ನವದೆಹಲಿ: ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲನ್ನು ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ನ್ಯೂಜಿಲೆಂಡ್ ತಂಡವು ಭಾರತ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಕೇವಲ 110 ರನ್ ಗಳಿಗೆ ಕಟ್ಟಿ ಹಾಕಿತು.ಭಾರತದ ಪರವಾಗಿ ಕೊನೆಯಲ್ಲಿ ಗಳಿಸಿದ ಹಾರ್ದಿಕ್ ಪಾಂಡ್ಯ(23) ಹಾಗೂ ರವೀಂದ್ರ ಜಡೇಜಾ ಗಳಿಸಿದ( 26) ರನ್ ಗಳೇ ಅತ್ಯಧಿಕ ಮೊತ್ತವಾಗಿತ್ತು.
ಇದನ್ನೂ ಓದಿ: Puneeth Rajkumar: ಕರುನಾಡಿನ ಪೀತಿಯ ‘ಅಪ್ಪು’ಗೆ ಭಾವಪೂರ್ಣ ವಿದಾಯ, ಅಂತಿಮ ಸಂಸ್ಕಾರದಲ್ಲಿ ಗಣ್ಯರ ಕಂಬನಿ
Sensational New Zealand stun India in Dubai to leave them teetering on the edge. #INDvNZ report 👇 #T20WorldCup https://t.co/ryXFXl0IPo
— ICC (@ICC) October 31, 2021
ಇನ್ನೊಂದೆಡೆಗೆ ಕೀವಿಸ್ ಪರವಾಗಿ ಬೌಲ್ಟ್ ಮೂರು ಹಾಗೂ ಇಷ್ ಸೋಧಿ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.ಈ ಅಲ್ಪ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಡೈರ್ಲ್ ಮಿಚೆಲ್ 49 ಹಾಗೂ ಕೇನ್ ವಿಲಿಯಮ್ಸನ್ ಅವರ 33 ರನ್ ಗಳ ನೆರವಿನಿಂದ ಕೇವಲ ಎರಡು ವಿಕೆಟ್ ಕಳೆದುಕೊಂಡು 14.3 ಓವರ್ ಗಳಲ್ಲಿ 111 ರನ್ ಗಳ ಗೆಲುವಿನ ಗುರಿಯನ್ನು ತಲುಪಿತು.
ಇನ್ನೊಂದೆಡೆಗೆ ಈಗ ಸತತ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿರುವ ಭಾರತ ತಂಡವು ಮುಂದಿನ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