Viral Video:: ‘ರಾಕೆಟ್ ಥ್ರೋ’ ಮೂಲಕ ಸ್ಟಂಪ್ ಮುರಿದ ಹಾರ್ದಿಕ್ ಪಾಂಡ್ಯ..!

ಹಾರ್ದಿಕ್ ಪಾಂಡ್ಯ ಅವರ ‘ರಾಕೆಟ್ ಥ್ರೋ’ಗೆ ಸಂಜು ಸ್ಯಾಮ್ಸನ್ ರನ್ ಔಟ್ ಆಗಿದ್ದನ್ನು ನೋಡಿ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಸಂಜು ಸ್ಯಾಮ್ಸನ್ ಅವರನ್ನು ‘ರಾಕೆಟ್ ಥ್ರೋ’ ಮೂಲಕ ರನ್ ಔಟ್ ಮಾಡಿದ್ದು ಮಾತ್ರವಲ್ಲದೆ ಸ್ಟಂಪ್ ಅನ್ನು ಮುರಿದಿದ್ದಾರೆ.

Written by - Puttaraj K Alur | Last Updated : Apr 15, 2022, 11:41 AM IST
  • ‘ರಾಕೆಟ್ ಥ್ರೋ’ ಮೂಲಕ ಸಂಜು ಸ್ಯಾಮ್ಸನ್ ರನ್ ಔಟ್ ಮಾಡಿದ ಹಾರ್ದಿಕ್ ಪಾಂಡ್ಯ
  • ಹಾರ್ದಿಕ್ ಪಾಂಡ್ಯರ ‘ರಾಕೆಟ್ ಥ್ರೋ’ನ ಹೊಡೆತಕ್ಕೆ ಸ್ಟಂಪ್ ಮುರಿದು ಹೋಗಿದೆ
  • ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೇರಿದ ಗುಜರಾತ್ ಟೈಟಾನ್ಸ್
Viral Video:: ‘ರಾಕೆಟ್ ಥ್ರೋ’ ಮೂಲಕ ಸ್ಟಂಪ್ ಮುರಿದ ಹಾರ್ದಿಕ್ ಪಾಂಡ್ಯ..! title=
ಪಾಂಡ್ಯ ‘ರಾಕೆಟ್ ಥ್ರೋ’ಗೆ ಮುರಿದ ಸ್ಟಂಪ್!

ಮುಂಬೈ: ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರಾಜಸ್ಥಾನ ರಾಯಲ್ಸ್ ತಂಡವನ್ನು 37 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಲ್‍ರೌಂಡರ್ ಆಟ ಪ್ರದರ್ಶಿಸಿ ಗಮನ ಸೆಳೆದರು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

‘ರಾಕೆಟ್ ಥ್ರೋ’ ಮೂಲಕ ಸ್ಟಂಪ್ ಮುರಿದ ಪಾಂಡ್ಯ!

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ‘ರಾಕೆಟ್ ಥ್ರೋ’ಗೆ ಸಂಜು ಸ್ಯಾಮ್ಸನ್ ರನ್ ಔಟ್ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಸಂಜು ಸ್ಯಾಮ್ಸನ್ ಅವರನ್ನು ‘ರಾಕೆಟ್ ಥ್ರೋ’ ಮೂಲಕ ರನ್ ಔಟ್ ಮಾಡಿದ್ದು ಮಾತ್ರವಲ್ಲದೆ ಸ್ಟಂಪ್ ಅನ್ನು ಮುರಿದರು. ಈ ದೃಶ್ಯವನ್ನು ಕಂಡು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೆಲ್ಲರೂ ಪುಳಕಿತರಾದರು.

ಇದನ್ನೂ ಓದಿ: Mumbai Indians : ರೋಹಿತ್ ಫಾರ್ಮ್ ಬಗ್ಗೆ ಕೋಚ್ ಜಯವರ್ಧನೆ ಪ್ರತಿಕ್ರಿಯೆ!

ಸ್ವಲ್ಪ ಹೊತ್ತು ಪಂದ್ಯ ನಿಲ್ಲಿಸಬೇಕಾಯಿತು

ಸ್ಯಾಮ್ಸನ್ ಮಿಡ್-ಆಫ್ ಕಡೆಗೆ ಶಾಟ್ ಹೊಡೆದು ರನ್ ಕದಿಯಲು ಪ್ರಯತ್ನಿಸಿದ್ದರು. ಆದರೆ ಅಲ್ಲಿಯೇ ಇದ್ದ ಹಾರ್ದಿಕ್ ಪಾಂಡ್ಯ ತಮ್ಮ ವೇಗದ ಫೀಲ್ಡಿಂಗ್‍ನ ದರ್ಶನ ಮಾಡಿದರು. ನೇರವಾಗಿ ಚೆಂಡನ್ನು ಎಸೆಯುವ ಮೂಲಕ ಸ್ಯಾಮ್ಸನ್ ಅವರನ್ನು ಔಟ್ ಮಾಡಿದರು. ಈ ವೇಳೆ ಹಾರ್ದಿಕ್ ಎಸೆತಕ್ಕೆ ಮಿಡಲ್ ಸ್ಟಂಪ್ ಮುರಿದಿದ್ದರಿಂದ ಪಂದ್ಯವನ್ನು ಕೆಲಕಾಲ ನಿಲ್ಲಿಸಬೇಕಾಯಿತು. ಸಂಜು ಸ್ಯಾಮ್ಸನ್ 11 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು.

ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಹಾರ್ದಿಕ್ ಮಿಂಚು

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು  ಉತ್ತಮ ಬೌಲಿಂಗ್ ಮೂಲಕ ಆಲ್‍ರೌಂಡರ್ ಆಟ ಪ್ರದರ್ಶಿಸಿದರು. ಪಾಂಡ್ಯ 52 ಎಸೆತಗಳಲ್ಲಿ 87 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಇದಲ್ಲದೇ ಬೌಲಿಂಗ್‍ನಲ್ಲಿಯೂ ಪಾಂಡ್ಯ 1 ವಿಕೆಟ್ ಕಿತ್ತು ಮಿಂಚಿದರು.

ಇದನ್ನೂ ಓದಿ: RR vs GT, IPL 2022: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ಗೆ ಭರ್ಜರಿ ಗೆಲುವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News