Player Injury : ರೋಹಿತ್ ಶರ್ಮಾಗೆ ಬಿಗ್ ಶಾಕ್, ಇದ್ದಕ್ಕಿದ್ದಂತೆ ಟೀಂನಿಂದ ಈ ಆಟಗಾರ ಹೊರಗೆ!

IPL 2023 : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ನಡೆದಿದೆ. ಧುರಂಧರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಅವರಿಗೆ ದೊಡ್ಡ ಆಘಾತ ಎದುರಾಗಿದೆ.

Written by - Channabasava A Kashinakunti | Last Updated : Mar 11, 2023, 08:12 PM IST
  • ಐಪಿಎಲ್‌ನ ಸಂಪೂರ್ಣ ಸೀಸನ್‌ನಿಂದ ಈ ಆಟಗಾರ ಔಟ್
  • ಏಕದಿನ ಸರಣಿಯಿಂದಲೂ ಹೊರಗೆ
  • ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ರಿಚರ್ಡ್ಸನ್
Player Injury : ರೋಹಿತ್ ಶರ್ಮಾಗೆ ಬಿಗ್ ಶಾಕ್, ಇದ್ದಕ್ಕಿದ್ದಂತೆ ಟೀಂನಿಂದ ಈ ಆಟಗಾರ ಹೊರಗೆ! title=

Rohit Sharma Team Mumbai Indians, IPL 2023 : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂರು ದಿನಗಳ ಆಟ ನಡೆದಿದೆ. ಧುರಂಧರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಈ ಸರಣಿಯಲ್ಲಿ ಟೀಂ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಇದೇ ವೇಳೆ ಅವರಿಗೆ ದೊಡ್ಡ ಆಘಾತ ಎದುರಾಗಿದೆ.

ಐಪಿಎಲ್‌ನ ಸಂಪೂರ್ಣ ಸೀಸನ್‌ನಿಂದ ಈ ಆಟಗಾರ ಔಟ್

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದಾರೆ. ತಮ್ಮ ತಂಡವನ್ನು ಸೇರಿಕೊಳ್ಳಲು ತಯಾರಿ ನಡೆಸುತ್ತಿರುವ ವೇಗಿ ಜ್ಯೆ ರಿಚರ್ಡ್‌ಸನ್ ಅವರು ಗಾಯದ ಕಾರಣ ಐಪಿಎಲ್‌ನ ಸಂಪೂರ್ಣ ಮುಂಬರುವ ಋತುವಿನಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು (ಸ್ನಾಯು ಸೆಳೆತ) ಶಸ್ತ್ರಚಿಕಿತ್ಸೆಯಿಂದಾಗಿ ಆಸ್ಟ್ರೇಲಿಯಾದ ವೇಗಿ ಝೈ ರಿಚರ್ಡ್‌ಸನ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಆಡುತ್ತಿಲ್ಲ.

ಇದನ್ನೂ ಓದಿ : IND vs AUS : 2023 ರಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ ಕೀರ್ತಿ ಶುಭಮನ್ ಗಿಲ್'ಗೆ!

ಏಕದಿನ ಸರಣಿಯಿಂದಲೂ ಹೊರಗೆ

26ರ ಹರೆಯದ ರಿಚರ್ಡ್‌ಸನ್ ಮಾರ್ಚ್ 31ರಿಂದ ಆರಂಭವಾಗಲಿರುವ ಐಪಿಎಲ್ 16ನೇ ಋತುವಿನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಬೇಕಿತ್ತು. ಈ ಗಾಯದಿಂದಾಗಿ ಅವರು ಮಾರ್ಚ್ 17 ರಂದು ಪ್ರಾರಂಭವಾಗುವ ಭಾರತ ವಿರುದ್ಧದ ಮೂರು ಪಂದ್ಯಗಳ ODI ಸರಣಿಯಿಂದಲೂ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯವು ಮತ್ತೆ ಹೊರಹೊಮ್ಮಿದ ನಂತರ ಕಳೆದ ವಾರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ರಿಚರ್ಡ್ಸನ್

ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಿಚರ್ಡ್ಸನ್, 'ಗಾಯವು ಆಟದ ದೊಡ್ಡ ಭಾಗವಾಗಿದೆ, ಇದು ಸತ್ಯ ಆದರೆ ನಿರಾಶಾದಾಯಕವಾಗಿದೆ. ಆದಾಗ್ಯೂ, ನಾನು ಈಗ ನನ್ನ ಆಯ್ಕೆಯ ಕೆಲಸಗಳನ್ನು ಮಾಡಬಹುದಾದ ಸ್ಥಾನದಲ್ಲಿದ್ದೇನೆ. ನಾನು ಇನ್ನೂ ಉತ್ತಮ ಆಟಗಾರನಾಗಲು ಶ್ರಮಿಸಬೇಕಾಗಿದೆ. ಒಂದು ಹೆಜ್ಜೆ ಹಿಂದೆ, ಎರಡು ಹೆಜ್ಜೆ ಮುಂದೆ ಎಂದು ಬರೆದುಕೊಂಡಿದ್ದಾರೆ. ರಿಚರ್ಡ್ಸನ್ ಇದುವರೆಗೆ ಆಸ್ಟ್ರೇಲಿಯಾ ಪರ 3 ಟೆಸ್ಟ್, 15 ODI ಮತ್ತು 18 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ : Gautam Gambhir: ಕ್ರಿಕೆಟ್ ಲೋಕದ ಬದ್ಧವೈರಿಗಳು ‘ಶೇಕ್ ಹ್ಯಾಂಡ್’ ಕೊಟ್ಟ ತಕ್ಷಣ ಓಡಿಹೋಗಿ ಈ ಕೆಲಸ ಮಾಡ್ತಾರೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News