀಪ್  ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಮೂರು ವಿಕೆಟ್ ಪಡೆದಿದ್ದಾರೆ. ಇನ್ನುಳಿದಂತೆ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಉರುಳಿಸಿದ್ದಾರೆ. ಭಾರತದ ಬೌಲಿಂಗ್ ಗೆ ತತ್ತರಿಸಿದ ಪಾಕ್ ಎಂಟು ವಿಕೆಟ್ ನಷ್ಟಕ್ಕೆ 20 ಓವರ್ ನಲ್ಲಿ 159 ರನ್ ಕಲೆ ಹಾಕಿದೆ.

ಇನ್ನು ಈ ಬಳಿಕ ಕಣಕ್ಕಿಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಕೇವಲ 4 ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರು. ಮತ್ತೆ ಬಂದ ಸೂರ್ಯಕುಮಾರ್ ಯಾದವ್ ಕೂಡ ನಿರೀಕ್ಷೆಯನ್ನು ಹುಸಿ ಮಾಡಿ ಕೇವಲ 15 ರನ್ ಕಲೆ ಹಾಕಿ ಔಟ್ ಆದರು.

ಇದನ್ನೂ ಓದಿ: Rohit Sharma: ಎಂಟು T20 ವಿಶ್ವಕಪ್ ನಲ್ಲಿ ಆಡಿದ ಟೀಂ ಇಂಡಿಯಾದ ಮೊದಲ ಸ್ಟಾರ್ ಆಟಗಾರ ಈತ!

ಇನ್ನೊಂದೆಡೆ ಅಕ್ಷರ್ ಪಟೇಲ್ ಕೂಡ ಕೇವಲ 2 ರನ್ ಗಳಿಸಿ ಔಟ್ ಆದರು. ಆ ಬಳಿಕ ಅಂಗಣದಲ್ಲಿ ವಿರಾಟ್ ಮತ್ತು ಹಾರ್ದಿಕ್ ಅಬ್ಬರಿಸಿದ್ದಾರೆ. ಆದರೆ 40 ರನ್ ನೀಡಿದ ಬಳಿಕ ಪಾಂಡ್ಯ ಔಟ್ ಆದರು. ಆ ಬಳಿಕ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಆಟದ ಗತಿಯನ್ನೇ ಬದಲಾಯಿಸಿದರು. ಆದರೆ ದಿನೇಶ್ ಕಾರ್ತಿಕ್  ಔಟ್ ಆದಾಗ ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. ಈ ಬಳಿಕ ರವಿ ಚಂದ್ರನ್ ಅಶ್ವಿನ್ ಕಣಕ್ಕಿಳಿದರು. ಅಂತಿಮವಾಗಿ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News