IPL 2024: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾನೆ ಈ ವಿಧ್ವಂಸಕ ಬ್ಯಾಟ್ಸ್ ಮನ್, ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದಾನೆ!

Indian Premier League 2024: ಮುಂಬೈ ಇಂಡಿಯನ್ಸ್ ತಂಡದಲ್ಲಿ ಓರ್ವ ಬ್ಯಾಟ್ಸ್ ಮನ್ ಇದ್ದು, ಆತನ ಬ್ಯಾಟಿಂಗ್ ಶೈಲಿ ಕಂಡು ವಿಶ್ವದ ಬೌಲರ್ಗಳೆಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಇದೀಗ ಈ ಆಟಗಾರನ ಕಾರಣವೇ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ಪ್ರಶಸ್ತಿಯನ್ನು ಸಹ ಗೆಲ್ಲಬಹುದು ಎನ್ನಲಾಗುತ್ತಿದೆ. ಈ ಆಟಗಾರ ತನ್ನ ಆಟವಾಡಿದರೆ, ಮುಂಬೈ ಇಂಡಿಯನ್ಸ್‌ಗೆ ಐಪಿಎಲ್ 2024 ಟ್ರೋಫಿ ಗೆಲ್ಲುವುದು ಕಷ್ಟದ ಕೆಲಸವೇನಲ್ಲ ಎನ್ನಲಾಗುತ್ತಿದೆ. (IPL 2024 News In Kannada)  

Written by - Nitin Tabib | Last Updated : Mar 17, 2024, 04:37 PM IST
  • ಡೆವಾಲ್ಡ್ ಬ್ರೆವಿಸ್ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾನೆ.
  • ಆತನ ಒಟ್ಟಾರೆ T20 ದಾಖಲೆಯ ಬಗ್ಗೆ ಹೇಳುವುದಾದರೆ,
  • ಡೆವಾಲ್ಡ್ ಬ್ರೆವಿಸ್ 59 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳನ್ನು ಒಳಗೊಂಡಂತೆ 1303 ರನ್ ಗಳಿಸಿದ್ದಾನೆ.
IPL 2024: ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾನೆ ಈ ವಿಧ್ವಂಸಕ ಬ್ಯಾಟ್ಸ್ ಮನ್, ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದಾನೆ! title=

IPL 2024 ರ ಆವೃತ್ತಿ  ಮಾರ್ಚ್ 22 ರಿಂದ ಆರಂಭಬಾಗಲಿದೆ.  ಐಪಿಎಲ್ 2024 ರ ಆರಂಭಿಕ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಐದು ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿರುವ ಮುಂಬೈ ಇಂಡಿಯನ್ಸ್ ಐಪಿಎಲ್ 2024 ರಲ್ಲಿ ತನ್ನ ಅಭಿಯಾನವನ್ನು ಮಾರ್ಚ್ 24 ರಂದು ಆರಂಭಿಸಲಿದೆ. ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ(Sports News In Kannada)

ಮುಂಬೈ ಇಂಡಿಯನ್ಸ್ ತಂಡದ ವಿಧ್ವಂಸಕ ಬ್ಯಾಟ್ಸ್‌ಮನ್ ಈತ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಓರ್ವ ಆಟಗಾರನಿದ್ದು, ಆತನ ಬ್ಯಾಟಿಂಗ್ ಶೈಲಿ ಕಂಡು ವಿಶ್ವದ ಎಲ್ಲಾ ಬೌಲರ್ ಗಳು ಬೆಚ್ಚಿಬಿದ್ದಿದ್ದರೆ. ಈ ಆಟಗಾರನಿಂದಲೇ ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಗೆಲ್ಲಲಿದೆ ಎನ್ನಲಾಗುತ್ತಿದೆ.  ಈ ಆಟಗಾರ ಒಂದೊಮ್ಮೆ ತನ್ನ ಕೆಲಸ ಮಾಡಿದರೆ ಮುಂಬೈ ಇಂಡಿಯನ್ಸ್‌ಗೆ ಐಪಿಎಲ್ 2024 ಟ್ರೋಫಿ ಗೆಲ್ಲುವುದು ಕಷ್ಟದ ಕೆಲಸವೇನಲ್ಲಎನ್ನಲಾಗುತ್ತಿದೆ.  ಹೌದು, ಮುಂಬೈ ಇಂಡಿಯನ್ಸ್ ತಂಡವು ದಕ್ಷಿಣ ಆಫ್ರಿಕಾದ ಸ್ಫೋಟಕ  ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) ಅವರನ್ನು ತನ್ನ ತಂಡದಲ್ಲಿ ಶಾಮೀಲುಗೊಳಿಸಿದೆ.

