IPL Auction 2023 : ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೆಲೆಗೆ ಖರೀದಿಯಾಗಲಿದ್ದಾನೆ ಈ ಸ್ಪೋಟಕ್ ಆಟಗಾರ!

Rehan Ahmed : 18 ವರ್ಷದ ರೆಹಾನ್ ಅಹ್ಮದ್ ತನ್ನ ಚೊಚ್ಚಲ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು 48 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು.

Written by - Channabasava A Kashinakunti | Last Updated : Dec 21, 2022, 03:56 PM IST
  • ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜು
  • ಈ ಆಟಗಾರ ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೆಲೆಗೆ ಖರೀದಿ
IPL Auction 2023 : ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೆಲೆಗೆ ಖರೀದಿಯಾಗಲಿದ್ದಾನೆ ಈ ಸ್ಪೋಟಕ್ ಆಟಗಾರ! title=

IPL Auction 2023 : ಪಾಕಿಸ್ತಾನ ವಿರುದ್ಧದ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಆಯ್ಕೆಯಾದರೆ ಉತ್ತಮ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಮ್ ಹೇಳಿದ್ದಾರೆ. 

18 ವರ್ಷದ ರೆಹಾನ್ ಅಹ್ಮದ್ ತನ್ನ ಚೊಚ್ಚಲ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು 48 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು.

ಇದನ್ನೂ ಓದಿ : IND vs AUS Women Cricket: ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಕ್ರಿಕೆಟ್ ಟೀಂ ಸೋಲು ಕಾಣಲು ಕಾರಣ ಇದುವೇ! ನಾಯಕಿ ಹೇಳಿದ್ದೇನು?

ಈ ಆಟಗಾರ ಐಪಿಎಲ್ ಹರಾಜಿನಲ್ಲಿ ಭರ್ಜರಿ ಬೆಲೆಗೆ  ಖರೀದಿ

ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೆ ರೆಹಾನ್ ಅಹ್ಮದ್ ಕೂಡ ನೋಂದಾಯಿಸಿಕೊಂಡಿದ್ದಾರೆ. ಇವರ ಮೂಲ ಬೆಲೆ 40 ಲಕ್ಷ ರೂ. ಮಂಗಳವಾರ ನಡೆದ ಬಿಬಿಸಿ ಟೆಸ್ಟ್ ಪಂದ್ಯದ ವಿಶೇಷ ಕಾರ್ಯಕ್ರಮದಲ್ಲಿ ಇಂಗ್ಲೆಂಡ್‌ನ ಟೆಸ್ಟ್ ತಂಡದ ಕೋಚ್ ಬ್ರೆಂಡನ್ ಮೆಕಲಮ್, 'ರೆಹಾನ್ ಅಹ್ಮದ್ ಐಪಿಎಲ್‌ಗೆ ಆಯ್ಕೆಯಾದರೆ, ಅದು ಅದ್ಭುತವಾಗಿದೆ. ಇದು ಸಂಭವಿಸಿದಲ್ಲಿ ಅದು ಅದ್ಭುತವಾಗಿರುತ್ತದೆ ಎಂದು ಹೇಳಿದ್ದಾರೆ.

ಪಾಕ್ ವಿರುದ್ಧ ಅದ್ಬುತ ಪ್ರದರ್ಶನ

ಈ ಬಗ್ಗೆ ಮಾತನಾಡಿದ ರೆಹಾನ್ ಅಹ್ಮದ್, 'ಇತರ ಆಟಗಾರರೊಂದಿಗೆ ಆಡಲು ಅವಕಾಶ ಸಿಗಬೇಕು ಮತ್ತು ಅವರಿಂದ ಅನುಭವ ಪಡೆಯಬೇಕು. ಬೇರೆ ಯಾವುದೇ 18 ವರ್ಷದ ಆಟಗಾರನಿಗೆ ಅಂತಹ ಅವಕಾಶ ಸಿಗುತ್ತದೆಯೇ? ಅವರು ಸಂಪೂರ್ಣ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ ಮಂಗಳವಾರ ಇಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಮಾಡಿದ್ದರು.

ತವರಿನಲ್ಲಿ ಪಾಕ್ ಟೀಂ 3-0 ಗೋಲುಗಳಿಂದ ವೈಟ್‌ವಾಶ್ 

ಮುಂದಿನ ವರ್ಷದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ) ಫೈನಲ್‌ಗೆ ತಲುಪುವ ಪಾಕಿಸ್ತಾನದ ಸಾಧ್ಯತೆಗಳು ಮಂಗಳವಾರ ಇಂಗ್ಲೆಂಡ್ ವಿರುದ್ಧ 3-0 ಅಂತರದ ಸರಣಿ ಸೋಲಿನ ನಂತರ ಪಾಯಿಂಟ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದು ದೊಡ್ಡ ಹೊಡೆತವನ್ನು ಅನುಭವಿಸಿದವು. ನಾಲ್ಕನೇ ದಿನವಾದ ಮಂಗಳವಾರ ಬೆಳಗ್ಗೆ ಬೆನ್ ಡಕೆಟ್ ಮತ್ತು ಬೆನ್ ಸ್ಟೋಕ್ಸ್ ಅವರು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಎಂಟು ವಿಕೆಟ್‌ಗಳ ಆರಾಮದಾಯಕ ಜಯವನ್ನು ತಂದುಕೊಟ್ಟರು. ತವರಿನಲ್ಲಿ ಪಾಕಿಸ್ತಾನ 3-0 ಅಂತರದಲ್ಲಿ ವೈಟ್‌ವಾಶ್ ಆಗಿದ್ದು ಇದೇ ಮೊದಲು ಎಂದು ಹೇಳಬಹುದು.

ಇದನ್ನೂ ಓದಿ : WATCH: ಇಂಜಮಾಮ್ ಉಲ್ ಹಕ್ ಅಬ್ಬರದ ಹೊಡೆತಕ್ಕೆ ನಾಲಿಗೆ ಕಚ್ಚಿದ ಆಫ್ರಿದಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News