ನವದೆಹಲಿ : ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2022 ಗಾಗಿ ಎಂಎಸ್ ಧೋನಿ (MS Dhoni), ರವೀಂದ್ರ ಜಡೇಜಾ (Ravindra Jadeja), ರಿತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಅವರನ್ನು ಉಳಿಸಿಕೊಂಡಿದೆ. ಆದರೆ ತಂಡದ ಹಳೆಯ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ (Suresh Raina) ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಇದೀಗ ಮೆಗಾ ಹರಾಜಿನಲ್ಲಿ ಯಾವ ತಂಡವು ಯವವ್ ಆತಾಗಾರರನ್ನು ಖರೀದಿಸಲಿದೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ರೈನಾ ಮತ್ತು ಡು ಪ್ಲೆಸಿಸ್ ರಿಲೀಸ್ :
ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಐಪಿಎಲ್ (IPL) ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಸುರೇಶ್ ರೈನಾ (Suresh Raina) ಜೊತೆಗೆ 'ಪಂದ್ಯ ವಿಜೇತ'Faf du Plessis ಅವರನ್ನು ಕೂಡಾ ಅನಿವಾರ್ಯವಾಗಿ ರಿಲೀಸ್ ಮಾಡಬೇಕಾಯಿತು. ಈ ಮಧ್ಯೆ, ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ (IPL 2022 Mega Auction) ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಳ್ಳುವ ಮೊದಲ ಆಟಗಾರ ಸುರೇಶ್ ರೈನಾ ಆಗಲಿದ್ದಾರೆ ಎಂದು ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಇದನ್ನೂ ಓದಿ : ODI ನಾಯಕತ್ವವನ್ನೂ ಕಳೆದುಕೊಳ್ಳಲಿದ್ದಾರೆಯೇ ವಿರಾಟ್ ಕೊಹ್ಲಿ, ಶೀಘ್ರ ಹೊರಬೀಳಲಿದೆ ನಿರ್ಧಾರ
ರೈನಾ ಸಿಎಸ್‌ಕೆಯ ಪ್ರಮುಖ ಆಟಗಾರ :
ಕಳೆದ 10-12 ವರ್ಷಗಳಲ್ಲಿ ಸಿಎಸ್‌ಕೆ (CSK) ತಂಡವನ್ನು ನಾಕೌಟ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸುರೇಶ್ ರೈನಾ Yellow Armyಯ ಪ್ರಮುಖ ಆಟಗಾರರಲ್ಲಿ ಒಬ್ಬರು ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಸ್‌ಕೆ ಖರೀದಿಸುವ ಮೊದಲ ಆಟಗಾರ ರೈನಾ ಆಗಲಿದ್ದಾರೆ ಎಂದು, ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
IPL ಮೆಗಾ ಹರಾಜು ಯಾವಾಗ ನಡೆಯುತ್ತದೆ?
IPL 2022 ಮೆಗಾ ಹರಾಜಿನ ದಿನಾಂಕಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ, ಈ ದೊಡ್ಡ ಕಾರ್ಯಕ್ರಮವನ್ನು ಡಿಸೆಂಬರ್ 2021 ಅಥವಾ ಜನವರಿ 2022 ರಲ್ಲಿ ಆಯೋಜಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : IND vs NZ : ಈ ಕಾರಣದಿಂದ ರದ್ದಾಗಬಹುದು ಮುಂಬೈ ಟೆಸ್ಟ್ ನ ಮೊದಲ ದಿನದ ಆಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.