ನವದೆಹಲಿ: ಇಂಗ್ಲೆಂಡ್ ವಿರುದ್ದ ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 66 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: IND vs ENG ODI: ಇಂದಿನಿಂದ ಏಕದಿನ ಸರಣಿ ಆರಂಭ, ಈ ಆಟಗಾರರತ್ತ ಎಲ್ಲರ ಚಿತ್ತ
ಭಾರತದ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ 98, ಕೊಹ್ಲಿ 56, ಕೆ.ಎಲ್.ರಾಹುಲ್ 62, ಕ್ರುನಾಲ್ ಪಾಂಡ್ಯ 58 ರನ್ ಗಳಿಸಿದರು.ವಿಶೇಷವೆಂದರೆ ಮೊದಲ ಏಕದಿನ ಪಂದ್ಯದಲ್ಲಿ ವೇಗದ ಅರ್ಧಶತಕವನ್ನು ಗಳಿಸಿದ ಸಾಧನೆಯನ್ನು ಅವರು ಈ ಪಂದ್ಯದಲ್ಲಿ ನಿರ್ಮಿಸಿದರು.ಕೇವಲ 26 ಎಸೆತಗಳಲ್ಲಿ ಅವರು ತಮ್ಮ ಅರ್ಧಶತಕವನ್ನು ಸಿಡಿಸಿ ಕೊನೆಗೆ ಅಜೇಯರಾಗಿ ಉಳಿದರು. ಕ್ರುನಾಲ್ (Krunal Pandya) ಅವರು ಭರ್ಜರಿ ಏಳು ಬೌಂಡರಿ ಹಾಗೂ 2 ಸಿಕ್ಸರ್ ಗಳನ್ನು ನೀಡಿದರು.
ಇದನ್ನೂ ಓದಿ: ಬೃಹತ್ ಮೊತ್ತ ಪೂರೈಸಿದ ಭಾರತ: ಚೇಸಿಂಗ್ ನತ್ತ ಇಂಗ್ಲೆಂಡ್ ತಂಡ
Krunal Pandya and Prasidh Krishna shine on their ODI debuts as India beat England by 66 runs.
The hosts lead the series 1-0!#INDvENG | https://t.co/8Dw1dxYDEK pic.twitter.com/48GVR9H0Rz
— ICC (@ICC) March 23, 2021
ಭಾರತ ತಂಡವು ನೀಡಿದ 318 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 42.1 ಓವರ್ ಗಳಲ್ಲಿ 251 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.ಒಂದು ಹಂತದಲ್ಲಿ ಜೇಸನ್ ರಾಯ್ ಹಾಗೂ ಜಾನಿ ಬೇರ್ ಸ್ಟೋ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಗೆಲುವಿನ ಹಂತಕ್ಕೆ ತಲುಪಿತ್ತು.ಆದರೆ ಚೊಚ್ಚಲ ಪಂದ್ಯದಲ್ಲಿಯೇ ಮಾರಕ ಬೌಲಿಂಗ್ ದಾಳಿ ಮಾಡಿದ ಪ್ರಸಿದ್ಧ ಕೃಷ್ಣಾ ನಾಲ್ಕು ಪ್ರಮುಖ ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ಪತನಕ್ಕೆ ಕಾರಣವಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