ನವದೆಹಲಿ: ಇಂಗ್ಲೆಂಡಿನ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2019 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 50 ಓವರ್ ಗಳಲ್ಲಿ 8 ವಿಕೆಟ್ 241 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡವು 29 ರನ್ ಗಳಾಗುವಷ್ಟರಲ್ಲಿ ಮಾರ್ಟಿನ್ ಗುಪ್ಟಿಲ್ ಅವಾ ವಿಕೆಟ್ ನ್ನು ಕಳೆದುಕೊಂಡು ಆಘಾತ ಅನುಭವಿಸಿತು. ಒಂದು ಹಂತದಲ್ಲಿ ಉತ್ತಮ ಆಟದ ಭರವಸೆ ಮೂಡಿಸಿದ ಕೇನ್ ವಿಲಿಯಮ್ಸನ್ ಕೇವಲ 30 ರನ್ ಗಳಿಗೆ ಔಟಾಗಿ ನಿರ್ಗಮಿಸಿದರು. ಇನ್ನೊಂದೆಡೆಗೆ ಹೆನ್ರಿ ನಿಕೋಲಸ್ 77 ಎಸೆತಗಳಲ್ಲಿ 55 ರನ್ ಗಳನ್ನು ಗಳಿಸಿದರು.
New Zealand manage 241/8 – their batters were not allowed to build on starts, with Nicholl's 55 the highest of the innings.
Who is on top at the halfway stage? #WeAreEngland | #CWC19 | #BackTheBlackCaps pic.twitter.com/blUCF1D2yL
— ICC (@ICC) July 14, 2019
ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಸ್ ಟೇಲರ್ (15) ಇಂದು ಎಲ್ಬಿಡಬ್ಲ್ಯೂಗೆ ಔಟಾಗುವುದರ ಮೂಲಕ ನಿರಾಸೆ ಮೂಡಿಸಿದರು. ಇದಾದ ನಂತರ ಟಾಮ್ ಲಾಥಂ ಅವರು 47 ರನ್ ಗಳಿಸಿ ತಂಡದ ಮೊತ್ತ 200 ದಾಟಿಸುವಲ್ಲಿ ಮಹತ್ವದ ಪಾತ್ರ ಮೆರೆದರು.
Nicholls (55), Latham (47) and Woakes (3-37) the pick of the bunch in the first innings.
Is 241 enough? #CWC19 pic.twitter.com/h33lzuNaHp
— cricket.com.au (@cricketcomau) July 14, 2019
ಭಾರತ ತಂಡವನ್ನು ಕಟ್ಟಿ ಹಾಕಿ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿ ನ್ಯೂಜಿಲೆಂಡ್ ತಂಡ ಈಗ ಸಾಧಾರಣ ಮೊತ್ತಕ್ಕೆ ಔಟಾಗಿದೆ. ಇಂಗ್ಲೆಂಡ್ ತಂಡದ ಪರವಾಗಿ ಕ್ರಿಸ್ ವೋಕ್ಸ್ ಹಾಗೂ ಲಿಯಾಂ ಪ್ಲಂಕೆಟ್ ಅವರು ತಲಾ ಮೂರು ವಿಕೆಟ್ ಪಡೆಯುವ ಮೂಲಕ ಕೀವಿಸ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಇನ್ನೊಂದೆಡೆ ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವ ಇಂಗ್ಲೆಂಡ್ ತಂಡವನ್ನು ಕೀವಿಸ್ ಈ ಅಂತಿಮ ಹಣಾಹಣಿಯಲ್ಲಿ ಕಟ್ಟಿ ಹಾಕುತ್ತಾ ಎನ್ನುವುದನ್ನು ನಾವು ಕಾಯ್ದು ನೋಡಬೇಕಾಗಿದೆ.