T20I ಮತ್ತು ODI ನಾಯಕರಾದ ನಂತರ ರೋಹಿತ್ ಶರ್ಮಾ ಸಂಭಾವನೆ ಎಷ್ಟು ಹೆಚ್ಚಾಗುತ್ತೆ? ಸಂಪೂರ್ಣ ವಿವರ ತಿಳಿಯಿರಿ

ರೋಹಿತ್ ಸೀಮಿತ ಓವರ್‌ಗಳೆರಡರಲ್ಲೂ ಟೀಂ ಇಂಡಿಯಾ ನಾಯಕರಾಗಿರುವುದರಿಂದ ಹಿಟ್‌ಮ್ಯಾನ್‌ಗೆ ಬಡ್ತಿ ಸಿಕ್ಕಾಗ ಅವರ ಸಂಭಾವನೆ ಹೆಚ್ಚಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

Written by - Puttaraj K Alur | Last Updated : Dec 11, 2021, 06:32 AM IST
  • ರೋಹಿತ್ ಶರ್ಮಾ ಈಗ T20I ಮತ್ತು ODI ಎರಡೂ ಫಾರ್ಮ್ಯಾಟ್‌ಗಳ ನಾಯಕ
  • ರೋಹಿತ್ ಶರ್ಮಾರ ನಾಯಕತ್ವ ಗುಣ ಹೊಗಳಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
  • 2 ಫಾರ್ಮ್ಯಾಟ್‌ಗಳ ನಾಯಕ ರೋಹಿತ್ ಶರ್ಮಾರ ಸಂಭಾವನೆ ಹೆಚ್ಚಾಗುತ್ತಾ?
T20I ಮತ್ತು ODI ನಾಯಕರಾದ ನಂತರ ರೋಹಿತ್ ಶರ್ಮಾ ಸಂಭಾವನೆ ಎಷ್ಟು ಹೆಚ್ಚಾಗುತ್ತೆ? ಸಂಪೂರ್ಣ ವಿವರ ತಿಳಿಯಿರಿ  title=
ರೋಹಿತ್ ಸಂಭಾವನೆ ಹೆಚ್ಚಾಗುತ್ತಾ?

ನವದೆಹಲಿ: ಟಿ-20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ರೋಹಿತ್ ಶರ್ಮಾ(Rohit Sharma) ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಏಕೆಂದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ 2 ವಿಭಿನ್ನ ನಾಯಕರನ್ನು ಹೊಂದುವುದು ಆಯ್ಕೆದಾರರಿಗೆ ಇಷ್ಟವಿರಲಿಲ್ಲ.

ಆಯ್ಕೆಗಾರರ ಮಹತ್ವದ ನಿರ್ಧಾರ  

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರೋಹಿತ್ ಶರ್ಮಾ(Rohit Sharma) ಅವರನ್ನು ಎರಡೂ ಮಾದರಿ(T20I & ODI)ಗಳ ನಾಯಕರನ್ನಾಗಿ ಮಾಡುವುದು ಆಯ್ಕೆಗಾರರ ​​ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ರೋಹಿತ್ 2 ಫಾರ್ಮ್ಯಾಟ್‌ಗಳ ನಾಯಕ

ಸೌರವ್ ಗಂಗೂಲಿ ಈ ಬಗ್ಗೆ ಮಾತನಾಡಿದ್ದು, ‘ಇದು ಬಿಸಿಸಿಐ ಮತ್ತು ಆಯ್ಕೆದಾರರು ಜಂಟಿಯಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ವಾಸ್ತವವಾಗಿ ಮಂಡಳಿಯು ಟಿ-20 ನಾಯಕತ್ವವನ್ನು ಬಿಟ್ಟುಕೊಡದಂತೆ ವಿರಾಟ್‌ಗೆ ಮನವಿ ಮಾಡಿತ್ತು, ಆದರೆ ಅವರು ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿದ್ದರು. ಎರಡು ವೈಟ್ ಬಾಲ್ ಮಾದರಿಗಳಲ್ಲಿ ವಿಭಿನ್ನ ನಾಯಕರನ್ನು ಹೊಂದುವುದು ಸರಿಯಲ್ಲವೆಂದು ಆಯ್ಕೆಗಾರರು ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

