Gautam Gambhir Shaking Hands With Shahid Afridi: ಮಾರ್ಚ್ 10ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಮೂರನೇ ಆವೃತ್ತಿಯು ದೋಹಾದಲ್ಲಿ ಪ್ರಾರಂಭವಾಗಿದೆ. ಇದರ ಮೊದಲನೇ ಪಂದ್ಯ ಟೀಂ ಇಂಡಿಯಾದ ಮಾಜಿ ಮಾರಕ ಬ್ಯಾಟರ್ ಗೌತಮ್ ಗಂಭೀರ್ ಅವರ ಇಂಡಿಯಾ ಮಹಾರಾಜಸ್ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಏಷ್ಯಾ ಲಯನ್ಸ್ ನಡುವೆ ನಡೆದಿದೆ.
ಇದನ್ನೂ ಓದಿ: Gautam Gambhir: ಗೌತಮ್ ಗಂಭೀರ್ ಹೆಲ್ಮೆಟ್’ಗೆ ಗಟ್ಟಿಯಾಗಿ ತಗುಲಿದ ಬಾಲ್: ತಕ್ಷಣವೇ ಪಾಕ್ ಆಟಗಾರ ಮಾಡಿದ್ದೇನು ಗೊತ್ತಾ?
ಗಂಭೀರ್ ಅವರ 39 ಎಸೆತಗಳಲ್ಲಿ 54 ರನ್ ಗಳಿಸಿದ ಹೊರತಾಗಿಯೂ, ಭಾರತ ತಂಡವು 166 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಗಿ 9 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿದೆ. 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 156 ರನ್ ಗಳಿಸಿದೆ.
ಇನ್ನು ಪಂದ್ಯದ ವೇಳೆ ಎಲ್ಲಕ್ಕಿಂತ ಹೆಚ್ಚಾಗಿ ಹೈಲೈಟ್ ಆಗಿದ್ದು, ಈ ಬದ್ಧ ವೈರಿಗಳ ಶೇಕ್ ಹ್ಯಾಂಡ್. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರಸ್ಪರ ದ್ವೇಷಕ್ಕೆ ಹೆಸರುವಾಸಿಯಾದ ಈ ಇಬ್ಬರು ಆಟಗಾರರ ಮುಖದಲ್ಲಿ ನಗು ಕಾಣಿಸುತ್ತಿದೆ. ಆದರೆ ಗೌತಮ್ ಗಂಭೀರ್ ಮಾತ್ರ ಹೆಸರಿಗೆ ತಕ್ಕಂತೆ ಗಂಭೀರವಾಗಿದ್ದಾರೆ.
Gautam Gambhir Vs Shahid Afridi team in the Legends League Cricket. pic.twitter.com/6RRqVlcoBW
— Mufaddal Vohra (@mufaddal_vohra) March 10, 2023
ಈ ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಟ್ರೋಲಿಗರು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಒಂದು ಪೋಸ್ಟ್ ನಲ್ಲಿ, ಈ ಇಬ್ಬರು ಆಟಗಾರರು ಶೇಕ್ ಹ್ಯಾಂಡ್ ಮಾಡಿದ ಬಳಿಕ ಓಡಿಹೋಗಿ ಕೈ ತೊಳೆದುಕೊಳ್ಳಬಹುದು ಎಂದು ತಮಾಷೆ ಮಾಡಿದ್ದಾನೆ.
Gambhir’s face shows he’s gonna do this next pic.twitter.com/t0kD02oG86
— Rahul Anand (@rah2309) March 10, 2023
ಇದನ್ನೂ ಓದಿ: Video: ಅಭಿಮಾನಿಗೆ ಜೋರಾಗಿ ಹೊಡೆದ ಖ್ಯಾತ ಕ್ರಿಕೆಟಿಗ... ಟೋಪಿ ಮುಟ್ಟಿದ್ದಕ್ಕೆ ಈ ಕೋಪ!
ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಯನ್ಸ್, ಮಿಸ್ಬಾ ಉಲ್ ಹಕ್ ಅವರು 50 ಎಸೆತಗಳಲ್ಲಿ 73 ಮತ್ತು ಉಪುಲ್ ತರಂಗ ಅವರು 39 ಎಸೆತಗಳಲ್ಲಿ 40 ರನ್ ಬಾರಿಸಿದರು. ಇದರ ನೆರವಿನಿಂದ ಆರು ವಿಕೆಟ್‌ಗಳ ನಷ್ಟಕ್ಕೆ ಒಟ್ಟು 165 ರನ್ ಗಳಿಸಿತು. 14ನೇ ಓವರ್’ನ ಮೊದಲ ಎಸೆತದಲ್ಲಿ ಗಂಭೀರ್ ನಿರ್ಗಮಿಸುವವರೆಗೂ ಇಂಡಿಯಾ ಮಹಾರಾಜಸ್ ಗೆಲುವಿನ ಭರವಸೆಯಲ್ಲಿತ್ತು. ಆದರೆ ಮುಂದೆ ಸೋಲು ಕಾಣಬೇಕಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.