IND vs AUS: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲಿಗೆ ಪ್ರಮುಖ ಕಾರಣಗಳಿವು!

Under-19 World Cup Final: U-19 ವಿಶ್ವಕಪ್‌ನ ಆರಂಭದಿಂದಲೂ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದರು... ಆದರೆ, ಫೈನಲ್ ಪಂದ್ಯದಲ್ಲಿ ಕೇವಲ 8 ರನ್‌ಗಳಿಗೆ ಔಟಾದರು..

Written by - Savita M B | Last Updated : Feb 12, 2024, 10:32 AM IST
  • U-19 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ಭಾರತದ ಕನಸು ಭಗ್ನಗೊಂಡಿದೆ.
  • ಭಾರತದ ಯುವ ಆಟಗಾರರು ಸತತ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದರೂ ಅದು ಸಾಧ್ಯವಾಗಲಿಲ್ಲ
  • ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ವಿಜಯಿಯಾಯಿತು
IND vs AUS: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲಿಗೆ ಪ್ರಮುಖ ಕಾರಣಗಳಿವು! title=

IND vs AUS: U-19 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ಭಾರತದ ಕನಸು ಭಗ್ನಗೊಂಡಿದೆ. ಭಾರತದ ಯುವ ಆಟಗಾರರು ಸತತ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದರೂ ಅದು ಸಾಧ್ಯವಾಗಲಿಲ್ಲ.. ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ವಿಜಯಿಯಾಯಿತು. ‌

ಭಾನುವಾರ ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸೀಸ್ 79 ರನ್ ಗಳ ಜಯ ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದುಕೊಂಡಿತು. ಭಾರತವು ಪ್ರಶಸ್ತಿ ಬೇಟೆಯಿಂದ ಒಂದು ಹೆಜ್ಜೆ ದೂರವಿರಲು ಹಲವಾರು ಪ್ರಮುಖ ಕಾರಣಗಳಿವೆ..

ಇದನ್ನೂ ಓದಿ-ಅದೃಷ್ಟ ಅಂದ್ರೆ ಇದೇ ಅನ್ಸುತ್ತೆ...! ಸ್ಟಂಪ್ ಮಧ್ಯೆಯೇ ಬಾಲ್ ಹೋದ್ರೂ ಔಟಾಗ್ಲಿಲ್ಲ ಬ್ಯಾಟ್ಸ್’ಮನ್- ವಿಡಿಯೋ ನೋಡಿ

*U-19 ವಿಶ್ವಕಪ್‌ನ ಆರಂಭದಿಂದಲೂ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದರು... ಆದರೆ, ಫೈನಲ್ ಪಂದ್ಯದಲ್ಲಿ ಕೇವಲ 8 ರನ್‌ಗಳಿಗೆ ಔಟಾದರು.

*ಭಾರತೀಯ ಬೌಲರ್‌ಗಳ ಪ್ರದರ್ಶನ ಅಂತಿಮ ಪಂದ್ಯದಂತಿರಲಿಲ್ಲ... ಆಸ್ಟ್ರೇಲಿಯ 16 ರನ್‌ಗಳಿಗೆ ಮೊದಲ ವಿಕೆಟ್ ಪಡೆದರೂ.. ಭಾರತದ ಬೌಲರ್‌ಗಳಿಗೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಆಕ್ರಮಣವನ್ನು ನಿರೀಕ್ಷಿತ ಮಟ್ಟದಲ್ಲಿ ತಡೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಸಂಪೂರ್ಣ ಓವರ್‌ಗಳನ್ನು ಆಡಿದ ಆಸ್ಟ್ರೇಲಿಯಾ 253 ರನ್ ಗಳಿಸಿತು. 

*ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮುಶೀರ್ ಖಾನ್ ಎರಡು ಬಾರಿ ಔಟಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.. ಎರಡು ಬಾರಿ ಅವಕಾಶ ಸಿಕ್ಕರೂ ನಿರೀಕ್ಷಿತ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೇವಲ 22 ರನ್ ಗಳಿಸಿ ಔಟಾದರು.

*ಭಾರತ ತಂಡದ ಆರಂಭಿಕ ಆಟಗಾರ ಆದರ್ಶ್ ಸಿಂಗ್ 77 ಎಸೆತಗಳಲ್ಲಿ 47 ರನ್ ಗಳಿಸಿದರು. ಆದರೆ, ಆರಂಭದಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ತಂಡದ ಮೇಲೆ ಪರಿಣಾಮ ಬೀರಿತು. ಉಳಿದ ಬ್ಯಾಟ್ಸ್‌ಮನ್‌ಗಳು ಗಳಿಸಬೇಕಾದ ರನ್‌ಗಳು ಹೆಚ್ಚಾಗಿದ್ದರಿಂದ ಒತ್ತಡಕ್ಕೆ ಸಿಲುಕಿ.. ಭಾರತದ ಯುವ ಆಟಗಾರರು ರನ್ ಗಳಿಸಲು ವಿಫಲರಾದರು.

*ಭಾರತ ತಂಡದ ಮಧ್ಯಮ ಕ್ರಮಾಂಕದ ಕಳಪೆ ಪ್ರದರ್ಶನವೂ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಭಾರತದ ಇನ್ನಿಂಗ್ಸ್‌ನಲ್ಲಿ ಮುಶೀರ್ ಖಾನ್ (22) ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್‌ಗಳು 3 ರಿಂದ 7 ರವರೆಗಿನ 10 ರನ್‌ಗಳ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತ ತಂಡ ಪ್ರಶಸ್ತಿಯ ಬೇಟೆಯಲ್ಲಿ ಹಿಂದುಳಿಯಿತು..

*ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋತರೂ ಅಂಡರ್ 19 ವಿಶ್ವಕಪ್ ನಲ್ಲಿ ತಂಡದ ಪಯಣ ಅದ್ಭುತ ಎಂದೇ ಹೇಳಬಹುದು. ಸೆಮಿಫೈನಲ್‌ವರೆಗೂ ಭಾರತ ಒಂದೇ ಒಂದು ಪಂದ್ಯವನ್ನು ಸೋತಿಲ್ಲ..

ಇದನ್ನೂ ಓದಿ-ಟೀಂ ಇಂಡಿಯಾಗೆ ಸಿಕ್ಕೇಬಿಟ್ರು ಜೂನಿಯರ್ ಧೋನಿ! 19ರ ಹರೆಯದ ಈ ಅದ್ಭುತ ಆಟಗಾರನಿಗೆ CSKಯಲ್ಲಿ ಸ್ಥಾನ

ಭಾರತದ ಸೋಲಿನ ನಂತರ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದು... "ಗೆಲುವಿನಿಂದ ಪ್ರತಿಕೂಲದವರೆಗೆ, ಪ್ರತಿ ಪಂದ್ಯವು ಬಾರತ್ ತಂಡದ ಅದಮ್ಯ ಮನೋಭಾವ, ದೃಢತೆ ಮತ್ತು ಕೌಶಲ್ಯಕ್ಕೆ ಸಾಕ್ಷಿಯಾಗಿದೆ.. ತಂಡದ ಪ್ರತಿಯೊಬ್ಬ ಸದಸ್ಯರಿಗೂ, ನಾನು ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ" ಎಂದು ಐಸಿಸಿ ಅಂಡರ್-19 ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾದ ಅಂಡರ್-19 ತಂಡವನ್ನು ಜೈಶಾ ಅಭಿನಂದಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News