Gujarat Titans vs Mumbai Indians: ಗುಜರಾತ್ ಟೈಟಾನ್ಸ್ ಗೆ 55 ರನ್ ಗಳ ಭರ್ಜರಿ ಗೆಲುವು

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು 55 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

Written by - Zee Kannada News Desk | Last Updated : Apr 26, 2023, 12:18 AM IST
  • ಇದಲ್ಲದೆ ಗುಜರಾತ್ ಪರವಾಗಿ ಮಿಲ್ಲರ್ 46 ಅಭಿನವ್ ಮನೋಹರ್ 42 ರನ್ ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದರು
  • ಅಂತಿಮವಾಗಿ ಗುಜರಾತ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು
Gujarat Titans vs Mumbai Indians: ಗುಜರಾತ್ ಟೈಟಾನ್ಸ್ ಗೆ 55 ರನ್ ಗಳ ಭರ್ಜರಿ ಗೆಲುವು title=

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು 55 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ʼಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆ‌ʼ..! ಮಾಧ್ಯಮಗಳಿಗೆ ʼಡಿಬಾಸ್‌ʼ ಬಹಿರಂಗ ಪತ್ರ

ಟಾಸ್ ಗೆದ್ದು ಗುಜರಾತ್ ಟೈಟಾನ್ಸ್ ತಂಡಕ್ಕೆ ಬ್ಯಾಟಿಂಗ್ ಮುಂಬೈ ಇಂಡಿಯನ್ಸ್ ತಂಡವು ಆರಂಭದಲ್ಲಿ ತಂಡದ ಮೊತ್ತ 12 ಆಗಿದ್ದಾಗ ವ್ರುದ್ದಿಮಾನ್ ಸಹಾ ವಿಕೆಟ್ ತೆಗೆದುಕೊಳ್ಳುವ ಮೂಲಕ ಆಘಾತ ನೀಡಿತು. ಆದರೆ ಇದಾದ ನಂತರ ಗುಜರಾತ್ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶುಬ್ಮನ್ ಗಿಲ್ ಕೇವಲ 34 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೊಂದಿಗೆ 56 ರನ್ ಗಳಿಸಿದರು.

ಇದನ್ನೂ ಓದಿ: ಮಹಿಳೆಯರ ಜೊತೆ ಪ್ರಿಯಾಂಕ ಗಾಂಧಿ ಸಂವಾದ- ಇಂದಿರಾ ಹೊಗಳಿದಾಕೆಗೆ ಪ್ರೀತಿಯ ಅಪ್ಪುಗೆ

ಇದಲ್ಲದೆ ಗುಜರಾತ್ ಪರವಾಗಿ ಮಿಲ್ಲರ್ 46 ಅಭಿನವ್ ಮನೋಹರ್ 42 ರನ್ ಗಳಿಸುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದರು. ಅಂತಿಮವಾಗಿ ಗುಜರಾತ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು.

ಗುಜರಾತ್ ತಂಡವು ನೀಡಿದ 208 ರನ್ ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಅಂತಿಮವಾಗಿ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 152 ರನ್ ಗಳನ್ನು ಮಾತ್ರ ಗಳಿಸಿತು.ಆ ಮೂಲಕ 55 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತು.ಮುಂಬೈ ತಂಡದ ಪರವಾಗಿ ನೆಹಾಲ್ ವದೇರಾ 40,ಕ್ಯಾಮರೂನ್ ಗ್ರೀನ್ 33 ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನು ಅಂತಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News