ಭಾರತ vs ಆಸಿಸ್: ಯಾರಿಗೆ ಸಿಗಲಿದೆ ಅಗ್ರಸ್ಥಾನ

ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 117 ಅಂಕಗಳನ್ನು ಹೊಂದಿದ್ದು. 119 ಅಂಕಗಳನ್ನು ಹೊಂದಿರುವ ಉನ್ನತ ಶ್ರೇಯಾಂಕದ ದಕ್ಷಿಣ ಆಫ್ರಿಕಾವನ್ನು ಅನುಸರಿಸುವವರು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಉಂಟು ಮಾಡಿದೆ.

Last Updated : Sep 15, 2017, 04:22 PM IST
ಭಾರತ vs ಆಸಿಸ್: ಯಾರಿಗೆ ಸಿಗಲಿದೆ ಅಗ್ರಸ್ಥಾನ title=

ನವ ದೆಹಲಿ: ಭಾರತ-ಆಸ್ಟ್ರೇಲಿಯಾ ತಂಡದ ನಡುವೆ ನಡೆಯುವ ಪಂದ್ಯಕ್ಕಾಗಿ ಎಲ್ಲರೂ ಉತ್ಸುಕರಾಗಿ ಕಾಯುತ್ತಿದ್ದಾರೆ. ಸೆ.17 ರಿಂದ ಪ್ರಾರಂಭವಾಗುವ ಪ್ರತಿಷ್ಠಿತ ಸರಣಿಯು ಬಹಳ ರೋಮಾಂಚಕವಾಗಿರಲಿದೆ.ಇದರ ವಿಶೇಷತೆ ಎಂದರೆ ಈ ಪಂದ್ಯದಲ್ಲಿ ಯಾರೇ ವಿಜೇತರಾದರೂ ಆ ತಂಡವೂ ಅಗ್ರ ಸ್ಥಾನವನ್ನು ಗೆಲ್ಲುವ ಅವಕಾಶವನ್ನು ಹೊಂದಿದೆ.

ದಕ್ಷಿಣ ಆಫ್ರಿಕಾವು 119 ಅಂಕಗಳೊಂದಿಗೆ ಈಗ ಅಗ್ರ ಸ್ಥಾನದಲ್ಲಿದೆ. ಭಾರತ-ಆಸ್ಟ್ರೇಲಿಯಾ ತಂಡಗಳು 117 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಭಾರತ ಅಥವಾ ಆಸಿಸ್ ರಾಷ್ಟ್ರಗಳು 4-1ರಲ್ಲಿ ಪಂದ್ಯವನ್ನು ಗೆದ್ದರೆ ಒಟ್ಟು 120 ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ.  

ಭಾರತ ಅಥವಾ ಆಸ್ಟ್ರೇಲಿಯಾ ತಂಡಗಳು 5-0ಗೋಲು ಸಾಧಿಸಿದರೆ, ಅವರು 122 ಪಾಯಿಂಟ್ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆಯುವರು. ಒಂದು ವೇಳೆ ಭಾರತ ಅಸ್ತ್ರೆಲಿಯಾವನ್ನು 5-0 ಅಂತರದಿಂದ ಸೋಲಿಸಿದರೆ, ಆಸ್ಟ್ರೇಲಿಯಾವು ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಗಿಂತ ಮುಂಚೂಣಿಯಲ್ಲಿರುತ್ತದೆ.

ಸರಣಿಯ ಮೊದಲ ಪಂದ್ಯವನ್ನು ಚೆನ್ನೈನಲ್ಲಿ ಆಡಲಾಗುತ್ತದೆ, ಸೆಪ್ಟೆಂಬರ್ 21 ರಂದು ಕೊಲ್ಕತ್ತಾದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಮೂರನೇ ಏಕದಿನ ಪಂದ್ಯವನ್ನು ಇಂದೋರ್ನಲ್ಲಿ ಸೆಪ್ಟೆಂಬರ್ 24 ರಂದು ಆಡಲಾಗುತ್ತದೆ, ನಂತರ ಬೆಂಗಳೂರು ಮತ್ತು ನಾಗ್ಪುರದಲ್ಲಿ ನಾಲ್ಕನೇ ಮತ್ತು ಐದನೇ ಏಕದಿನ ಪಂದ್ಯಗಳು  ಕ್ರಮವಾಗಿ ಸೆಪ್ಟೆಂಬರ್ 28 ಮತ್ತು ಅಕ್ಟೋಬರ್ 1 ರಂದು ನಡೆಯಲಿದೆ.

ನಂತರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ರಾಂಚಿಯಲ್ಲಿ ಅಕ್ಟೋಬರ್ 7 ರಿಂದ ಆರಂಭವಾಗುವ ಮೂರು T20I ಪಂದ್ಯಗಳ ಸರಣಿಯನ್ನು ಆಡಲಿವೆ. ಎರಡನೇ T20I ಅಕ್ಟೋಬರ್ 10 ರಂದು ಗುವಾಹತಿಯಲ್ಲಿ ನಡೆಯಲಿದೆ ಮತ್ತು ಅಕ್ಟೋಬರ್ 13 ರಂದು ಹೈದರಾಬಾದ್ನಲ್ಲಿ ನಡೆಯುವ ಪಂದ್ಯವು ಅಂತಿಮ ಪಂದ್ಯವಾಗಿದೆ.

Trending News