Sorav-Gandooly.jpg

ಇದನ್ನೂ ಓದಿ: ನಾನು ಟೀಂ ಇಂಡಿಯಾ ಕೋಚ್ ಆಗಬಾರದೆಂದು ದೊಡ್ಡ ಪ್ರಯತ್ನ ನಡೆದಿತ್ತು: ರವಿಶಾಸ್ತ್ರಿ

ರೋಹಿತ್ ಶರ್ಮಾರನ್ನು ಹೊಗಳಿದ ಗಂಗೂಲಿ  

ರೋಹಿತ್ ಶರ್ಮಾ ಅವರನ್ನು ಹೊಗಳಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly), ‘ರೋಹಿತ್ ಏಕದಿನದಲ್ಲಿ ನಾಯಕತ್ವ ವಹಿಸಿದಾಗಲೆಲ್ಲಾ ಅವರ ದಾಖಲೆಗಳನ್ನು ನೋಡಿದರೆ, ಅವರು ಅತ್ಯುತ್ತಮವಾಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ನ ಎರಡೂ ಮಾದರಿಗಳಲ್ಲಿ ಇಬ್ಬರು ವಿಭಿನ್ನ ನಾಯಕರು ಇರಬಾರದು ಎಂಬುದು ಮುಖ್ಯವಾದ ವಿಷಯ’ ಅಂತಾ ಹೇಳಿದ್ದಾರೆ.

ರೋಹಿತ್ ಅವರ ಶ್ರೇಷ್ಠ ನಾಯಕತ್ವದ ದಾಖಲೆ

Rohit-Sharma-2.jpg

ರೋಹಿತ್ ಶರ್ಮಾ 10 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದಾರೆ ಮತ್ತು ಈ ಅವಧಿಯಲ್ಲಿ 10 ಪಂದ್ಯಗಳಲ್ಲಿಯೂ ಅವರು ಯಶಸ್ಸನ್ನು ಸಾಧಿಸಿದ್ದಾರೆ. 2018ರಲ್ಲಿ ಅವರು ತಮ್ಮ ನಾಯಕತ್ವದಲ್ಲಿ ಏಷ್ಯಾ ಕಪ್ ಗೆಲ್ಲಲು ಭಾರತವನ್ನು ಮುನ್ನಡೆಸಿದ್ದರು. ಟಿ-20 ಇಂಟರ್‌ನ್ಯಾಶನಲ್ ಬಗ್ಗೆ ಮಾತನಾಡುತ್ತಾ, ‘ಹಿಟ್‌ಮ್ಯಾನ್’ ಅವರು 22 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, ಅದರಲ್ಲಿ ಅವರು 18 ಬಾರಿ ಗೆದ್ದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್

ರೋಹಿತ್ ಶರ್ಮಾ 2018ರ ನಿದಾಹಾಸ್ ಟ್ರೋಫಿಯನ್ನು ಅದ್ಭುತ ರೀತಿಯಲ್ಲಿ ವಶಪಡಿಸಿಕೊಂಡರು. ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಇದನ್ನೂ ಓದಿ: IPL 2022 Mega Auction ನಲ್ಲಿ ಅತ್ಯಂತ ದುಬಾರಿ ಈ ವಿಕೆಟ್-ಕೀಪರ್ ಗಳು!

ರೋಹಿತ್ ಶರ್ಮಾ ಪಡೆಯುವ ಸಂಭಾವನೆ ಎಷ್ಟು?

Team-India.jpg

ಇದೀಗ ರೋಹಿತ್ ಸೀಮಿತ ಓವರ್‌ಗಳೆರಡರಲ್ಲೂ ಟೀಂ ಇಂಡಿಯಾ ನಾಯಕರಾಗಿರುವುದರಿಂದ ಹಿಟ್‌ಮ್ಯಾನ್‌ಗೆ ಬಡ್ತಿ ಸಿಕ್ಕಾಗ ಅವರ ಸಂಭಾವನೆ(Rohit Sharma Salary Hike) ಹೆಚ್ಚಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಉತ್ತರ ‘ಇಲ್ಲ’ ಏಕೆಂದರೆ ರೋಹಿತ್ BCCI ವಾರ್ಷಿಕ ಒಪ್ಪಂದದಡಿ 7 ಕೋಟಿ ಸಂಭಾವನೆ ಪಡೆಯುತ್ತಾರೆ. ಅವರು A + ವರ್ಗದ ಆಟಗಾರರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿ ಕೂಡ ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರೆ. ರೋಹಿತ್ ಈಗಾಗಲೇ ಗರಿಷ್ಠ ಮಟ್ಟದ ಸಂಭಾವನೆ ಪಡೆಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಾಯಕನಾದ ಬಳಿಕ ಸದ್ಯಕ್ಕೆ ಸಂಭಾವನೆ ಹೆಚ್ಚಾಗುವುದಿಲ್ಲವೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News