ಭಾರತೀಯ ಪುಟ್ಬಾಲ್ ದಂತಕಥೆ ಬಲರಾಮ್ ಇನ್ನಿಲ್ಲ

ಬಲರಾಮ್ ಅವರು ಭಾರತೀಯ ಪುಟ್ಬಾಲ್ ಆಟದ ಸುವರ್ಣ ತಲೆಮಾರಿನ ಭಾಗವಾಗಿದ್ದರು.87 ವರ್ಷ ವಯಸ್ಸಿನವರಾಗಿದ್ದ ಅವರು ಉತ್ತರಪಾರದ ಹೂಗ್ಲಿ ನದಿಯ ದಡದಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. 1962 ರ ಏಷ್ಯನ್ ಗೇಮ್ಸ್ ಚಾಂಪಿಯನ್ ಕಳೆದ ವರ್ಷ ಡಿಸೆಂಬರ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಹಿಗ್ಗುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದರು.

Written by - Zee Kannada News Desk | Last Updated : Feb 16, 2023, 07:58 PM IST
  • ಅವರ ಸ್ಥಿತಿ ಸುಧಾರಿಸಲಿಲ್ಲ ಮತ್ತು ಅವರು ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು
  • ಎಂದು ಅವರ ಕುಟುಂಬದ ಹತ್ತಿರದ ಮೂಲವು ಪಿಟಿಐಗೆ ತಿಳಿಸಿದೆ
  • ಅವರ ಕೊನೆಯ ದಿನಗಳಲ್ಲಿ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ರಾಜ್ಯ ಸರ್ಕಾರ ಮತ್ತು ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ
 ಭಾರತೀಯ ಪುಟ್ಬಾಲ್ ದಂತಕಥೆ ಬಲರಾಮ್ ಇನ್ನಿಲ್ಲ title=

ನವದೆಹಲಿ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಒಲಿಂಪಿಯನ್ ತುಳಸಿದಾಸ್ ಬಲರಾಮ್ ಅವರು 1950 ಮತ್ತು 60 ರ ದಶಕಗಳಲ್ಲಿ ಭಾರತೀಯ ಫುಟ್‌ಬಾಲ್‌ನ 'ಹೋಲಿ ಟ್ರಿನಿಟಿ' ಭಾಗವಾಗಿದ್ದು, ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರದಂದು ನಿಧನರಾದರು ಎಂದು ಅವರ ಕುಟುಂಬದ ನಿಕಟ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ: ಕಾಂಗ್ರೆಸ್

ಬಲರಾಮ್ ಅವರು ಭಾರತೀಯ ಪುಟ್ಬಾಲ್ ಆಟದ ಸುವರ್ಣ ತಲೆಮಾರಿನ ಭಾಗವಾಗಿದ್ದರು.87 ವರ್ಷ ವಯಸ್ಸಿನವರಾಗಿದ್ದ ಅವರು ಉತ್ತರಪಾರದ ಹೂಗ್ಲಿ ನದಿಯ ದಡದಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. 1962 ರ ಏಷ್ಯನ್ ಗೇಮ್ಸ್ ಚಾಂಪಿಯನ್ ಕಳೆದ ವರ್ಷ ಡಿಸೆಂಬರ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಮೂತ್ರದ ಸೋಂಕು ಮತ್ತು ಕಿಬ್ಬೊಟ್ಟೆಯ ಹಿಗ್ಗುವಿಕೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: ಸಂಪುಟದಿಂದ ಅಶ್ವತ್ಥ್ ನಾರಾಯಣ್ ಕಿತ್ತುಹಾಕುವಂತೆ ರಾಜ್ಯಪಾಲರಿಗೆ ಸಿದ್ದರಾಮಯ್ಯ ಒತ್ತಾಯ

"ಅವರ ಸ್ಥಿತಿ ಸುಧಾರಿಸಲಿಲ್ಲ ಮತ್ತು ಅವರು ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು" ಎಂದು ಅವರ ಕುಟುಂಬದ ಹತ್ತಿರದ ಮೂಲವು ಪಿಟಿಐಗೆ ತಿಳಿಸಿದೆ.ಅವರ ಕೊನೆಯ ದಿನಗಳಲ್ಲಿ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ರಾಜ್ಯ ಸರ್ಕಾರ ಮತ್ತು ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.

ಅಕ್ಟೋಬರ್ 4, 1936 ರಂದು, ಮುತ್ತಮ್ಮ ಮತ್ತು ತುಳಸಿದಾಸ್ ಕಾಳಿದಾಸ್  ತಮಿಳು ಪೋಷಕರಿಗೆ  ಸಿಕಂದರಾಬಾದ್‌ನ ಗ್ಯಾರಿಸನ್ ಪಟ್ಟಣದ ಅಮ್ಮುಗುಡಾ ಗ್ರಾಮದಲ್ಲಿ ಬಲರಾಮ್ ಜನಿಸಿದರು.ಅವರು  131 ಗೋಲುಗಳನ್ನು ಗಳಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News