West Indies vs India, 1st T20I: ಭಾರತಕ್ಕೆ ಗೆಲುವು ತಂದಿಟ್ಟ ನವದೀಪ್ ಸೈನಿ

ಇಲ್ಲಿನ ಸೆಂಟ್ರಲ್ ಬ್ರೋವಾರ್ಡ್ ರಿಜಿನಲ್ ಟರ್ಫ್ ಗ್ರೌಂಡ್ ನಲ್ಲಿ ನಡೆದ ಮೊದಲ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

Last Updated : Aug 4, 2019, 11:12 AM IST
West Indies vs India, 1st T20I: ಭಾರತಕ್ಕೆ ಗೆಲುವು ತಂದಿಟ್ಟ ನವದೀಪ್ ಸೈನಿ  title=

ಫ್ಲೋರಿಡಾ: ಇಲ್ಲಿನ ಸೆಂಟ್ರಲ್ ಬ್ರೋವಾರ್ಡ್ ರಿಜಿನಲ್ ಟರ್ಫ್ ಗ್ರೌಂಡ್ ನಲ್ಲಿ ನಡೆದ ಮೊದಲ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟ್ವೆಂಟಿ ಪಂದ್ಯದಲ್ಲಿ ಭಾರತ ನಾಲ್ಕು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಮೊದಲು ಟಾಸ್ ಗೆದ್ದ ಭಾರತ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು, ಇದಾದ ನಂತರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಮೊದಲ ಓವರ್ ನಲ್ಲಿ ಜಾನ್ ಕ್ಯಾಂಪ್ ಬೆಲ್ ಅವರ ವಿಕೆಟ್ ನ್ನು ಕಳೆದುಕೊಂಡಿತು. ಆರಂಭದಲ್ಲೇ ಆಘಾತ ಅನುಭವಿಸಿದ ವೆಸ್ಟ್ ಇಂಡೀಸ್ ತಂಡವು ನಂತರ ಚೇತರಿಸಿಕೊಳ್ಳಲೇ ಇಲ್ಲವೆನ್ನಬಹುದು. ತಂಡದ ಮೊತ್ತ 33 ಆಗುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಒಂದು ಕಡೆ ವೆಸ್ಟ್ ಇಂಡೀಸ್ ತಂಡದ ವಿಕೆಟ್ ಗಳು ತಲೆಗರಲೇಯಂತೆ ಬಿಳುತ್ತಿದ್ದರೂ ಸಹಿತ ಕಿರಣ್ ಪೋಲಾರ್ಡ್ ಭರ್ಜರಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿಗಳಿಂದ 49 ರನ್ ಗಳಿಸಿ ಎಲ್ಬಿಡಬ್ಲ್ಯು ಗೆ ಔಟಾದರು. ಭಾರತ ತಂಡ ಪರವಾಗಿ ನವದೀಪ್ ಸೈನಿ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ಪತನಕ್ಕೆ ಕಾರಣವಾದರು.

96 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ವೆಸ್ಟ್ ಇಂಡೀಸ್ ಬೌಲರ್ ಸುನಿಲ್ ನರೈನ್ ಶಿಖರ್ ಧವನ್ ವಿಕೆಟ್ ಪಡೆಯುವ ಮೂಲಕ ಶಾಕ್ ನೀಡಿದರು. ಭಾರತ ಈ ಸುಲಭ ಮೊತ್ತದ ಗುರಿ ತಲುಪಲು ಆರು ವಿಕೆಟ್ ಕಳೆದುಕೊಂಡು 17.2 ಓವರ್ ಗಳಲ್ಲಿ ಗೆಲುವು ಸಾಧಿಸಿತು.

Trending News