India vs England, 1st Test: ಎರಡನೇ ದಿನದಾಂತ್ಯಕ್ಕೆ ಇಂಗ್ಲೆಂಡ್ ಬೃಹತ್ ಮೊತ್ತ

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದ ಟೆಸ್ಟ್ ಎರಡನೇ ದಿನದಂದು ಇಂಗ್ಲೆಂಡ್  ತಂಡದ ಬ್ಯಾಟ್ಸಮನ್ ಗಳು ಭಾರತದ ಬೌಲರ್ ಗಳನ್ನು ಬೆವರಿಳಿಸಿದರು.

Last Updated : Feb 6, 2021, 06:03 PM IST
  • ಜೋಯ್ ರೂಟ್ಸ್ ಅವರು 377 ಎಸೆತಗಳಲ್ಲಿ 19 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 218 ರನ್ ಸಿಡಿಸಿದರೆ. ಬೆನ್ ಸ್ಟೋಕ್ಸ್ ಕೇವಲ 118 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳನ್ನು ಸಿಡಿಸಿದರು.
 India vs England, 1st Test: ಎರಡನೇ ದಿನದಾಂತ್ಯಕ್ಕೆ ಇಂಗ್ಲೆಂಡ್ ಬೃಹತ್ ಮೊತ್ತ  title=
Photo Courtesy: Twitter

ನವದೆಹಲಿ: ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದ ಟೆಸ್ಟ್ ಎರಡನೇ ದಿನದಂದು ಇಂಗ್ಲೆಂಡ್  ತಂಡದ ಬ್ಯಾಟ್ಸಮನ್ ಗಳು ಭಾರತದ ಬೌಲರ್ ಗಳನ್ನು ಬೆವರಿಳಿಸಿದರು.

ಈಗ ಎರಡನೇ ದಿನದಂದು ಜೊಯ್ ರೂಟ್ (Joe Root) ಅವರ 218 ಹಾಗೂ ಬೆನ್ ಸ್ಟೋಕ್ಸ್ ಅವರ 82 ರನ್ ಗಳ ನೆರವಿನಿಂದ ಇಂಗ್ಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿದೆ.ಈ ಇಬ್ಬರು ಆಟಗಾರರು ಭಾರತದ ಬೌಲರಗಳನ್ನು ಹೈರಾಣಾಗಿಸಿದರು.

ಇದನ್ನೂ ಓದಿ: India vs England, 1st Test: ಜೋಯ್ ರೂಟ್ ಭರ್ಜರಿ ಶತಕ: ಸುಸ್ಥಿತಿಯಲ್ಲಿ ಇಂಗ್ಲೆಂಡ್ ತಂಡ

ಜೋಯ್ ರೂಟ್ಸ್ ಅವರು 377 ಎಸೆತಗಳಲ್ಲಿ  19  ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ 218 ರನ್ ಸಿಡಿಸಿದರೆ. ಬೆನ್ ಸ್ಟೋಕ್ಸ್ ಕೇವಲ 118 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳನ್ನು ಸಿಡಿಸಿದರು.

ಇದನ್ನೂ ಓದಿ: ಈ ತಂತ್ರದಿಂದಲೇ ಕೊಹ್ಲಿಯನ್ನು ಔಟ್ ಮಾಡುವುದಾಗಿ ಹೇಳಿದ ಇಂಗ್ಲೆಂಡ್ ತಂಡ...!

ಈಗ ಎರಡನೇ ದಿನದಾಂತ್ಯಕ್ಕೆ ದೊಮಿನಿಕ್ ಬೆಸ್ ಹಾಗೂ ಜಾಕ್ ಲೀಚ್ ಅವರು ಕ್ರಮವಾಗಿ 28 ಹಾಗೂ 6 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ. ಭಾರತದ ಪರವಾಗಿ ಇಶಾಂತ್ ಶರ್ಮ, ಬುಮ್ರಾ (Jasprit Bumrah), ಅಶ್ವಿನ್,ಶಾಬಾಜ್ ನಾದೀಮ್ ತಲಾ ಎರಡು ವಿಕೆಟ್ ಗಳನ್ನು ಪಡೆದರು.ಈಗ ಜೋಯ್ ರೂಟ್ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಹ್ಯಾಟ್ರಿಕ್ ಶತಕವನ್ನು ಗಳಿಸಿದ ಸಾಧನೆಗೆ ಪಾತ್ರರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News