Rohit Sharma Cars Collection: 1.5 ಕೋಟಿ ಮೌಲ್ಯದ ಕಾರ್ ಖರೀದಿಸಿದ ರೋಹಿತ್ ಶರ್ಮಾ

Rohit Sharma Cars Collection: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೊಸ Mercedes-Benz GLS 400d ಅನ್ನು ಖರೀದಿಸಿದ್ದಾರೆ. ಇದು ಗ್ರೇ ಕಲರ್ ಕಾರ್ ಆಗಿದೆ. ಅವರ ಕಾರು ಇತ್ತೀಚೆಗೆ ಯೂಟ್ಯೂಬ್ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. 

Written by - Yashaswini V | Last Updated : Nov 3, 2022, 01:45 PM IST
  • ಈ ಕಾರ್ ಕೇವಲ ಹೊರಗಿನಿಂದ ಮಾತ್ರವಲ್ಲ ಒಳಾಂಗಣವೂ ಸಹ ಐಷಾರಾಮಿ ಲುಕ್ ಹೊಂದಿದೆ.
  • ವಾಹನವು ಡ್ಯುಯಲ್-ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ.
  • ಇದನ್ನು ನೀವು ಟಚ್ ಅಥವಾ ಟ್ರ್ಯಾಕ್‌ಪ್ಯಾಡ್ ಮೂಲಕ ನಿಯಂತ್ರಿಸಬಹುದು.
Rohit Sharma Cars Collection: 1.5 ಕೋಟಿ ಮೌಲ್ಯದ ಕಾರ್ ಖರೀದಿಸಿದ ರೋಹಿತ್ ಶರ್ಮಾ  title=
Rohit Sharma cars collection

Rohit Sharma Mercedes-Benz:  ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರ ಹೊಸ ವಾಹನಗಳು ಮುಖ್ಯಾಂಶಗಳಲ್ಲಿವೆ. Mercedes Benz SUV ಭಾರತೀಯ ಕ್ರಿಕೆಟಿಗರಿಗೆ ತುಂಬಾ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಸೂರ್ಯಕುಮಾರ್ ಯಾದವ್ Mercedes Benz GLS 400d ಖರೀದಿಸಿದರು. ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರು ಎಲ್ಲಾ ಹೊಸ Mercedes-AMG G 63 ಅನ್ನು ಚಾಲನೆ ಮಾಡುತ್ತಿರುವುದು ಕಂಡು ಬಂದಿತ್ತು. ಇದೀಗ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹೊಸ Mercedes-Benz GLS 400d ಅನ್ನು ಖರೀದಿಸಿದ್ದಾರೆ. ರೋಹಿತ್ ಶರ್ಮಾ ಅವರ ಈ ಕಾರಿನ ಬೆಲೆ ಸುಮಾರು 1.5 ಕೋಟಿ. ಇದು ಗ್ರೇ ಕಲರ್ ಕಾರ್ ಆಗಿದೆ. ಅವರ ಕಾರು ಇತ್ತೀಚೆಗೆ ಯೂಟ್ಯೂಬ್ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. 

ವೀಡಿಯೋದಲ್ಲಿ ಚಲಿಸುತ್ತಿರುವ ಈ Mercedes Benz ಕಾರನ್ನು ನೋಡಿದರೆ ಅದು ಗಾತ್ರದಲ್ಲಿ ಸಾಕಷ್ಟು ದೊಡ್ಡದಾಗಿದೆ ಎಂದು ತೋರುತ್ತದೆ. ಇದರ ಆಯಾಮಗಳ ಬಗ್ಗೆ ಹೇಳುವುದಾದರೆ, ಈ ಈ ಎಸ್ಯುವಿ ಉದ್ದ 5.2 ಮೀಟರ್. ಇದು 7 ಆಸನಗಳ ಎಸ್‌ಯುವಿ. ಇದರ ಅಗಲ 2.1 ಮೀ, ಎತ್ತರ 1.8 ಮೀ ಮತ್ತು ವೀಲ್‌ಬೇಸ್ 3.1 ಮೀ.

ಇದನ್ನೂ ಓದಿ- Viral Video: ಎಲ್ಲರ ಮುಂದೆಯೇ ಸೂರ್ಯಕುಮಾರ್ ಯಾದವ್‍ಗೆ ಗೇಲಿ ಮಾಡಿದ ರೋಹಿತ್ ಶರ್ಮಾ!

ಎಂಜಿನ್ ಮತ್ತು ಪವರ್:
ಇದು 2925 cc 6 ಸಿಲಿಂಡರ್, 4 ವಾಲ್ವ್, DOHC ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 326 bhp ಪವರ್ ಮತ್ತು 700Nm ಟಾರ್ಕ್ ನೀಡುತ್ತದೆ. ವಾಹನವು ಗಂಟೆಗೆ 238 ಕಿಮೀ ವೇಗವನ್ನು ಹೊಂದಿದೆ ಮತ್ತು ಇದು 6.3 ಸೆಕೆಂಡುಗಳಲ್ಲಿ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Team India : ಟೀಂಗೆ ಮರಳಲಿದ್ದಾನೆ ಈ ಸ್ಪೋಟಕ ಆಟಗಾರ, ಎದುರಾಳಿಗಳ ಎದೆಯಲ್ಲಿ ಶುರುವಾಗಿದೆ ನಡುಕ!

ಇದರ ವೈಶಿಷ್ಟ್ಯಗಳು:
ಕಾರ್ ಕೇವಲ ಹೊರಗಿನಿಂದ ಮಾತ್ರವಲ್ಲ ಒಳಾಂಗಣವೂ ಸಹ ಐಷಾರಾಮಿ ಲುಕ್ ಹೊಂದಿದೆ. ವಾಹನವು ಡ್ಯುಯಲ್-ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ, ಇದನ್ನು ನೀವು ಟಚ್ ಅಥವಾ ಟ್ರ್ಯಾಕ್‌ಪ್ಯಾಡ್ ಮೂಲಕ ನಿಯಂತ್ರಿಸಬಹುದು. ವಾಹನದಲ್ಲಿ ಚಾರ್ಜ್ ಮಾಡಲು ಒಟ್ಟು 11 USB ಟೈಪ್ C ಪೋರ್ಟ್‌ಗಳು ಲಭ್ಯವಿದೆ. ಇದು ಆರಾಮದಾಯಕ ಸೀಟುಗಳನ್ನು ಹೊಂದಿದೆ. ಮಾತ್ರವಲ್ಲ, ಹಿಂಭಾಗದ ಪ್ರಯಾಣಿಕರಿಗೆ ಟ್ಯಾಬ್ಲೆಟ್ ಅನ್ನು ಸಹ ಪಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News