ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ: ಕಾಂಗ್ರೆಸ್

ಇತಿಹಾಸದುದ್ದಕ್ಕೂ ಕೊಲೆ ರಾಜಕೀಯವನ್ನೇ ದಾಳ ಮಾಡಿಕೊಂಡು ಬಂದಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರೆಸಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Written by - Puttaraj K Alur | Last Updated : Feb 16, 2023, 05:10 PM IST
  • ಮಹಾತ್ಮಾ ಗಾಂಧಿ ಕೊಂದ ಸಿದ್ದಾಂತದವರೇ ಇಂದು ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿರುವುದು
  • ಈ ಕೊಲೆ ಮಾಡುವ ಯೋಚನೆ & ಯೋಜನೆ ಬಂದಿರುವುದು ಕೇಶವ ಕೃಪದಿಂದಲೋ, ನಾಗಪುರದಿಂದಲೋ ಬಿಜೆಪಿ?
  • ಇತಿಹಾಸದುದ್ದಕ್ಕೂ ಕೊಲೆ ರಾಜಕೀಯವನ್ನೇ ದಾಳ ಮಾಡಿಕೊಂಡು ಬಂದಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರೆಸಿದೆ
ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ: ಕಾಂಗ್ರೆಸ್  title=
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಟಿಪ್ಪು ಸುಲ್ತಾನ್ ರೀತಿ ಸಿದ್ದರಾಮಯ್ಯರನ್ನು ಹೊಡೀಬೇಕು ಎಂಬ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ. ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿದ್ದು, ‘ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ’ವೆಂದು ಆಕ್ರೋಶ ವ್ಯಕ್ತಪಡಿಸಿದೆ.

‘ಅಂದು ಮಹಾತ್ಮ ಗಾಂಧಿಯನ್ನು ಕೊಂದ ಸಿದ್ದಾಂತದವರೇ ಇಂದು ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿರುವುದು. ಈ ಕೊಲೆ ಮಾಡುವ ಯೋಚನೆ & ಯೋಜನೆ ಬಂದಿರುವುದು ಕೇಶವ ಕೃಪದಿಂದಲೋ, ನಾಗಪುರದಿಂದಲೋ ಬಿಜೆಪಿ? ಇಲ್ಲಿನ ಬಿಜೆಪಿಗರಿಗೂ ತಾಲಿಬಾನಿನ ಉಗ್ರರಿಗೂ ವ್ಯತ್ಯಾಸವಿಲ್ಲ!’ವೆಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಟಿಪ್ಪು ರೀತಿ ಹತ್ಯೆ ಹೇಳಿಕೆ ವಿಚಾರ: ಸಿದ್ದರಾಮಯ್ಯರ ಕ್ಷಮೆ ಕೋರಿದ ಸಚಿವ ಅಶ್ವತ್ಥ್ ನಾರಾಯಣ

‘ಇಷ್ಟು ದಿನ ವಿಪಕ್ಷಗಳ ನಾಯಕರಿಗೆ ಐಟಿ, ಇಡಿಗಳ ದಾಳಿ ಮೂಲಕ ಮಣಿಸಲು ಯತ್ನಿಸುತ್ತಿತ್ತು. ಈಗ ಸೋಲಿನ ಹತಾಶೆಯಲ್ಲಿ ಕೊಲೆ ಮಾಡುವ ಹಂತಕ್ಕೆ ಇಳಿದಿದೆ. ಇತಿಹಾಸದುದ್ದಕ್ಕೂ ಕೊಲೆ ರಾಜಕೀಯವನ್ನೇ ದಾಳ ಮಾಡಿಕೊಂಡು ಬಂದಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರೆಸಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರನ್ನು ಬಂಧಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

‘ಸಿದ್ದರಾಮಯ್ಯರನ್ನು ಕೊಲೆ ಮಾಡುವಂತೆ ಕರೆ ನೀಡಿದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಬಿಜೆಪಿಯ ಕೊಲೆಗಡುಕ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಬಹುಶಃ ಬಿಜೆಪಿ ಹೇಳುತ್ತಿದ್ದ ಉತ್ತರಪ್ರದೇಶದ ಮಾಡೆಲ್ ಇದೇ ಇರಬಹುದು.ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಕನಿಷ್ಠ ನೈತಿಕತೆ ಇದ್ದರೆ ಅಶ್ವತ್ಥ್ ನಾರಾಯಣರನ್ನು ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಇದನ್ನೂ ಓದಿ: Siddaramaiah : 'ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News