ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ (Ind Vs NZ) ನಡುವಿನ ಸರಣಿಯ ಎರಡನೇ ಟೆಸ್ಟ್ 2021 ರ ಡಿಸೆಂಬರ್ 3 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯಲಿದೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯೊಂದು ಕೇಳಿ ಬರುತ್ತಿದೆ.
ಅಕಾಲಿಕ ಮಳೆಯಿಂದ ಟೆಸ್ಟ್ ಪಂದ್ಯಕ್ಕೆ ಅಡ್ಡಿ!
ಮುಂಬೈನ ಅಕಾಲಿಕ ಮಳೆ (Mumbai Rain) ಇಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ (IND vs NZ) ಎರಡನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನದ ಆಟಕ್ಕೆ ಅಡ್ಡಿಯಾಗಬಹುದು. ಮಳೆಯಿಂದಾಗಿ ವಾಂಖೆಡೆ ಸ್ಟೇಡಿಯಂನ ಪಿಚ್ ಬೌಲರ್ ಗಳ ಪರವಾಗಿತುವ ನಿರೀಕ್ಷೆಯಿದೆ. ಮುಂಬೈಯಲ್ಲಿ ಮಳೆಯ ಆಟ ಮುಂದುವರೆದಿದೆ.
ಟ್ರೇನಿಂಗ್ ಸೆಶನ್ ರದ್ದು :
ಡಿಸೆಂಬರ್ 1 ರಂದು, ದಿನವಿಡೀ ಮಳೆಯಿಂದಾಗಿ ಎರಡೂ ತಂಡಗಳು ತಮ್ಮ ತರಬೇತಿಯನ್ನು ರದ್ದುಗೊಳಿಸಬೇಕಾಯಿತು. ಗುರುವಾರವೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಔಟ್ ಫೀಲ್ಡ್ ತೇವವಾಗಿರುತ್ತದೆ. ಈ ಹ್ನ್ನೆಲೆಯಲ್ಲಿ ಭಾರತ ತಂಡವು ಒಳಾಂಗಣ ತರಬೇತಿ ಸೌಲಭ್ಯವಿರುವ ಬಾಂದ್ರಾ ಕುರ್ಲಾ ಕ್ಯಾಂಪಸ್ ಮೈದಾನಕ್ಕೆ ಹೋಗಲಿದೆ.
ಇದನ್ನೂ ಓದಿ : IPL : RCBಯ ಈ ಆಟಗಾರನನ್ನೇ ಟಾರ್ಗೆಟ್ ಮಾಡಲಿದೆ Mumbai Indians
ಪಿಚ್‌ನಲ್ಲಿ ತೇವಾಂಶ :
ವಾಂಖೆಡೆ ಸ್ಟೇಡಿಯಂ (Wankhede Stadium) ಪಿಚ್‌ನಲ್ಲಿ ಹುಲ್ಲು ಇಲ್ಲ. ಇದು ನಿಧಾನಗತಿಯ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಆದರೆ, ಶುಕ್ರವಾರ ಆರಂಭವಾಗಲಿರುವ ಟೆಸ್ಟ್‌ನಲ್ಲಿ ವಾಂಖೆಡೆ ಪಿಚ್ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ. ವಾಂಖೆಡೆ ಪಿಚ್ ನಲ್ಲಿನ ಹೆಚ್ಚುವರಿ ತೇವಾಂಶವು ವೇಗದ ಬೌಲರ್‌ಗಳಿಗೆ ಸಹಾಯವಾಗಲಿದೆ. ಶುಕ್ರವಾರವೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಹೊರಗುಳಿಯಬಹುದು ಮಯಾಂಕ್ :
ಈ ಪಂದ್ಯಕ್ಕಾಗಿ ಭಾರತ ತಂಡದ ಕಾಂಬಿನೇಶನ್ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ವಿರಾಟ್ ಕೊಹ್ಲಿ (Virat Kohli) ಪ್ಲೇಯಿಂಗ್ XI ಗೆ ಮರಳುವುದರಿಂದ ಮಯಾಂಕ್ ಅಗರ್ವಾಲ್ ಅವರನ್ನು ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid)ಮತ್ತು ಬೌಲಿಂಗ್ ಕೋಚ್ ಪರಾಸ್ ಮಹಾಂಬ್ರೆ ಸೇರಿದಂತೆ ಸಹಾಯಕ ಸಿಬ್ಬಂದಿ ಕಳೆದ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ಅಜಿಂಕ್ಯ ರಹಾನೆಗೆ ಬೆಂಬಲ ನೀಡುತ್ತಿದ್ದಾರೆ.
ಕುತ್ತಿಗೆ ನೋವಿನ ಕಾರಣದಿಂದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಹೊರಗುಳಿಯಬಹುದು. ವೃದ್ಧಿಮಾನ್ ಸ್ಥಾನಕ್ಕೆ ಕೆಎಸ್ ಭರತ್ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆಯಬಹುದು.
ಇದನ್ನೂ ಓದಿ : IPL 2022: ಮೂವರು ಮ್ಯಾಚ್ ವಿನ್ನರ್ ಗಳನ್ನೇ ಕೈಬಿಟ್ಟ ಮುಂಬೈ ಇಂಡಿಯನ್ಸ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.