ಇದನ್ನೂ ಓದಿ-IPL 2024: 'ಇಲ್ಲಿ ಯಾರೂ ಸಿನಿಯರ್... ಜೂನಿಯರ್ ಇಲ್ಲ...; ಹೀಗಂತ ಗೌತಮ್ ಗಂಭೀರವಾಗಿ ಹೇಳಿದ್ಯಾರಿಗೆ!

ಡೆವಾಲ್ಡ್ ಬ್ರೆವಿಸ್ 35 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ
ಡೆವಾಲ್ಡ್ ಬ್ರೆವಿಸ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಎಂದು ಪರಿಗಣಿಸಲಾಗುತ್ತದೆ. ಆತ ಕ್ರೀಸ್‌ಗೆ ಕಾಲಿಟ್ಟ ತಕ್ಷಣ ವಿದ್ವಾಂಸಕ ಆಟ ಆರಂಭಿಸುತ್ತಾನೆ. 2022 ರಲ್ಲಿ ಆಡಿದ CSA T-20 ಚಾಲೆಂಜ್‌ನಲ್ಲಿ, ಡೆವಾಲ್ಡ್ ಬ್ರೆವಿಸ್ ಕೇವಲ 35 ಎಸೆತಗಳಲ್ಲಿ ಶತಕ ಗಳಿಸಿದ್ದರು (Fastest Century). ಡೆವಾಲ್ಡ್ ಬ್ರೂಯಿಸ್ 57 ಎಸೆತಗಳಲ್ಲಿ 162 ರನ್‌ಗಳ ಇನಿಂಗ್ಸ್‌ (Dewald Brevis 162 scorecard) ಆಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದಾನೆ. 20ರ ಹರೆಯದ ಈ  ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿ ಬೌಲರ್‌ಗಳನ್ನು ಮೂಕವಿಸ್ಮಿತರನ್ನಾಗಿಸುತ್ತಾನೆ.

ಇದನ್ನೂ ಓದಿ-IPL 2024: ಮತ್ತೊಮ್ಮೆ ದೇಶದ ಹೊರಗೆ ಆಯೋಜನೆಯಾಗಲಿದೆಯಾ ಐಪಿಎಲ್? ಈ ದೇಶದಲ್ಲಿ ಎರಡನೇ ಹಂತದ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಿದ್ಧತೆ!

ಡೆವಾಲ್ಡ್ ಬ್ರೆವಿಸ್‌ನ ಇನ್ನೊಂದು ಹೆಸರು ಬೇಬಿ ಎಬಿ (Baby AB)
ಡೆವಾಲ್ಡ್ ಬ್ರೆವಿಸ್ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾನೆ. ಆತನ ಒಟ್ಟಾರೆ T20 ದಾಖಲೆಯ ಬಗ್ಗೆ ಹೇಳುವುದಾದರೆ, ಡೆವಾಲ್ಡ್ ಬ್ರೆವಿಸ್ 59 ಪಂದ್ಯಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳನ್ನು ಒಳಗೊಂಡಂತೆ 1303 ರನ್ ಗಳಿಸಿದ್ದಾನೆ. ಟಿ20 ಕ್ರಿಕೆಟ್‌ನಲ್ಲಿ ಡೆವಾಲ್ಡ್ ಬ್ರೆವಿಸ್ ಅವರ ಅತ್ಯುತ್ತಮ ವೈಯಕ್ತಿಕ ಇನ್ನಿಂಗ್ಸ್ 162 ರನ್ ಗಳದ್ದಾಗಿದೆ (Dewald Brevis highest score). ಇದು ಈ ಬ್ಯಾಟ್ಸ್‌ಮನ್ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರನ್ನು ಬೇಬಿ ಎಬಿ ಡಿವಿಲಿಯರ್ಸ್ ಎಂದೂ ಕರೆಯಲಾಗುತ್ತದೆ. ಡೆವಾಲ್ಡ್ ಬ್ರೆವಿಸ್ ಐಪಿಎಲ್‌ಗೆ ಪ್ರವೇಶಿಸುವ ಮೊದಲು ಸುಮಾರು 2 ವರ್ಷಗಳ ಕಾಲ ಎಬಿ ಡಿವಿಲಿಯರ್ಸ್ ಅಡಿಯಲ್ಲಿ ಅನೇಕ ನೆಟ್ ಸೆಷನ್‌ಗಳನ್ನು ನಡೆಸಿದ್ದಾರೆ. ಬೇಬಿ ಎಬಿ ಡೆವಾಲ್ಡ್ ಬ್ರೂವಿಸ್ ಅವರು ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ತಮ್ಮ ಫೇವರೇಟ್ ಎಂದು ಪರಿಗಣಿಸುತ್ತಾನೆ. ಡೆವಾಲ್ಡ್ ಬ್ರೆವಿಸ್ 2022 ರಿಂದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾನೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News