IND vs PAK Asia Cup 2022: ಪಾಕ್ ಆಟಗಾರನ ಈ ಒಂದು ಕೆಲಸಕ್ಕೆ ಮೈದಾನವೇ ಪ್ರಶಂಸಿದೆ: ಯಾರಾತ? ಕಾರಣವೇನು?

ಪಾಕಿಸ್ತಾನದ ನಾಯಕ ಬಾಬರ್ ಅಜಮ್  ಔಟಾದ ನಂತರ, ಫಖರ್ ಜಮಾನ್ ಬ್ಯಾಟಿಂಗ್‌ಗೆ ಬಂದು 2 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಲಯದಲ್ಲಿದ್ದರು ಎಂದು ತೋರಿಸಿದರು. ಆದರೆ ಅವೇಶ್ ಖಾನ್ ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರನ್ನು ಪೆವಿಲಿಯನ್ ಗೆ ಮರಳುವಂತೆ ಮಾಡಿದರು.

Written by - Bhavishya Shetty | Last Updated : Aug 29, 2022, 09:42 AM IST
    • ಫಖರ್ ಜಮಾನ್ ಕ್ರೀಡಾ ಮನೋಭಾವಕ್ಕೆ ಕ್ರಿಕೆಟ್ ಪ್ರಿಯರ ಪ್ರಶಂಸೆ
    • ಕಳೆದ ದಿನ ನಡೆದಿದ್ದ ಕ್ರಿಕೆಟ್ ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ
    • ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಹಾರ್ದಿಕ್ ಪಾಂಡ್ಯ ಪಡೆದಿದ್ದಾರೆ
IND vs PAK Asia Cup 2022: ಪಾಕ್ ಆಟಗಾರನ ಈ ಒಂದು ಕೆಲಸಕ್ಕೆ ಮೈದಾನವೇ ಪ್ರಶಂಸಿದೆ: ಯಾರಾತ? ಕಾರಣವೇನು? title=
IND Vs Pak

ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್‌ ಜೊತೆಗೆ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಬಲದಿಂದ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ 10 ತಿಂಗಳ ಹಿಂದೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ 10 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ. ಆದರೆ ಈ ಪಂದ್ಯದ ವೇಳೆ, ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಫಖರ್ ಜಮಾನ್ ತೋರಿಸಿದ ಕ್ರೀಡಾ ಮನೋಭಾವ ಎಲ್ಲರ ಮನಗೆದ್ದಿದೆ.

ಪಾಕಿಸ್ತಾನದ ನಾಯಕ ಬಾಬರ್ ಅಜಮ್  ಔಟಾದ ನಂತರ, ಫಖರ್ ಜಮಾನ್ ಬ್ಯಾಟಿಂಗ್‌ಗೆ ಬಂದು 2 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಲಯದಲ್ಲಿದ್ದರು ಎಂದು ತೋರಿಸಿದರು. ಆದರೆ ಅವೇಶ್ ಖಾನ್ ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರನ್ನು ಪೆವಿಲಿಯನ್ ಗೆ ಮರಳುವಂತೆ ಮಾಡಿದರು. ಫಖರ್ ಜಮಾನ್ 6 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 10 ರನ್ ಗಳಿಸಿದರು ಮತ್ತು ಪಾಕಿಸ್ತಾನ ಒಟ್ಟು 42 ರನ್ ಗಳಿಸುವಷ್ಟರಲ್ಲಿ ಫಖರ್ ರೂಪದಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. 

ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ತಂಡವೇ ಕಿಂಗ್..!‌ ದಾಖಲೆಗಳು ಹೇಳೋದೇನು..?

ಅವೇಶ್ ಖಾನ್ ಪಂದ್ಯದ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದು, ಮೊಹಮ್ಮದ್ ರಿಜ್ವಾನ್ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರೆ, ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಅವೇಶ್ ಮೊದಲ ನಾಲ್ಕು ಎಸೆತಗಳಲ್ಲಿ 12 ರನ್ ಬಿಟ್ಟುಕೊಟ್ಟಿದ್ದರು. ಆದರೆ ನಂತರ ಐದನೇ ಎಸೆತದಲ್ಲಿ ಫಖರ್ ಜಮಾನ್ ಅವರ ವಿಕೆಟ್ ಅವೇಶ್ ಖಾತೆಗೆ ಬಂದಿತ್ತು. ಇದಕ್ಕಾಗಿ ಅವರು ಮನವಿ ಮಾಡಲಿಲ್ಲ ಅಥವಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮನವಿ ಮಾಡಲಿಲ್ಲ. ಫಖರ್ ಯಾವುದೇ ಮನವಿ ಮಾಡದೆ ಕ್ರೀಸ್ ತೊರೆದು ತಾನಾಗಿಯೇ ಹೊರನಡೆದರು.

ಅವೇಶ್ ಖಾನ್ ಅವರ ಐದನೇ ಓವರ್ ಫಖರ್ ಜಮಾನ್ ಅವರ ಬ್ಯಾಟ್ ಅನ್ನು ಮುಟ್ಟಿದ ನಂತರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಕೈಗೆ ಹೋಗಿತ್ತು. ಆದರೆ ಬ್ಯಾಟ್ ಮತ್ತು ಬಾಲ್ ಡಿಕ್ಕಿ ಹೊಡೆದ ಸದ್ದಿನಿಂದಾಗಿ ಇಬ್ಬರೂ ಹೆಚ್ಚು ಮನವಿ ಮಾಡಲಿಲ್ಲ.  ಆದರೆ, ಇದರ ಹೊರತಾಗಿಯೂ ಸ್ವತಃ ಫಖರ್ ಜಮಾನ್ ಕ್ರೀಸ್ ತೊರೆದು ನಿರ್ಗಮಿಸಿದ್ದರು. ಇದಾದ ಬಳಿಕ ಅಂಪೈರ್ ಅವರನ್ನು ಔಟ್ ಮಾಡಿದ್ದರಿಂದ ಭಾರತ ತಂಡ ಖುಷಿಯಿಂದ ಕುಣಿದಾಡಿತ್ತು.

ಇನ್ನು ಫಖರ್ ಜಮಾನ್ ಅವರ ಕ್ರೀಡಾಸ್ಫೂರ್ತಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಅಭಿಮಾನಿಗಳು ಅವರನ್ನು ಹೊಗಳುತ್ತಿದ್ದಾರೆ, ಭಾರತದ ಜನರು ಸಹ ಅವರ ನಡೆಯನ್ನು ಕೊಂಡಾಡುತ್ತಿದ್ದಾರೆ. 

ಇದನ್ನೂ ಓದಿ: IND vs PAK: ಕಾರ್ಗಿಲ್ ಯುದ್ಧದ ವೇಳೆ ಭಾರತ - ಪಾಕ್ ಪಂದ್ಯ ನಡೆದಾಗ..!

ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮಾರಕ ಬೌಲಿಂಗ್‌ಗೆ ಪಾಕಿಸ್ತಾನ ತಂಡ ತತ್ತರಿಸಿದ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಪಾಕ್ ನೀಡಿದ ಗುರಿಯನ್ನು ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಭಾರತದ ಪರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ  ತಲಾ 35 ರನ್ ಗಳಿಸಿದರೆ, ಭುವನೇಶ್ವರ್ ಕುಮಾರ್ 4 ಮತ್ತು ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದರು. ಪಾಂಡ್ಯ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಓವರ್‌ನಲ್ಲಿ ಸಿಕ್ಸರ್ ಬಾರಿಸಿ ಗೆಲುವು ಸಾಧಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅವರು ಭಾಜನರಾದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News