IPL 2022 : ಕ್ರಿಕೆಟ್ ಜಗತ್ತಿಗೆ ಕಾಲಿಡಲಿರುವ ದೀಪಿಕಾ-ರಣವೀರ್ .! IND-PAK ಮ್ಯಾಚ್ ಬಳಿಕ ಘೋಷಣೆ

ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪರಿಚಯಿಸಿರುವ ಎರಡು ಹೊಸ ಐಪಿಎಲ್  ತಂಡಗಳಲ್ಲಿ ಒಂದನ್ನು 'ಬಾಲಿವುಡ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಖರೀದಿಸಲಿದ್ದಾರೆ ಎನ್ನಲಾಗಿದೆ. 

Written by - Ranjitha R K | Last Updated : Oct 22, 2021, 03:43 PM IST
  • ಐಪಿಎಲ್ ತಂಡ ಖರೀದಿಸಲಿರುವ ದೀಪಿಕಾ-ರಣವೀರ್
  • ಈಗಾಗಲೇ ಅಸ್ತಿತ್ವದಲ್ಲಿದೆ ಶಾರುಖ್ ತಂಡ
  • ದೀಪಿಕಾ-ರಣವೀರ್ ಅವರದ್ದು ಸೂಪರ್ ಹಿಟ್ ಜೋಡಿ
IPL 2022 : ಕ್ರಿಕೆಟ್ ಜಗತ್ತಿಗೆ ಕಾಲಿಡಲಿರುವ ದೀಪಿಕಾ-ರಣವೀರ್ .!  IND-PAK ಮ್ಯಾಚ್ ಬಳಿಕ ಘೋಷಣೆ

ನವದೆಹಲಿ : ಬಾಲಿವುಡ್ ತಾರೆಯರಿಗೂ ಕ್ರಿಕೆಟ್ ಗೂ ನಿಕಟ ಸಂಬಂಧವಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಅನೇಕ ಸೆಲೆಬ್ರಿಟಿಗಳು ಸಹ ಪಾಲುದಾರಿಕೆಯನ್ನು ಹೊಂದಿದ್ದಾರೆ. ಪ್ರೀತಿ ಜಿಂಟಾ (Preity Zinta), ಶಾರುಖ್ ಖಾನ್ (Shah Rukh Khan) ಮತ್ತು ಶಿಲ್ಪಾ ಶೆಟ್ಟಿ ಐಪಿಎಲ್ ತಂಡವನ್ನು (IPL Team) ಖರೀದಿಸಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕೂಡ ಈ ಪಟ್ಟಿಯಲ್ಲಿ ಸೇರಲಿದ್ದಾರೆ. 

ಐಪಿಎಲ್ ತಂಡ ಖರೀದಿಸಲಿರುವ ರಣವೀರ್ ಸಿಂಗ್, ದೀಪಿಕಾ :
ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪರಿಚಯಿಸಿರುವ ಎರಡು ಹೊಸ ಐಪಿಎಲ್  ತಂಡಗಳಲ್ಲಿ ಒಂದನ್ನು 'ಬಾಲಿವುಡ್ ಜೋಡಿ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika Padukone) ಖರೀದಿಸಲಿದ್ದಾರೆ ಎನ್ನಲಾಗಿದೆ.   ಹೀಗಾದಲ್ಲಿ  2022 ರ ಐಪಿಎಲ್‌ನಲ್ಲಿ ಕ್ರಿಕೆಟ್ ಮೈದಾನದಲ್ಲಿ ರಣವೀರ್-ದೀಪಿಕಾ ಅವರನ್ನು ಕೂಡಾ ಕಾಣಬಹುದು.  

ಇದನ್ನೂ ಓದಿ : Eight Sixes In A Over: ಒಂದೇ ಓವರ್ ನಲ್ಲಿ ಎಂಟು 6,6,6,6,6,6,6,6 ಜಡಿದು ವಿಶಿಷ್ಟ ದಾಖಲೆ ಬರೆದ ಕ್ರಿಕೆಟಿಗ

ಶಾರುಖ್ ಮಾಲಕತ್ವದ ತಂಡ :
ಹೊಸ ಐಪಿಎಲ್ ತಂಡದ ಹರಾಜು ಪ್ರಕ್ರಿಯೆ (IPL Auction) ಸೋಮವಾರ (ಅಕ್ಟೋಬರ್ 25) ದುಬೈನಲ್ಲಿ ನಡೆಯಲಿದೆ.  ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ (Shahrukh Khan) ಅವರ ತಂಡಗಳು ಈಗಾಗಲೇ ಐಪಿಎಲ್‌ನಲ್ಲಿವೆ. 2008 ರಲ್ಲಿ ಐಪಿಎಲ್ (IPL) ಆರಂಭವಾದಾಗಿನಿಂದ, ಶಾರುಖ್ ಖಾನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. 

ದೀಪಿಕಾ-ರಣವೀರ್ ಜೋಡಿ:
ದೀಪಿಕಾ-ರಣವೀರ್  ಇಬ್ಬರ  ಚಿತ್ರಗಳೂ ಒಂದರ ಹಿಂದೆ ಒಂದರಂತೆ ಸೂಪರ್ ಹಿಟ್ ಆಗುತ್ತಿದೆ. ಇತ್ತೀಚೆಗೆ ರಣವೀರ್ ಸಿಂಗ್ ಕೂಡ ಕಿರುತೆರೆಗೆ ಕಾಲಿಟ್ಟಿದ್ದಾರೆ. ತಮ್ಮ ಚೊಚ್ಚಲ  ಟಿವಿ ಶೋ 'ದಿ ಬಿಗ್ ಪಿಕ್ಚರ್'  (The Big Picture) ಮೂಲಕ ಕಿರು ತೆರೆ ಪ್ರವೇಶಿಸಿದ್ದಾರೆ. ದೀಪಿಕಾ ಪಡುಕೋಣೆ ದೊಡ್ಡ ಪರದೆಯ ಮೇಲೆ ತನ್ನದೇ ಛಾಪು ಮೂಡಿಸಿದ್ದಾರೆ. ದೀಪಿಕಾ ಪಡುಕೋಣೆ ಶೀಘ್ರದಲ್ಲೇ ರಣವೀರ್ ಸಿಂಗ್ (Ranveer Singh) ಜೊತೆ '83' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : T20 WC 2021 : ಈ 3 ಸ್ಪಿನ್ನರ್‌ಗಳಿಂದ ಎದುರಾಳಿ ತಂಡಗಳ ಎದೆಯಲ್ಲಿ ಶುರುವಾಗುತ್ತೆ ಭಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News