IPL 2023: “ಅವನಲ್ಲಿ ಪ್ರತಿಭೆ ಇದೆ ಆದರೆ...” ಗಿಲ್ ಕುರಿತು ಆಘಾತಕಾರಿ ಹೇಳಿಕೆ ನೀಡಿದ ಟೀಂ ಇಂಡಿಯಾದ ಈ ದಿಗ್ಗಜ!

Kapil Dev Shocking Statement on Shubman Gill: 1983 ರ ವಿಶ್ವಕಪ್ ಅನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದ ಮಾಜಿ ನಾಯಕ ಕಪಿಲ್ ದೇವ್, ಐಪಿಎಲ್ 2023 ರ ಫೈನಲ್ ಪಂದ್ಯದ ಮೊದಲು ಶುಭ್ಮನ್ ಗಿಲ್ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. “ಅವರು ಪ್ರತಿಭಾವಂತರು, ಆದರೆ ಇದೀಗ ಅವರನ್ನು ಯಾರೊಂದಿಗೂ ಹೋಲಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : May 28, 2023, 01:45 PM IST
    • ಐಪಿಎಲ್ 2023 ರ ಫೈನಲ್ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ
    • ಶುಭಮನ್ ಗಿಲ್ ಬಗ್ಗೆ ಮಾಜಿ ಭಾರತೀಯ ಅನುಭವಿ ಹೇಳಿಕೆಯೊಂದನ್ನು ನೀಡಿದ್ದಾರೆ
    • 1983 ರ ವಿಶ್ವಕಪ್ ಅನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದ ಮಾಜಿ ನಾಯಕ ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ
IPL 2023: “ಅವನಲ್ಲಿ ಪ್ರತಿಭೆ ಇದೆ ಆದರೆ...” ಗಿಲ್ ಕುರಿತು ಆಘಾತಕಾರಿ ಹೇಳಿಕೆ ನೀಡಿದ ಟೀಂ ಇಂಡಿಯಾದ ಈ ದಿಗ್ಗಜ!  title=
Shubman Gill

Kapil Dev Shocking Statement on Shubman Gill: ಐಪಿಎಲ್ 2023 ರ ವಿಜೇತ ತಂಡ ಯಾವುದೆಂದು ಇಂದು ತಿಳಿಯಲಿದೆ. ಐಪಿಎಲ್ 2023 ರ ಫೈನಲ್ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೇ 28 ರಂದು (ಇಂದು) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳ ಈವರೆಗಿನ ಪಯಣ ರೋಚಕವಾಗಿತ್ತು. ಈ ಮಧ್ಯೆ ಗುಜರಾತ್‌ ನ ಈ ಸೀಸನ್’ನ ಸ್ಟಾರ್ ಆಗಿದ್ದ ಶುಭಮನ್ ಗಿಲ್ ಬಗ್ಗೆ ಮಾಜಿ ಭಾರತೀಯ ಅನುಭವಿ ಹೇಳಿಕೆಯೊಂದನ್ನು ನೀಡಿದ್ದಾರೆ. “ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಆದರೆ ಈಗ ಅವರನ್ನು ಹೋಲಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತಿ ಹೆಚ್ಚು ಮಾರಾಟವಾದ ಕಾರಿದು.. ಕೇವಲ ರೂ.3 ಲಕ್ಷಕ್ಕೆ ಲಭ್ಯ

1983 ರ ವಿಶ್ವಕಪ್ ಅನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದ ಮಾಜಿ ನಾಯಕ ಕಪಿಲ್ ದೇವ್, ಐಪಿಎಲ್ 2023 ರ ಫೈನಲ್ ಪಂದ್ಯದ ಮೊದಲು ಶುಭ್ಮನ್ ಗಿಲ್ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. “ಅವರು ಪ್ರತಿಭಾವಂತರು, ಆದರೆ ಇದೀಗ ಅವರನ್ನು ಯಾರೊಂದಿಗೂ ಹೋಲಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ, ಮಾತನಾಡಿದ ಅವರು “ಅವರಿಗೆ ಇನ್ನೂ ಒಂದು ಸೀಸನ್ ನೀಡಬೇಕು ಎಂದು ನಾನು ಭಾವಿಸುತ್ತೇನೆ. ಅವರಲ್ಲಿ ಅಪಾರ ಪ್ರತಿಭೆಯಿದೆ. ಅವರು ಖಂಡಿತವಾಗಿಯೂ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ವಿರಾಟ್ ಕೊಹ್ಲಿ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ, ಆದರೆ ಇದೀಗ ಅವರನ್ನು ಹೋಲಿಸುವುದು ಸರಿಯಲ್ಲ” ಎಂದಿದ್ದಾರೆ.

“ಅವರ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ, ಆದರೆ ಭವಿಷ್ಯದಲ್ಲಿ ಅವರು ಈ ಫಾರ್ಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿದರು. “ವಿನೋದ್ ಕಾಂಬ್ಳಿ ಅವರ ಬಗ್ಗೆ ನಾನು ಹೇಳಲು ಬಯಸುತ್ತೇನೆ. ಬಹುಶಃ ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಿದ್ದರು” ಎಂದರು. ಶುಭ್ಮನ್ ಗಿಲ್ ಅವರು ಟೀಮ್ ಇಂಡಿಯಾಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇವರು ಕೇವಲ 23ರ ಹರೆಯದಲ್ಲಿ ಎಂತೆಂಥಾ ಸಾಧನೆಗಳನ್ನು ಮಾಡಿದ್ದಾರೆ. ಅನೇಕ ಹಿರಿಯ ಕ್ರಿಕೆಟಿಗರು, ಇವರನ್ನು ಸಚಿನ್ ಮತ್ತು ವಿರಾಟ್ ಕೊಹ್ಲಿ ನಂತರ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಖದ ಹೊಳಪು ಹೆಚ್ಚಿಸಲು ಅಕ್ಕಿ ತೊಳೆದ ನೀರಿಗೆ ಈ ವಸ್ತು ಬೆರೆಸಿ ಹಚ್ಚಿದರೆ ಸಾಕು!

IPL 2023 ರಲ್ಲಿ ಮಾರಕ ಬ್ಯಾಟಿಂಗ್:

ಗುಜರಾತ್ ಟೈಟಾನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಭಮನ್ ಗಿಲ್ ಅವರು ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಸತತ ಶತಕಗಳನ್ನು ಬಾರಿಸುವ ಮೂಲಕ ಮುಂಬರುವ ದಿನಗಳಲ್ಲಿ ಎಂತಹ ಆಟಗಾರನಾಗಲಿದ್ದಾರೆ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದರು. ಈ ಐಪಿಎಲ್‌ ನಲ್ಲಿ ಇದುವರೆಗೆ ಆಡಿರುವ 16 ಪಂದ್ಯಗಳಲ್ಲಿ 851 ರನ್ ಗಳಿಸಿದ್ದಾರೆ. ರನ್‌ ಗಳ ವಿಷಯದಲ್ಲಿ ಯಾವುದೇ ಬ್ಯಾಟ್ಸ್‌ ಮನ್‌ ಗಳು ಅವರಿಗೆ ಹತ್ತಿರವಾಗದ ಕಾರಣ ಅವರು ಈ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆಲ್ಲುವುದು ಖಚಿತವಾಗಿದೆ. ಈ ಋತುವಿನಲ್ಲಿ ಅವರ ಗರಿಷ್ಠ ಸ್ಕೋರ್ 129 ರನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News