India vs England, 1st Test: ಮೂರನೇ ದಿನದಾಂತ್ಯ: ಭಾರತಕ್ಕೆ 321 ರನ್‌ಗಳ ಹಿನ್ನಡೆ

ಚೆನ್ನೈನಲ್ಲಿ ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೂರನೇ ದಿನದಾಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್ ನಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 257 ರನ್ ಗಳಿಸಿದೆ.

Last Updated : Feb 7, 2021, 06:07 PM IST
  • ಇಂಗ್ಲೆಂಡ್ ತಂಡವು ನೀಡಿದ 578 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ತಂಡದ ಮೊತ್ತ 74 ಆಗುವಷ್ಟರಲ್ಲಿ ನಾಲ್ಕು ಮಹತ್ವದ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
  • ಭಾರತ ತಂಡದ ಪರವಾಗಿ ಚೇತೆಶ್ವರ್ ಪೂಜಾರ್ 143 ಎಸೆತಗಳಲ್ಲಿ 11 ಬೌಂಡರಿ ಗಳೊಂದಿಗೆ 73 ರನ್ ಗಳಿಸಿದರು.
  • ಇನ್ನೊಂದೆಡೆಗೆ ವೇಗದ ಬ್ಯಾಟಿಂಗ್ ಗೆ ಮೊರೆ ಹೋದ ರಿಶಬ್ ಪಂತ್ (Rishabh Pant) ಏಕದಿನ ಪಂದ್ಯದ ಬ್ಯಾಟಿಂಗ್ ನೆನಪಿಸಿದರು.
 India vs England, 1st Test: ಮೂರನೇ ದಿನದಾಂತ್ಯ: ಭಾರತಕ್ಕೆ 321 ರನ್‌ಗಳ ಹಿನ್ನಡೆ title=

ನವದೆಹಲಿ: ಚೆನ್ನೈನಲ್ಲಿ ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮೂರನೇ ದಿನದಾಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್ ನಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 257 ರನ್ ಗಳಿಸಿದೆ.

ಇದನ್ನೂ ಓದಿ: India vs England, 1st Test: ಎರಡನೇ ದಿನದಾಂತ್ಯಕ್ಕೆ ಇಂಗ್ಲೆಂಡ್ ಬೃಹತ್ ಮೊತ್ತ

ಇಂಗ್ಲೆಂಡ್ ತಂಡವು ನೀಡಿದ 578 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ತಂಡದ ಮೊತ್ತ 74 ಆಗುವಷ್ಟರಲ್ಲಿ ನಾಲ್ಕು ಮಹತ್ವದ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಭಾರತ ತಂಡದ ಪರವಾಗಿ ಚೇತೆಶ್ವರ್ ಪೂಜಾರ್ 143 ಎಸೆತಗಳಲ್ಲಿ 11 ಬೌಂಡರಿ ಗಳೊಂದಿಗೆ 73 ರನ್ ಗಳಿಸಿದರು. ಇನ್ನೊಂದೆಡೆಗೆ ವೇಗದ ಬ್ಯಾಟಿಂಗ್ ಗೆ ಮೊರೆ ಹೋದ ರಿಶಬ್ ಪಂತ್ (Rishabh Pant) ಏಕದಿನ ಪಂದ್ಯದ ಬ್ಯಾಟಿಂಗ್ ನೆನಪಿಸಿದರು.

ಇದನ್ನೂ ಓದಿ: WATCH: ಹರ್ಭಜನ್ ಸಿಂಗ್ ಬೌಲಿಂಗ್ ಆಕ್ಷನ್ ಅನುಕರಿಸಿದ ರೋಹಿತ್ ಶರ್ಮಾ !

ಕೇವಲ 88 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಗಳನ್ನು ಬಾರಿಸುವ ಮೂಲಕ 91 ರನ್ ಗಳಿಸಿದರು.ಸದ್ಯ ಕ್ರಿಸ್ ನಲ್ಲಿ ವಾಷಿಂಗ್ಟನ್ ಸುಂದರ್ 33 ಹಾಗೂ ರವಿಚಂದ್ರನ್ ಆಶ್ವಿನ್ ಅವರು 8 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ಇನ್ನೂ 321 ರನ್ ಗಳ ಹಿನ್ನಡೆಯನ್ನು ಅನುಭವಿಸಿದೆ.

ಇಂಗ್ಲೆಂಡ್ ತಂಡದ ಪರವಾಗಿ ಡೋಮಿನಿಕ್ ಬೆಸ್ ನಾಲ್ಕು ಹಾಗೂ ಜೋಫ್ರಾ ಆರ್ಚರ್ ಎರಡು ವಿಕೆಟ್ ಗಳನ್ನು ಗಳಿಸುವ ಮೂಲಕ  ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News