IPL 2023, Rohit Sharma: ಮುಂಬೈ ಇಂಡಿಯನ್ಸ್ ಐಪಿಎಲ್ 2023ರ 25 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅನ್ನು 14 ರನ್’ಗಳಿಂದ ಸೋಲಿಸುವ ಮೂಲಕ ಋತುವಿನ ಸತತ ಮೂರನೇ ಗೆಲುವನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಅವರ ಮೊದಲ ಐಪಿಎಲ್ ಅರ್ಧಶತಕ ಮತ್ತು ನಂತರ ಅರ್ಜುನ್ ತೆಂಡೂಲ್ಕರ್ ಅವರ ಅದ್ಭುತ 20 ನೇ ಓವರ್’ನ ಸಹಾಯದಿಂದ ಮುಂಬೈ ಗೆಲುವು ಸಾಧಿಸಿದೆ ಎನ್ನಬಹುದು. ಆದರೆ ಈ ಪಂದ್ಯದಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: RCB vs CSK: ಧೋನಿಯನ್ನ ತಬ್ಬಿ ಮುದ್ದಾಡಿದ ವಿರಾಟ್: ಈ ಬಾಂಧವ್ಯದ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಿ
ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಟಾಸ್ ಗೆದ್ದು ಮುಂಬೈ ತಂಡವನ್ನು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿತು. ಪಂದ್ಯದ ನಾಲ್ಕನೇ ಓವರ್’ನಲ್ಲಿ, ರೋಹಿತ್ ಅವರ ಸಹ ಆರಂಭಿಕ ಆಟಗಾರ ಇಶಾನ್ ಕಿಶನ್ ಮಿಡ್-ಆಫ್ ಕಡೆಗೆ ಬಲವಾದ ಹೊಡೆತವನ್ನು ಹೊಡೆದರು. ಆದರೆ ಚೆಂಡು ರೋಹಿತ್ ಅವರ ಪ್ಯಾಡ್’ಗೆ ಬಡಿದ ಕಾರಣ ಚೆಂಡು ನೆಲಕ್ಕೆ ಬಿತ್ತು. ಇದರ ವಿಡಿಯೋ ನೋಡಿದ್ರೆ, ಘಟನೆಯ ಭೀಕರತೆ ನಿಮ್ಮ ಅರಿವಿಗೆ ಬರುತ್ತದೆ.
— binu (@sachhikhabars) April 18, 2023
ಐಪಿಎಲ್’ನಲ್ಲಿ 6000 ರನ್ ಬಾರಿಸಿದ ರೋಹಿತ್:
ಈ ಪಂದ್ಯದಲ್ಲಿ ರೋಹಿತ್ ಶರ್ಮಾ 18 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 28 ರನ್ ಗಳಿಸಿದರು. ಈ ಮೂಲಕ ರೋಹಿತ್ ಶರ್ಮಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 6000 ರನ್ ಪೂರೈಸಿದ್ದಾರೆ. ಭಾರತದ ಮೂರನೇ ಬ್ಯಾಟ್ಸ್‌ಮನ್ ಮತ್ತು ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಮಾತ್ರ ಐಪಿಎಲ್’ನಲ್ಲಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ: RCB vs CSK: ಮೂರನೇ ಗೆಲುವಿಗೆ ಬೆಂಗಳೂರು-ಚೆನ್ನೈ ಫೈಟ್! ಹೀಗಿರಲಿದೆ Playing XI; ಪಿಚ್ ರಿಪೋರ್ಟ್ ಇಲ್ಲಿದೆ
ಮುಂಬೈ ಇಂಡಿಯನ್ಸ್’ಗೆ ಹ್ಯಾಟ್ರಿಕ್ ಜಯ:
ಮುಂಬೈ ಇಂಡಿಯನ್ಸ್ ಸತತ ಎರಡು ಸೋಲುಗಳೊಂದಿಗೆ IPL 2023 ಸೀಸನ್’ನ್ನು ಪ್ರಾರಂಭಿಸಿತು. ಆದರೆ ಪುನರಾಗಮನ ಮಾಡಿದ ಮುಂಬೈ ಇಂಡಿಯನ್ಸ್, ಸತತ ಮೂರು ಪಂದ್ಯಗಳನ್ನು ಗೆದ್ದಿತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ. ಈ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 178 ರನ್’ಗಳಿಗೆ ಆಲೌಟ್ ಆಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.