ನ್ಯಾಟಿಂಗಹ್ಯಾಮ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಒಟ್ಟು ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೂರನೆ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಗೆಲುವಿನಯಾನವನ್ನು ಪ್ರಾರಂಭಿಸಿದೆ.
ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 329, ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 352 ರನ್ ಗಳಿಸಿತ್ತು. ಆದರೆ ಭಾರತದ ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 161 ರನ್ ಗಳಿಗೆ ಆಲೌಟ್ ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 317 ರನ್ ಗಳನ್ನ ಮಾತ್ರ ಗಳಿಸಲು ಸಾಧ್ಯವಾಯಿತು.ಇಂಗ್ಲೆಂಡ್ ಪರ ಜೋಸ್ ಬಟ್ಲರ್ 106, ಮತ್ತು ಬೆನ್ ಸ್ಟೋಕ್ 62, ರನ್ ಗಳಿಸುವ ಮೂಲಕ ಮಿಂಚಿದರು.
For his 200 runs in the game, India's Virat Kohli is Player of the Match! What a cricketer he is!#ENGvIND pic.twitter.com/5JTByaXBR3
— ICC (@ICC) August 22, 2018
ಭಾರತದ ಪರ ಜಸ್ಪ್ರೀತ್ ಬೂಮ್ರಾ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇನ್ನೊಂದೆಡೆಗೆ ನಾಯಕ ಮೊದಲ ಇನ್ನಿಂಗ್ಸ್ ನಲ್ಲಿ 97 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 103 ರನ್ ಗಳಿಸುವ ಮೂಲಕ ತಂಡವು ಉತ್ತಮ ಮೊತ್ತಗಳಿಸಲು ನೆರವಾದರು.